ಬೆಂಗಳೂರು:ಬೆಂಗಳೂರಿನ ಟೆಕ್ಕಿಯೊಬ್ಬರು ಲವ್ ಜಿಹಾದ್‌ ಬಲೆಯಲ್ಲಿ ಬಿದ್ದಿದ್ದಾರೆ. ಕಾಶ್ಮೀರದ ಮುಸ್ಲಿಂ ಯುವಕ ತನ್ನನ್ನು ಬಳಸಿಕೊಂಡು, ಮತಾಂತರ ಮಾಡಿ ಈಗ ಬೆದರಿಕೆ ಹಾಕುತ್ತಿದ್ದಾನೆ. ನಾನ್ ಲವ್ ಜಿಹಾದ್​​ಗೆ ಒಳಗಾಗಿದ್ದೇನೆಂದು ಆಕೆ ಟ್ವೀಟ್​​ ಮಾಡುವ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ನಾನು ಲವ್ ಜಿಹಾದ್​​ಗೆ ಒಳಗಾಗಿದ್ದೇನೆ…ನನ್ನ ಮೇಲೆ ಅತ್ಯಾಚಾರ ನಡೆದಿದೆ. ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ನಾನು ಅಪಾಯದಲ್ಲಿದ್ದೇನೆ. ತುರ್ತಾಗಿ ನನಗೆ ಬೆಂಗಳೂರು ಪೊಲೀಸರ ಸಹಾಯ ಬೇಕಿದೆ ಎಂದು ಟ್ವೀಟ್ ಮಾಡಿ, ಪಿಎಂ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಸಿಟಿ ಪೊಲೀಸ್ರಿಗೆ ಟ್ಯಾಗ್​ ಮಾಡಿದ್ದಾಳೆ.
https://twitter.com/artiniart1/status/1698191259549241743
ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಗಮನಕ್ಕೆ ಬಂದ ಕೂಡಲೇ ಬೆಳ್ಳಂದೂರು ಪೊಲೀಸರು ಟ್ವೀಟ್ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂತ್ರಸ್ತೆ ಬೆಂಗಳೂರು ಪೊಲೀಸರ ಜತೆಗೆ ಕಾಶ್ಮೀರ ಪೊಲೀಸರಿಗೂ ಟ್ವೀಟ್ ಮಾಡಿ ನ್ಯಾಯ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾಳೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಫೇಸ್​​ಬುಕ್ ಮೂಲಕವಾಗಿ ಕಾಶ್ಮೀರ ಯುವಕನ ಪರಿಚಯವಾಗಿದೆ. ನಂತರ ಇಬ್ಬರ ಸ್ನೇಹ ಪ್ರೀತಿಯಾಗಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿದೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ. ಬಳಿಕ ಬಲವಂತವಾಗಿ ಆಕೆಯನ್ನು ಮತಾಂತರ ಮಾಡಿಸಿದ್ದಾನೆ. 2019ರಿಂದ ಇಬ್ಬರು ಜೊತೆಯಲ್ಲೇ ವಾಸವಾಗಿದ್ದರು. ನಂತರ ಯುವಕ ಸದ್ಯ ಮದ್ವೆಯಾಗೋದಿಲ್ಲ ಎಂದು ಯುವತಿಯನ್ನ ಅವೈಡ್ ಮಾಡಿದ್ದಾನೆ. ಯುವತಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಕುರಿತಾಗಿ ಯುವತಿ ಸಾಲುಸಾಲು ಆರೋಪ ಮಾಡಿದ್ದಾಳೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
