ರಾಣೆಬೆನ್ನೂರ:ಪ್ರೀತಿಸಿದ ಯುವಕ, ಯುವತಿ ಓಡಿ ಹೋಗಿದ್ದಾರೆ ಎನ್ನುವ ಕಾರಣಕ್ಕೆ ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎನ್ನುವ ಘಟನೆ ತಾಲೂಕಿನ ಮುದೇನೂರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಬೆಳಗಾವಿಯ ವಂಟಮೂರಿ ಗ್ರಾಮದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಂತಾಗಿದೆ.
ಯುವಕನ ಮಾವ ಹಾಗೂ ಗ್ರಾಪಂ ಸದಸ್ಯ ಪ್ರಶಾಂತ ಕಬ್ಬಾರ (34) ಹಲ್ಲೆಗೊಳಗಾದ ವ್ಯಕ್ತಿ. ಈತನ ಮೇಲೆ ಹಲ್ಲೆ ಮಾಡಿದ ತಾಲೂಕಿನ ಚಳಗೇರಿ ಗ್ರಾಮದ ಶಿವಾಜೆಪ್ಪ ಮರಿಯಪ್ಪ ಕಮದೋಡ, ಬಸವರಾಜಪ್ಪ ನೀಲಪ್ಪ ಬೆನಕನಕೊಂಡ, ಹರೀಶ ಸಣ್ಣಗುಡ್ಡಪ್ಪ ಬೆನಕನಕೊಂಡ, ಸುನೀಲ ಉಚ್ಚಂಗೆಪ್ಪ ಮೂಕಮ್ಮನವರ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ ಏನು?ಮುದೇನೂರ ಗ್ರಾಮದ ಯುವಕ ಪ್ರಕಾಶ ಎಂಬುವನು ಚಳಗೇರಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ಓಡಿ ಸಹ ಹೋಗಿದ್ದರು. ಹಿರಿಯರು ಪ್ರಕಾಶನನ್ನು ನೋಡಿಕೊಳ್ಳುತ್ತಿದ್ದ ಮಾವ ಪ್ರಶಾಂತನೊಂದಿಗೆ ಪಂಚಾಯಿತಿ ಮಾಡಿ ಅಳಿಯ ಪ್ರಕಾಶನನ್ನು ಕರೆದುಕೊಂಡು ಬರಲು ಹೇಳಿದ್ದರು.
ಅಷ್ಟರಲ್ಲಿಯೆ ರೋಸಿಹೋದ ಯುವತಿಯ ಕುಟುಂಬದವರು ಕಾರು, ಬೈಕ್ ತೆಗೆದುಕೊಂಡು ಪ್ರಶಾಂತನ ಮನೆ ಬಳಿ ಬಂದು ಆತನ ಮೇಲೆ ಹಾಗೂ ಯುವಕನ ಪಾಲಕರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಪ್ರಶಾಂತನನ್ನು ಕಾರಿಯಲ್ಲಿ ಅಪಹರಣ ಮಾಡಿಕೊಂಡು ಹೋಗಿ ರಾಣೆಬೆನ್ನೂರ ನಗರದ ಜಾನುವಾರು ಮಾರುಕಟ್ಟೆ ಆವರಣಕ್ಕೆ ಕರೆತಂದು ಬಟ್ಟೆಗಳನ್ನು ಹರಿದು ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪೊಲೀಸರಿಗೆ ದೂರು ನೀಡಿರುವ ಪ್ರಶಾಂತ, ತನ್ನ ಬಳಿಯಿದ್ದ 2 ಲಕ್ಷ ರೂ. ಹಣ ಹಾಗೂ ಪತ್ನಿಯ ಕೊರಳಲಿದ್ದ 4 ತೊಲೆ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ. ಹೊಡೆದ ಬಳಿಕ ಗ್ರಾಮೀಣ ಪೊಲೀಸ್ ಠಾಣೆ ಹತ್ತಿರ ಬೀಸಾಕಿ ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳ ಸಲುವಾಗಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಘಟನೆ ಮಾಸುವ ಮುನ್ನವೇ ತಾಲೂಕಿನಲ್ಲಿಯೂ ಯುವಕನ ಕುಟುಂಬದವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಪ್ರೀತಿಸಿ ಯುವತಿಯನ್ನು ಯುವಕ ಕರೆದುಕೊಂಡು ಹೋಗಿದ್ದಾನೆ ಎನ್ನುವ ಕಾರಣಕ್ಕೆ ಯುವಕನ ಮಾವನ ಮೇಲೆ ಯುವತಿಯ ಕುಟುಂಬದವರು ಹಲ್ಲೆ ಮಾಡಿದ್ದಾರೆ. ಆದರೆ, ಅರೆಬೆತ್ತಲೆಗೊಳಿಸಿ ಹೊಡೆದಿದ್ದಾರೆ ಎಂದು ಹಲ್ಲೆಗೊಳಗಾದವರು ದೂರಿನಲ್ಲಿ ಆರೋಪಿಸಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದೆ. ಓಡಿ ಹೋಗಿರುವ ಯುವಕ, ಯುವತಿ ಈಗಾಗಲೇ ವಾಪಸ್ ಬಂದಿದ್ದಾರೆ. ನಮಗೆ ಜೀವ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಅವರಿಗೆ ರಕ್ಷಣೆ ಜತೆಗೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಹಾವೇರಿ ಎಸ್​ಪಿ ಅಂಶುಕುಮಾರ ಹೇಳಿದರು.

ದಾವೂದ್ ಇಬ್ರಾಹಿಂ ಈಗ ಹೇಗೆ ಕಾಣಿಸುತ್ತಾನೆ? ಭೂಗತ ಪಾತಕಿಯ ಲೆಟೆಸ್ಟ್​ ಫೋಟೋ ನೋಡಿ….

ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ: ಮೌನ ವಹಿಸಿದ್ದ ಗ್ರಾಮಸ್ಥರಿಗೆ ದಂಡ ವಿಧಿಸಬಹುದು ಎಂದ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
