ಬೆಂಗಳೂರು:ಇಲ್ಲೊಬ್ಬ ಪಾಪಿ ಪತ್ನಿ ಇದ್ದರೂ ನಾದಿನಿಯನ್ನ ಮದುವೆ ಆಗುವ ದುರಾಸೆಯಲ್ಲಿ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ.
ಕೊಡಿಗೇಹಳ್ಳಿ ನಿವಾಸಿ 32 ವರ್ಷ ದೇವರಾಜ್​ಗೆ ನಾಲ್ಕು ವರ್ಷದ ಹಿಂದೆಯೇ ಮದುವೆ ಆಗಿದೆ. ನಗರದಲ್ಲಿ ಕೋಳಿ ವ್ಯಾಪಾರ ಮಾಡಿಕೊಂಡಿದ್ದ ದೇವರಾಜ್​, ತನ್ನ ಪತ್ನಿಯ ತಂಗಿ ಮಮತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಅಕ್ಕನ ಗಂಡನ ಮೇಲೆ ನಾದಿನಿಯೂ ಆಕರ್ಷಿತಳಾಗಿದ್ದಳು. ಪತ್ನಿಗೆ ಕಿರುಕುಳ ಕೊಡುತ್ತಿದ್ದ ದೇವರಾಜ್​, ನಿನ್ನ ತಂಗಿಯನ್ನು 2ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದ. ಈ ವಿಚಾರ ಮನೆಯವರ ಗಮನಕ್ಕೆ ಬಂದು ಮಮತಾಗೆ ಬುದ್ಧಿಮಾತು ಹೇಳಿದ್ದರು. ನಂತರ ದೇವರಾಜ್​ ಜತೆ ಮಮತಾ ಅಂತರ ಕಾಯ್ದುಕೊಂಡಿದ್ದಳು. 3 ತಿಂಗಳಿನಿಂದ ಸಹಕಾರನಗರದ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು ಮಾಲ್​ನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ದೇವರಾಜ್​ ಆಕೆಯನ್ನು ವಿವಾಹವಾಗಲು ಹಂಬಲಿಸುತ್ತಿದ್ದ.
ಅದಕ್ಕಾಗಿ ತನ್ನ ಸಹಚರರಾದ ಕುಮಾರ್​ ಮತ್ತು ನವೀನ್​ ಜತೆ ಸೇರಿ ಆಕೆಯನ್ನು ಅಪಹರಿಸಿ ವಿವಾಹವಾಗಲು ಸಂಚು ರೂಪಿಸಿದ್ದ. ಜ.22ರಂದು ರಾತ್ರಿ 10.30ರಲ್ಲಿ ಮಮತಾ ಕೆಲಸ ಮುಗಿಸಿಕೊಂಡು ಸಹಪಾಠಿ ಅಭಿಷೇಕ್​ ಜತೆ ಸ್ಕೂಟರ್​ನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಮಾರ್ಗಮಧ್ಯೆ ಕೊಡಿಗೇಹಳ್ಳಿಯ ಅಪಾರ್ಟ್​ಮೆಂಟ್​ವೊಂದರ​ ಮುಂಭಾಗ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದರು. ಅಭಿಷೇಕ್​ ಪ್ರತಿರೋಧ ತೋರಿದಾಗ ಕುಮಾರ್​ ಮತ್ತು ನವೀನ್​ ಆತನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಬಗ್ಗೆ ಮಮತಾಳ ತಂದೆ ಮುನಿಸ್ವಾಮಿಗೆ ಅಭಿಷೇಕ್​ ವಿವರಿಸಿದ್ದ. ಮುನಿಸ್ವಾಮಿ ಕೊಡಿಗೇಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ ಆಸುಪಾಸಿನಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ, ಮಮತಾಳನ್ನು ದೇವರಾಜ್​ ಅಪಹರಿಸುವ ದೃಶ್ಯ ಕಂಡು ಬಂದಿತ್ತು. ಕೂಡಲೇ ಟವರ್​ ಲೊಕೇಶನ್​ ಮೂಲಕ ದೇವರಾಜ್​ ಮೊಬೈಲ್​ ಕಾರ್ಯ ನಿರ್ವಹಿಸುವ ಪ್ರದೇಶವನ್ನು ಪರಿಶೀಲಿಸಿದಾಗ ಆತ ಅರಸೀಕೆರೆಯಲ್ಲಿರುವ ಸುಳಿವು ಸಿಕ್ಕಿತ್ತು. ಸೋಮವಾರ ಬೆಳಗ್ಗೆ ಅರಿಸೀಕೆರೆಗೆ ತೆರಳಿದ ಪೊಲೀಸರ ತಂಡ ದೇವರಾಜ್​ ಹಾಗೂ ಈತನ ಸಹಚರರಾದ ಕುಮಾರ್​ (33) ಹಾಗೂ ನವೀನ್​ (31) ಸೇರಿ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಮತಾಳನ್ನು ರಕ್ಷಣೆ ಮಾಡಿ ಆಕೆಯ ಪಾಲಕರಿಗೆ ಒಪ್ಪಿಸಿದ್ದಾರೆ.
ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

ಒಲ್ಲೆ ಎಂದರೂ ಅಣ್ಣನ ಎದುರೇ ‘ಬಾ.. ಮೊದಲಿನಂತೆ ನನ್ನ ಜತೆಗಿರು ಬಾ..’ ಎಂದು ಸೋದರಿಯನ್ನ ಪೀಡಿಸುತ್ತಿದ್ದ… ನಡೆದೇ ಹೋಯ್ತು ಘೋರ ಕೃತ್ಯ

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಾಮುಕರು: ಶಿವಮೊಗ್ಗದಲ್ಲಿ ಹೇಯ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + thirteen =
Remember me
