ಮಂಗಳೂರು:ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಯುವಕ-ಯುವತಿ ತಮಾಷೆಗೆ ನಡೆಸಿದ ಚಾಟಿಂಗ್​ ಇಡೀ ಮಂಗಳೂರು ವಿಮಾನ ನಿಲ್ದಾಣವನ್ನೇ ಬೇಸ್ತು ಬೀಳಿಸಿದೆ. ಯುವಕ-ಯುವತಿ ನಡೆಸಿದ ಚಾಟಿಂಗ್​ ಭಾರಿ ಆತಂಕ ಸೃಷ್ಟಿಸಿದ್ದರಿಂದ ಟೇಕಾಫ್​ಗೆ ಸಿದ್ಧವಾಗಿದ್ದ ವಿಮಾನ ಸಂಚಾರವನ್ನೇ ಸ್ಥಗಿತಗೊಳಿಸಿ ತಪಾಸಣೆ ನಡೆಸಲಾಗಿದೆ. ಭದ್ರತೆ ವಿಚಾರಕ್ಕೆ ಸಂಬಂಧಿಸಿ ಚಾಟ್​ ಮಾಡಿದ್ದ ಯುವಕ-ಯುವತಿಯನ್ನು ವಶಕ್ಕೆ ಪಡೆಯಲಾಗಿದೆ.
ನಡೆದಿದ್ದೇನು?: ಉತ್ತರ ಪ್ರದೇಶದ ಗೋರಖ್​ಪುರ ಮೂಲದ ಯುವಕ ಹಾಗೂ ಯುವತಿ ಬೆಳಗ್ಗೆ 11 ಗಂಟೆಗೆ ಏರ್​ಪೋರ್ಟ್​ಗೆ ಆಗಮಿಸಿದ್ದರು. ಯುವಕ ಮುಂಬೈಗೆ ಪ್ರಯಾಣಿಸಲು ವಿಮಾನದಲ್ಲಿ ಕುಳಿತಿದ್ದ. ಯುವತಿ ಬೆಂಗಳೂರಿಗೆ ಪ್ರಯಾಣಿಸಲು ಆಗಮಿಸಿದ್ದಳು. ಈ ವೇಳೆ ಮೊಬೈಲ್​ ಫೋನ್​ನಲ್ಲಿ ಚಾಟಿಂಗ್​ ಮಾಡುತ್ತಿದ್ದ ಇವರಿಬ್ಬರು ವಿಮಾನದ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೆಖ ಮಾಡಿದ್ದರು. ಇದನ್ನು ಗಮನಿಸಿದ ಸಹಪ್ರಯಾಣಿಕರೊಬ್ಬರು ಕೂಡಲೇ ಏರ್​ಹೋಸ್ಟಸ್​ಗೆ ಮಾಹಿತಿ ನೀಡಿದ್ದಾರೆ. ಅವರು ಪೈಲಟ್​ಗೆ ಮಾಹಿತಿ ನೀಡಿದ್ದು, ಪೈಲಟ್​ನಿಂದ ಎಟಿಸಿಗೆ ಮಾಹಿತಿ ರವಾನೆಯಾಗಿದೆ. ಕೂಡಲೇ ರನ್​ವೇನಲ್ಲಿ ಟೇಕಾಫ್​ಗೆ ಸಿದ್ಧವಾಗಿದ್ದ ವಿಮಾನವನ್ನು ತಡೆಯಲಾಗಿದೆ.
ಸ್ಥಳಕ್ಕೆ ಧಾವಿಸಿದ ಕೇಂದ್ರ ಕೈಗಾರಿಕಾ ಭದ್ರತಾಪಡೆ ಅಧಿಕಾರಿಗಳು ಮುಂಬೈ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಿದ್ದಾರೆ. ವಿಮಾನವನ್ನು ರನ್​ವೇಯಿಂದ “ಐಸೊಲೇಷನ್​ ಬೇ”ಗೆ ಕಳುಹಿಸಿದ್ದಾರೆ. ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಮೊಬೈಲ್​ ವಶಕ್ಕೆ ಪಡೆದು ಚಾಟಿಂಗ್​ ಗಮನಿಸಿದಾಗ ಯುವಕನ ಭದ್ರತೆಗೆ ಅಪಾಯ ಒಡ್ಡುವ ಸಂದೇಶ ರವಾನಿಸಿರುವುದು ಪತ್ತೆಯಾಗಿತ್ತು.
ಯುವತಿ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೆ, ಯುವಕ ಮುಂಬೈನಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಲು ತೆರಳುವವನಿದ್ದ. ಯುವಕ ಈ ಹಿಂದೆ ಮಣಿಪಾಲದಲ್ಲಿ ಓದಿದ್ದು, ಮೂರು ದಿನಗಳಿಂದ ಯುವತಿ ಜತೆಯಾಗಿ ಮಣಿಪಾಲ ಸುತ್ತಮುತ್ತ ಓಡಾಡಿಕೊಂಡಿದ್ದರು. ಭಾನುವಾರ ಸುತ್ತಾಟ ಮುಗಿಸಿ ಬೆಳಗ್ಗೆ ಜತೆಯಾಗಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಯುವಕ ಹಾಗೂ ಯುವತಿಯನ್ನು ವಿಮಾನ ನಿಲ್ದಾಣ ಪೊಲೀಸರು ಬಜಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮುಂಬೈಗೆ ಹೋಗಬೇಕಿದ್ದ ವಿಮಾನ ಸಂಜೆ 4 ಗಂಟೆ ವೇಳೆಗೆ ಪ್ರಯಾಣಿಸಿದೆ. 186 ಪ್ರಯಾಣಿಕರಿದ್ದರು.
ವಿಮಾನ ವಿಳಂಬ:ಚಾಟಿಂಗ್​ ವಿದ್ಯಮಾನದಿಂದ ವಿಮಾನ ನಿಲ್ದಾಣಕ್ಕೆ ಬರುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ತಡವಾಗಿ ಲ್ಯಾಂಡಿಂಗ್​ ಹಾಗೂ ಟೇಕಾಫ್​ ಆಗಿವೆ. ದುಬೈನಿಂದ ಬಂದು 3.15ಕ್ಕೆ ಲ್ಯಾಂಡ್​ ಆಗಬೇಕಿದ್ದ ವಿಮಾನ 4 ಗಂಟೆಗೆ ಲ್ಯಾಂಡ್​ ಆಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್​ ಮಾಡ್ತಿದ್ದೀವಿ… ಮಾಧುಸ್ವಾಮಿ ಸ್ಫೋಟಕ ಹೇಳಿಕೆ? ಆಡಿಯೋ ವೈರಲ್​

ಬೆಳಗಾವಿಯಲ್ಲಿ ಪೊಲೀಸರ ವಶಕ್ಕೆ ಕಾಂಗ್ರೆಸ್​ ಕಾರ್ಯಕರ್ತೆ ನವ್ಯಶ್ರೀ ರಾವ್​

ಚಾಮರಾಜಪೇಟೆಯಲ್ಲಿ ಅದ್ದೂರಿಯಾಗಿ ನೆರವೇರಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ: ನಿರೀಕ್ಷೆಗೂ ಮೀರಿ ಸಾವಿರಾರು ಜನ ಭಾಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
