ಬೆಂಗಳೂರು:ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸಂಪುಟ ರಚನೆ ಸವಾಲಾಗಿ ಪರಿಣಮಿಸಿದೆ. ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಲು ಸಿಎಂ ಸಜ್ಜಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಬೊಮ್ಮಾಯಿಗೆ ಹಲವರು ಮಹತ್ತರ ಸಲಹೆಗಳನ್ನು ಕೊಟ್ಟಿದ್ದಾರೆ.
ಸಂಪೂರ್ಣ ಕ್ಯಾಬಿನೆಟ್ ರಚನೆ ಮಾಡಿಕೊ. ವರಿಷ್ಠರ ಮುಂದೆ ರಾಜ್ಯದ ಸಮಸ್ಯೆ ವಿವರಿಸು. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬರ್ತಿದೆ. ಕೆಲ ಜಿಲ್ಲೆಗಳಲ್ಲಿ ನೆರೆ, ರಾಜ್ಯದಲ್ಲಿ ಕರೊನಾನಾ ಸಂಕಷ್ಟ ಎದುರಾಗಿದೆ. ಹೀಗಾಗಿ ಜಿಲ್ಲೆಯನ್ನ ಅಧಿಕಾರಿಗಳಿಂದಲೇ ನಿಭಾಯಿಸಲು ಸಾಧ್ಯವಿಲ್ಲ. ಸಂಪೂರ್ಣ ಕ್ಯಾಬಿನೆಟ್ ಇರಬೇಕು. ಕನಿಷ್ಠ 30 ಜನ ಶಾಸಕರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್​ನಿಂದ ಅನುಮತಿ ಪಡೆದುಕೊಂಡು ಬಾ. ಇನ್ನು ಇರೋ ಮೂರು ಸ್ಥಾನ ಮುಂದೆ ಸೇರಿಸಿಕೊಳ್ಳಬಹುದು ಎಂದು ಬೊಮ್ಮಾಯಿಗೆ ಬಿಎಸ್​ವೈ ಸಲಹೆ ನೀಡಿದ್ದಾರೆ.
ನೆರೆ ಮತ್ತು ಕರೊನಾ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಮುಂದೆ ಚುನಾವಣೆ ಎದುರಿಸುವುದು ಕಷ್ಟ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಳಿಕ ವಿಧಾನಸಭೆ ಚುನಾವಣೆ ಬರುತ್ತೆ. ಹಾಗಾಗಿ ಸಂಪೂರ್ಣ ಕ್ಯಾಬಿನೆಟ್ ರಚನೆಗೆ ಅವಕಾಶ ಕೊಡುವಂತೆ ಹೈಕಮಾಂಡ್​ಗೆ ಮನವಿ ಮಾಡು ಎಂದು ಸಿಎಂಗೆ ಬಿಎಸ್​ವೈ ಹೇಳಿ ಕಳುಹಿಸಿದ್ದಾರೆ.
2022ರ ಮಾರ್ಚ್​ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ

ನಿನ್ನ ಅಪ್ಪ-ಅಮ್ಮ ಯಾರು? ಎನ್ನುತ್ತಾ ಸಿದ್ದರಾಮಯ್ಯರ ಮೂಲ ಕೆದಕಿದ ಈಶ್ವರಪ್ಪ

ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 4 =
Remember me
