ಉಡುಪಿ:ಮದುವೆಯ ಮುನ್ನಾ ದಿನದ ರೋಸ್ ಕಾರ್ಯಕ್ರಮಕ್ಕೆ ಸಂಬಂಧಿಕರ ಮನೆಗೆ ಆಗಮಿಸಿದ್ದ ಯುವತಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮದ್ವೆ ಮನೆಯಲ್ಲಿ ಯುವತಿ ಸಂಭ್ರಮದಿ ಕುಣಿಯುತ್ತಾ ನೀಧಾನವಾಗಿ ನಡೆದುಕೊಂಡು ಬರುತ್ತಲೇ ಕುಸಿದು ಬಿದ್ದ ಕ್ಷಣದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಾವಂಜೆ ನಿವಾಸಿ ಜೋರ್ಜ್​ ಕೋತಾ ಮತ್ತು ಐರಿನ್​ ಖೋತಾ ದಂಪತಿ ಪುತ್ರಿ ಜೋಸ್ನಾ ಲೂವಿಸ್(23) ಮೃತ ದುರ್ದೈವಿ. ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಕಾರ್ಯಕ್ರಮಕ್ಕೆ ಜೋಸ್ನಾ ತೆರಳಿದ್ದರು. ಸಂಭ್ರಮದಲ್ಲೇ ಓಡಾಡಿಕೊಂಡಿದ್ದ ಯುವತಿ, ರಾತ್ರಿ 8.30ರ ವೇಳೆಗೆ ಕುಸಿದು ಬಿದ್ದಿದ್ದು, ತಕ್ಷಣ ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ.
ಮಿಲಾಗ್ರಿಸ್​ ಕಾಲೇಜಿನಲ್ಲಿ ಈ ವರ್ಷ ಜೋರ್ಜ್​ ಎಂಕಾಂ ಪದವಿ ಮುಗಿಸಿದ್ದಳು. ಜೋರ್ಜ್​ ಕುಸಿದು ಬಿದ್ದ ದೃಶ್ಯ ವೈರಲ್​ ಆಗಿದ್ದು, ಈಕೆಯ ಸಾವಿಗೆ ಜನರು ಮಮ್ಮಲ ಮರುಗಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನಗೂ ವೈಷ್ಣವಿ ಗೌಡಗೂ ಎಂಗೇಜ್ಮೆಂಟ್ ಆಗಿಲ್ಲ, ಅದೊಂದು ಬೊಟ್ಟು ಇಡುವ ಶಾಸ್ತ್ರ: ವಿದ್ಯಾಭರಣ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 3 =
Remember me
