|ಪ್ರತಾಪ್​ ಟಿ.ಕೋಡಿನರಸೀಪುರನಂಜನಗೂಡುದಿನೇದಿನೆ ಜನಪ್ರಿಯತೆ ಪಡೆದುಕೊಳ್ಳುತ್ತಿರುವ “ಯೋಗ” ಪ್ರಸ್ತುತ ಪಟ್ಟಣ ಅಥವಾ ನಗರ ವಾಸಿಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಗ್ರಾಮೀಣ ಪ್ರದೇಶದಲ್ಲಿಯೂ ‘ಯೋಗ’ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಮೈಸೂರು ಜಿಲ್ಲೆ ನಂಜನಗೂಎಉ ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮ ಈ ಮಾತಿಗೆ ನಿದರ್ಶನ. ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲೂ ಕೆಂಪಿಸಿದ್ದನಹುಂಡಿ ಗ್ರಾಮದ 50 ಯೋಗಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಾಮೂಹಿಕ ಯೋಗ ಪ್ರದರ್ಶನ ಮಾಡುವ ಸುಯೋಗ ದೊರೆತಿದೆ.
ಕೇಂದ್ರ ಸರ್ಕಾರ ಆಯುಷ್ಮಾನ್​ ಭಾರತ್​ ಯೋಜನೆಯಡಿ ಕೆಂಪಿಸಿದ್ದನಹುಂಡಿಯ ಆಯುಷ್​ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ ತರಗತಿಯನ್ನು ಉಚಿತ ಕೊಡಿಸುವ ಮೂಲಕ ಯೋಗ ಗ್ರಾಮವನ್ನಾಗಿ ಮಾರ್ಪಾಡು ಮಾಡಿದೆ.
ಆಯುಷ್​ ಇಲಾಖೆಯಿಂದ ನಿಯೋಜನೆಗೊಂಡಿರುವ ಯೋಗ ತರಬೇತುದಾರರಾದ ಎಸ್​.ಎಚ್​.ಆಶಾ ಹಾಗೂ ಎಚ್​.ಎನ್​. ನಂಜುಂಡೇಗೌಡ ದಂಪತಿ ಎರಡು ವರ್ಷಗಳಿಂದ ಈ ಗ್ರಾಮದಲ್ಲಿ ಯೋಗ ಪರಿಮಳ ಪಸರಿಸುತ್ತಿದ್ದಾರೆ. ಗ್ರಾಮದ ಸರ್ಕಾರಿ ಶಾಲಾ ಆವರಣ ಹಾಗೂ ಸಮುದಾಯ ಭವನದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಯೋಗ ತರಗತಿ ನಡೆಸುತ್ತಿದ್ದು, 100ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಆರಂಭಿಕ ದಿನಗಳಲ್ಲಿ ಯೋಗ ಕಲಿಕೆಗೆ ನಿರಾಸಕ್ತಿ ತೋರುತ್ತಿದ್ದ ಮಹಿಳೆಯರನ್ನು ಮನವೊಲಿಸಿ ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಗ್ರಾಮದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಜಾತಾ ಪ್ರೇರೇಪಿಸಿದ್ದಾರೆ. ಯೋಗ ಕಲಿಕೆಯಲ್ಲಿ ತೊಡಗಿಸಿಕೊಂಡ ಪರಿಣಾಮ ಅನೇಕರಲ್ಲಿ ಆರೋಗ್ಯ ಸಮಸ್ಯೆಯೂ ಕ್ಷೀಣಿಸಿದ್ದರಿಂದ ದಿನ ಕಳೆಯುತ್ತಿದ್ದಂತೆ ಮಹಿಳೆಯರಲ್ಲಿ ಆಸಕ್ತಿ ಹೆಚ್ಚಿದೆ. ಮಹಿಳೆಯರ ಆಸಕ್ತಿ ನೋಡಿ ಪುರುಷರೂ ಯೋಗದಲ್ಲಿ ಸಕ್ರಿಯರಾಗುವ ಮೂಲಕ ಕೆಂಪಿಸಿದ್ದನಹುಂಡಿ ಯೋಗ ಗ್ರಾಮವಾಗಿ ಬದಲಾಗಿದೆ.

