ಚಳ್ಳಕೆರೆ: ತಾಲೂಕಿನ ರೇಣುಕಾಪುರ ಸಮೀಪದ ವೇದಾವತಿ ನದಿ ವೀಕ್ಷಣೆಗೆ ತೆರಳಿದ್ದ ಯುವತಿಯೊಬ್ಬಳು ಬುಧವಾರ ಕಾಲು ಜಾರಿ 20 ಅಡಿ ಆಳದ ಗುಂಡಿಗೆ ಬಿದಿದ್ದಾಳೆ.
ರೇಣುಕಾಪುರ ಗ್ರಾಮದ ಸುಜಾತಾ (22) ಮೃತಪಟ್ಟ ಯುವತಿ. ಈ ಕುರಿತು ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ವೇದಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ದಂಧೆ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಆಗುತ್ತಿಲ್ಲ. ದಂಧೆಕೋರರು ಅಲ್ಲಲ್ಲಿ ಮರಳು ಎತ್ತಿ 20-25 ಅಡಿ ಆಳದ ಗುಂಡಿ ಬಿಡುತ್ತಿದ್ದು, ಅಲ್ಲಿ ನೀರು ನಿಲ್ಲುತ್ತಿದೆ.
ಇದನ್ನೂ ಓದಿನವಜಾತ ಶಿಶುವನ್ನು ಸಜೀವ ಸಮಾಧಿ ಮಾಡಿದ್ದು ಯಾರು?
ವಿವಿಧ ಕಾರಣಗಳಿಗಾಗಿ ನದಿಗೆ ಹೋಗುವವರು ಗುಂಡಿಯ ಆಳದ ಕುರಿತು ಅರಿವು ಇಲ್ಲದೆ ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬುಧವಾರ ನೀರು ಹರಿಯುತ್ತಿರುವ ನದಿ ನೋಡಲು ಹೋಗಿ 20 ಅಡಿ ಆಳದ ಗುಂಡಿಗೆ ಬಿದ್ದು ಈ ಯುವತಿ ಬಲಿಯಾಗಿದ್ದಾಳೆ.
9 ತಿಂಗಳ ಹಿಂದೆ ಈ ಭಾಗದ ನದಿಪಾತ್ರದಲ್ಲಿ ಮರಳು ಎತ್ತಲು ಅನುಮತಿ ನೀಡದಂತೆ ಸುತ್ತಲ ಗ್ರಾಮಸ್ಥರೊಂದಿಗೆ ರೈತ ಸಂಘಟನೆ ನದಿಗೆ ಇಳಿದು ಪ್ರತಿಭಟನೆ ಮಾಡಲಾಗಿತ್ತು. ಅದನ್ನೂ ಲೆಕ್ಕಿಸದೆ ಮರಳು ಟೆಂಡರ್ ನೀಡಿದ್ದರ ಪರಿಣಾಮ ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ.
ಇದೇ ವೇಳೆ ಚಿತ್ರನಾಯ್ಕನಹಳ್ಳಿ ಲೋಕೇಶಪ್ಪನ ತೋಟದ ಬಳಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಗೂ ಮರಳು ದಂಧೆಯೇ ಕಾರಣಎಂದು ರೈತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ್, ‘‘15 ದಿನಗಳ ಹಿಂದೆ ವೇದಾವತಿ ನೀರು ಸಂಬಂಧ ಭೇಟಿ ನೀಡಿದ್ದೆ. ಆಳವಾದ ಗುಂಡಿಗಳು ಕಂಡುಬಂದಿರಲಿಲ್ಲ. ಈಗ ಯುವತಿ ಸಾವಿಗೆ ಮರಳು ಗಣಿಗಾರಿಕೆ ಗುಂಡಿಯೇ ಕಾರಣ ಎಂಬ ಸ್ಥಳೀಯರ ಆರೋಪ ಕುರಿತು ಪರಿಶೀಲನೆ ನಡೆಸುತ್ತೇನೆ. ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳುತ್ತೇನೆ’’ ಎಂದಿದ್ದಾರೆ.
8 ಸಾವಿರ ಸ್ಥಳಗಳಲ್ಲಿ 4 ಲಕ್ಷ ಜನರಿಂದ ಡಿಕೆಶಿ ಪದಗ್ರಹಣ ವೀಕ್ಷಣೆಗೆ ವ್ಯವಸ್ಥೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
