ಬೆಂಗಳೂರು:ಮಿಸ್ಡ್​ಕಾಲ್​ ಮೂಲಕ ಪರಿಚಯವಾದ ಗೃಹಿಣಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ 20 ವರ್ಷದ ಯುವಕನನ್ನು ಆಕೆಯ ಪತಿ ಮತ್ತು ಸಂಬಂಧಿಕರೇ ಹತ್ಯೆ ಮಾಡಿದ್ದಾರೆ.
ಮಾದಾವರ ನಿವಾಸಿ ಚಂದ್ರಶೇಖರ್ (20) ಕೊಲೆಯಾದವ. ಈತನಿಗೆ ಮಿಸ್ಡ್​ಕಾಲ್​ ಮೂಲಕ ಚಿನ್ನಾದೇವಿ ಅಗ್ರಹಾರದ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ಆರಂಭದಲ್ಲಿ ಸ್ನೇಹಿತರಂತೆ ಚಾಟಿಂಗ್​ ಮಾಡಿಕೊಳ್ಳುತ್ತಿದ್ದ ಇವರಿಬ್ಬರ ನಡುವೆ ಆಪ್ತತೆ ಬೆಳೆದು ಅಕ್ರಮ ಸಂಬಂಧಕ್ಕೂ ತಿರುಗಿತ್ತು. ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆ ಪತಿಯನ್ನು ತೊರೆದು ಆಕೆ ಯುವಕನ ಜತೆ ವಾಸಿಸುತ್ತಿದ್ದಳು.
ಇದನ್ನೂ ಓದಿರಿಮೊಬೈಲ್​ ಕರೆ ಬಂತೆಂದು ಹೊರ ಹೋದ ಬಿಲ್ ಕಲೆಕ್ಟರ್ ಶವವಾಗಿ ಪತ್ತೆ!
ಕೊನೆಗೆ ಪತ್ನಿಗೆ ಬುದ್ಧಿವಾದ ಹೇಳಿದ ಪತಿ, ಆಕೆಯನ್ನು ಮನೆಗೆ ವಾಪಸ್​ ಕರೆತಂದಿದ್ದ. ಇಷ್ಟಾದರೂ ಆಕೆ ಮಾತ್ರ ಚಂದ್ರಶೇಖರ್​ ಜತೆಗಿನ ನಂಟು ಮುಂದುವರಿಸಿದ್ದಳು. ಇತ್ತೀಚೆಗೆ ಮತ್ತೆ ಪತಿಯನ್ನು ತೊರೆದು ಪ್ರಿಯಕರನ ಮನೆ ಸೇರಿದ್ದಳು.
ಪತ್ನಿಯ ನಡತೆಯಿಂದ ಬೇಸತ್ತ ಪತಿ, ತನ್ನ ಸಹೋದರನೊಂದಿಗೆ ಹೋಗಿ ಚಂದ್ರಶೇಖರ್ ಹಾಗೂ ಪತ್ನಿ ಜತೆ ಜಗಳ ಮಾಡಿದ್ದ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದ. ತೀವ್ರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿರಿನಾಲ್ಕು ತಿಂಗಳ ಹಿಂದೆ ಕಾಣೆಯಾದ ಪತ್ನಿ, ಮಕ್ಕಳಿಗಾಗಿ ವ್ಯಕ್ತಿಯ ಅಲೆದಾಟ: ಕಣ್ತೆರೆಯದ ಪೊಲೀಸರು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − 10 =
Remember me