ವ್ಯವಸ್ಥಿತ ಯೋಗ ಕಲಿಕೆಯಲ್ಲಿ ಈ ಕೇಂದ್ರ ರಾಜ್ಯದಲ್ಲೇ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದು ಮತ್ತೊಂದು ವಿಶೇಷ. ಆಯುಷ್​ ಇಲಾಖೆಯ ಆಯುಕ್ತ ರಾಮಚಂದ್ರ ಅವರು ಖುದ್ದು ಈ ಗ್ರಾಮಕ್ಕೆ ಭೇಟಿ ನೀಡಿ, ಕೇಂದ್ರದ ಕಾರ್ಯಚಟುವಟಿಕೆಯನ್ನು ಕಣ್ಣಾರೆ ಕಂಡು ಶಹಬ್ಬಾಸ್​ಗಿರಿ ನೀಡಿರುವುದು ಮತ್ತೊಂದು ಹೆಗ್ಗಳಿಕೆ. ಸದ್ಯ ಗ್ರಾಮದ ಸಮುದಾಯ ಭವನದಲ್ಲಿ ಯೋಗ ತರಗತಿ ನಡೆಯುತ್ತಿದ್ದು, ಇವರಿಗೆ ಸ್ವಂತ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆಯುಷ್​ ಇಲಾಖೆ ವತಿಯಿಂದ ಆರೋಗ್ಯ ಕೇಂದ್ರದ ಮೊದಲ ಮಹಡಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಯೋಗ ಕಲಿಕಾ ಕೇಂದ್ರ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಇವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯುಕ್ತ ರಾಮಚಂದ್ರ ಅವರು ಎಲ್ಲ ಯೋಗಪಟುಗಳಿಗೆ ಯೋಗ ಮ್ಯಾಟ್​ ಕೊಡಿಸಿದ್ದಾರೆ. ಕೊಟ್ಟಕಲ್​ ಆಯುರ್ವೇದ ಕಂಪನಿಯು ಟಿ-ಶರ್ಟ್​ ಅನ್ನು ಕೊಡುಗೆಯಾಗಿ ನೀಡಿದೆ.
ಕೋವಿಡ್​ ವೇಳೆ ಆನ್​ಲೈನ್​ ತರಬೇತಿ:ಕೋವಿಡ್​ ಲಾಕ್​ಡೌನ್​ ಸಮಯದಲ್ಲಿ ಭೌತಿಕ ತರಗತಿಗಳಿಗೆ ಬ್ರೇಕ್​ ಬಿದ್ದರೂ ಆನ್​ಲೈನ್​ ಮೂಲಕ ಯೋಗ ತರಗತಿಗಳನ್ನು ನಡೆಸಿದ್ದಾರೆ. ಹಳ್ಳಿಗಾಡಿನಲ್ಲಿದ್ದರೂ ಆನ್​ಲೈನ್​ ಕಲಿಕೆಯಲ್ಲೂ ಗ್ರಾಮಸ್ಥರೂ ಗಮನ ಸೆಳೆದಿದ್ದರು. ಇವರ ಉತ್ಸಾಹ, ಆಸಕ್ತಿ ಕಂಡು ಆಯುಷ್​ ಇಲಾಖೆಯೂ ಕೂಡ ಬೆರಗಾಗಿತ್ತು.

