ಬೆಂಗಳೂರು:ಮಾಜಿ ಶಾಸಕ ವೈ.ಎಸ್​.ವಿ. ದತ್ತ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಿ ಎಂದು ದತ್ತಾ ಅವರ ಬೆಂಬಲಿಗರು ಬಹಿರಂಗವಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯಗೆ ಸೋಮವಾರ ಮನವಿ ಮಾಡಿದ್ದಾರೆ. ಸಂಕ್ರಾಂತಿ ಬಳಿಕ ಮಾಜಿ ಶಾಸಕ ವೈಎಸ್​ವಿ ದತ್ತ ಕಾಂಗ್ರೆಸ್​ ಸೇರಲಿದ್ದಾರೆ ಎಂದು ಹರಿದಾಡುತ್ತಿರವ ಸುದ್ದಿಗೆ ದತ್ತ ಬೆಂಬಲಿಗರ ಈ ಮಾತು ಪುಷ್ಟಿ ನೀಡುವಂತಿದೆ.
ರೈತರ ವಿಚಾರವಾಗಿ ದತ್ತ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಈ ವೇಳೆ ಬೆಂಬಲಿಗರು ಈ ಪ್ರಸ್ತಾಪ ಮಾಡಿದರು. ಸಿದ್ದರಾಮಯ್ಯನವರೇ ಕೃಷ್ಣಮೂರ್ತಿ ಕಾಲದಿಂದಲೂ ನೀವು ಹೇಳಿದಂತೆಯೇ ಮಾಡಿದ್ದೇವೆ, ಇದೊಂದು ಬಾರಿ ದತ್ತ ಅವರಿಗೆ ಅವಕಾಶ ಮಾಡಿಕೊಡಿ ಎಂದು ಬೆಂಬಲಿಗರು ಮನವಿ ಮಾಡಿದರು.
ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದತ್ತ ಕಾಂಗ್ರೆಸ್​ ಸೇರುವುದು ಬಿಡುವುದು ಅವರೇ ನಿರ್ಧರಿಸಬೇಕು. ಅವರ ಬೆಂಬಲಿಗರು ದತ್ತ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಿ ಅಂತ ಹೇಳಿದರು. ಆದರೆ ಅದನ್ನ ದತ್ತ ಅವರೇ ನಿರ್ಧಾರ ಮಾಡಬೇಕು. ನೋಡೋಣ ಮುಂದೆ ಏನೇನಾಗುತ್ತೆ ಅಂತ ಎಂದರು.
ಹತ್ತು ದಿನದ ಹಿಂದಷ್ಟೇ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಅರೇಕಲ್ಲಮ್ಮ ದೇವಿಯ ಬಾನಸೇವೆ ಅಂಗವಾಗಿ ವೈಎಸ್​ವಿ ದತ್ತ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಂಸದ ಪ್ರಜ್ವಲ್​ ರೇವಣ್ಣ, ಜಾತ್ಯತಿತ ನಿಲುವಿನ ಕಟ್ಟಾಳು ದತ್ತ. ಅವರು ಕಾಂಗ್ರೆಸ್​ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಆರು ತಿಂಗಳಿಂದ ಕಾಂಗ್ರೆಸ್​ನವರೇ ಸೃಷ್ಟಿ ಮಾಡಿರುವ ದತ್ತ ಕಾಂಗ್ರೆಸ್​ ಸೇರ್ಪಡೆ ಕುರಿತಾದ ರೆಕ್ಕೆಪುಕ್ಕವಿಲ್ಲದ ಮಾಹಿತಿ ಹರಿದಾಡುತ್ತಿದೆ. ಇದಕ್ಕೆ ತೆರೆ ಎಳೆಯಬೇಕಾಗಿದೆ. ಜೆಡಿಎಸ್​ ಕಾರ್ಯಕರ್ತರು ಇಂಥ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲರಾಗಬೇಕಿದೆ. ದತ್ತಣ್ಣ ಜೆಡಿಎಸ್​ನಲ್ಲಿ ಭದ್ರವಾಗಿ ನೆಲೆಯೂರಿದ್ದು ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದಿದ್ದರು.
ವೈಎಸ್​ವಿ ದತ್ತ ಕಾಂಗ್ರೆಸ್​ ಸೇರ್ಪಡೆ ಕುರಿತ ಸುದ್ದಿಗೆ ತೆರೆ ಎಳೆದ ಸಂಸದ ಪ್ರಜ್ವಲ್​ ರೇವಣ್ಣ

ಕರೊನಾಗೆ ಗಂಡ ಬಲಿ: ಕಂಗಾಲಾದ ಪತ್ನಿ-ಮಗ: ವಿಧವೆಗೆ ಬಾಳು ಕೊಟ್ಟು ಮಾದರಿಯಾದ ಮೃತನ ಸ್ನೇಹಿತ!

ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಭೀಕರ ಕೊಲೆ: ಮನೆ ಬಾಗಿಲು ಮುರಿದಿಲ್ಲ.. ಆ ರಾತ್ರಿ ಇವರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