ಆಯುಷ್​ ಆರೋಗ್ಯ ಕೇಂದ್ರದಿಂದ ನಡೆಯುತ್ತಿರುವ ಯೋಗ ತರಬೇತಿಯಲ್ಲಿ ಕೆಂಪಿಸಿದ್ದನಹುಂಡಿ ಗ್ರಾಮಸ್ಥರ ಕಲಿಕಾ ಆಸಕ್ತಿ ಕಂಡು ನಾವೇ ಬೆರಗಾಗಿದ್ದೇವೆ. ಇವರ ಆಸಕ್ತಿಯನ್ನು ಕಂಡ ಆಯುಷ್​ ಜಿಲ್ಲಾ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ ಅವರು ಕೆಂಪಿಸಿದ್ದನಹುಂಡಿಯ 50 ಯೋಗಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗ ಮಾಡುವ ಅವಕಾಶ ಕಲ್ಪಿಸಿಕೊಟ್ಟರು.|ಡಾ.ಅಶೋಕ್​ತಾಲೂಕು ಆಯುಷ್​ ಆರೋಗ್ಯಾಧಿಕಾರಿ, ನಂಜನಗೂಡು
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನಂಜನಗೂಡು ಶಾಖೆ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್​ ಜಿ.ಉಡಿಗಾಲ ಅವರ ಮಾರ್ಗದರ್ಶನ ಹಾಗೂ ಕಾರ್ಯದರ್ಶಿ ಎನ್​.ಆರ್​. ಗಣೇಶ್​ಮೂರ್ತಿ ಅವರ ಸಹಕಾರದಿಂದ ನಾನು ಶಿಕ್ಷಕಿಯಾಗಿ ರೂಪುಗೊಂಡೆ. ಜಿಲ್ಲಾ ಆಯುಷ್​ ವೈದ್ಯಾಧಿಕಾರಿ ಡಾ.ಬಿ.ಎಸ್​.ಸೀತಾಲಕ್ಷ್ಮೀ, ತಾಲೂಕು ಆಯುಷ್​ ವೈದ್ಯಾಧಿಕಾರಿ ಡಾ.ಅಶೋಕ್​ ಹಾಗೂ ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಜಾತಾ ಅವರ ಮಾರ್ಗದರ್ಶನದಲ್ಲಿ ಯೋಗ ಕೇಂದ್ರ ಸಾಗುತ್ತಿದ್ದು, ಪ್ರಧಾನಿ ಮೋದಿ ಅವರ ಮುಂದೆ ಯೋಗ ಮಾಡುವ ಸುಯೋಗ ದೊರೆತದ್ದು ನಮ್ಮ ಪುಣ್ಯ.|ಎಸ್​.ಎಚ್​.ಆಶಾಯೋಗ ತರಬೇತುದಾರರು
ಲಾಕ್​ಡೌನ್​ ಸಮಯದಲ್ಲಿ ಸ್ಥಳೀಯರು ಆನ್​ಲೈನ್​ ತರಗತಿಗಳ ಮೂಲಕ ಯೋಗಾಭ್ಯಾಸದಲ್ಲಿ ಉತ್ಸಾಹದಿಂದ ಭಾಗಿಯಾಗುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದನ್ನು ಕಂಡು ನಾವು ಬೆರಗಾದೆವು. ಆಯುಷ್​ ಇಲಾಖೆ ಸಹಕಾರ ಹಾಗೂ ಗ್ರಾಮಸ್ಥರ ಉತ್ಸಾಹ, ಆಸಕ್ತಿಯಿಂದ ಯೋಗ ಕೇಂದ್ರ ಇಡೀ ರಾಜ್ಯದ ಗಮನ ಸೆಳೆದಿದೆ.|ಎಚ್​.ಎನ್​.ನಂಜುಂಡೇಗೌಡಯೋಗ ತರಬೇತುದಾರ
ಪ್ರಿನ್ಸಿಪಾಲ್​ರ ಕಪಾಳಕ್ಕೆ ಬಾರಿಸಿದ ಮಂಡ್ಯ ಶಾಸಕ! ಕಾಲೇಜಲ್ಲಿ ಸಹೋದ್ಯೋಗಿಗಳ ಸಮ್ಮುಖದಲ್ಲೇ ಕೃತ್ಯ, ವಿಡಿಯೋ ವೈರಲ್​

ರಾಜ ವಂಶಸ್ಥರ ಜತೆ ಉಪಾಹಾರ ಸೇವಿಸಿದ ಪ್ರಧಾನಿ ಮೋದಿ: ಸ್ಪೆಷಲ್​ ಮೈಸೂರು​ ಪಾಕ್ ಸೇರಿ 10 ಬಗೆಯ ಖಾದ್ಯ

ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × one =
Remember me
