ಬೆಂಗಳೂರು:ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಸಿಗರೇಟ್ ಸೇದುತ್ತಿರುವ ಫೋಟೋ  ಸೋಶಿಯಲ್​​ ಮೀಡಿಯಾದಲ್ಲಿ  ವೈರಲ್​ ಆಗುತ್ತಿದ್ದಂತೆ,ವಿಡಿಯೋ ಕಾಲ್​​ ಮಾಡಿ ಮಾತನಾಡಿದ್ದ ವಿಡಿಯೋ ಹರಿದಾಡುತ್ತಿತ್ತು.  ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ  ದರ್ಶನ್​​ ಜತೆ ಜೈಲು ಸೇರಿದ್ದ ಆರೋಪಿಗಳ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್​​ ರಾಜಾತಿಥ್ಯದ ಫೋಟೋ ವೈರಲ್​ ಆಗಿದೆ. ವಿಲ್ಸನ್ ಗಾರ್ಡನ್​​ ನಾಗ, ಕುಳ್ಳ ಸೀನ, ಮ್ಯಾನೇಜರ್​ ನಾಗರಾಜು ಜೊತೆಗೆ​​ ಕುಳಿತುಕೊಂಡು ಟೀ, ಸಿಗರೇಟ್​​ ಸೇದಿಕೊಂಡು ಆರಾಮಾಗಿ ಕುಳಿತಿರುವ ಫೋಟೋ ವೈರಲ್​ ಆಗಿದೆ.

ಈಗ ರೌಡಿಶೀಟರ್‌ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಹಾಯ್ ಚಿನ್ನ ಹೇಗಿದ್ಯಾ ಅಂತಾ ಮಾತನಾಡುತ್ತಿರೋ ವಿಡಿಯೋವೊಂದು ಹಲ್‌ಚಲ್ ಎಬ್ಬಿಸಿದೆ. ರಾಜಾತಿಥ್ಯದ ಜೊತೆಗೆ ಹೊರ ಜಗತ್ತನ್ನ ವಿಡಿಯೋ ಕಾಲ್‌ನಲ್ಲಿ ನೋಡಬಹುದು ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆ.
ಈ ಎಲ್ಲಾ ವಿಡಿಯೋ, ಫೋಟೋ  ಸುದ್ದಿಗಳು ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ, ರೇಣುಕಾಸ್ವಾಮಿ ಅವರ ತಂದೆ ಹಾಗೂ ದರ್ಶನ್​​ ಮತ್ತು ಗ್ಯಾಂಗ್​​ ಮಾಡಿದ್ದಾರೆ ಎನ್ನಲಾದ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇನ್ನಿತರ ಆರೋಪಿಗಳ ಕುಟುಂಬಸ್ಥರು ಖಾಸಗಿವಾಹಿನಿ ಜತೆ ಮಾತನಾಡಿ ಆಕ್ರೋಶ ಹೊರ ಹಾಕಿದ್ದಾರೆ.

A7 ಆರೋಪಿ ಅನು@ ಅನುಕುಮಾರ್ ತಾಯಿ ಜಯಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರನ್ನು ಹೊಗಳಿದ್ರೆ ನಮಗೆ ಬರೋದು ಏನಿದೆ. ದರ್ಶನ್ ಕರುಣೆ ಇಟ್ಟು ನಮ್ಮ ಮಕ್ಕಳನ್ನು ಬಿಡಿಸಬೇಕು. ನಾನು ಜೈಲಿಗೆ ಹೋಗಿಲ್ಲ, ಮಗನನ್ನು ಭೇಟಿ ಮಾಡಿಲ್ಲ. ನಮ್ಮ ಮಗನನ್ನು ಬಿಡಿಸಿಕೊಂಡು ಬರೋಕೆ ನಮ್ಮ ಕೈಯ್ಯಲ್ಲಿ ಶಕ್ತಿಯಿಲ್ಲ. ದರ್ಶನ್ ಜೊತೆ ಹೋಗಿದಾನೆ. ಹಾಗಾಗಿ ಅವರೇ ಸಹಾಯ ಮಾಡಬೇಕು. ನಮ್ಮ ಹತ್ರ ಹಣ ಕೊಟ್ಟು ಬಿಡಿಸಿಕೊಂಡು ಬರುವಷ್ಟು ಶಕ್ತಿ ಇದ್ಯಾ? ನಮ್ಮ ಪರಿಸ್ಥಿತಿ ಹೀಗಿದೆ. ಒಳಗಿಂದು ಯಾರು ಕಂಡೋರು. ಸೊಸೈಟಿ ರಾಗಿ, ಅಕ್ಕಿ ತಿಂದು ಜೀವನ ಮಾಡ್ತೀವಿ. ರ್ಶನ್​ಗೆ ಜೈಲಲ್ಲಿ ಎಲ್ಲಾ ಸಿಕ್ತಿದೆ. ಬಡವರ ಮಕ್ಕಳ ಗತಿ ಏನು? ದುಡಿದು ತಿನ್ನೋ ಮಕ್ಕಳು ಜೈಲಿಗೆ ಹೋಗಿ ಕೂತಿದ್ದಾರೆ. ನಮಗೇನು ಜಮೀನು ಇದೆಯಾ, ಇರೋದೊಂದು ಗುಡಿಸಲು. ನಮ್ಮ ಹುಡುಗರು ಜೈಲಿಗೆ ಹೋಗಿ ನೋಡ್ಕೊಂಡು ಬಂದಿದ್ದಾರೆ. ದುಡಿಯೋ ಮಕ್ಕಳನ್ನು ತಂದು ಕೂಡಿ ಹಾಕಿದೀನಿ ಅನ್ನೋದು ಅವರಿಗೂ ಇರಬೇಕು ಎಂದು ಬೇಸರ ಹೊರ ಹಾಕಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರಘು A4 ಆರೋಪಿಯಾಗಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಸದ್ಯ ದರ್ಶನ್​ ರಾಜಾತಿಥ್ಯ ಕಂಡು ರಘು ಸಹೋದರ ಮುರಳಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್​  ಹೆಂಗಿದಾರೋ ಅವರ ಜೊತೆಗಿರೋರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ದರ್ಶನ್ ಇತರ ಆರೋಪಿಗಳನ್ನೂ ಕೂಡ ಹೊರತರಲು ನೋಡಬೇಕು. ನನ್ನ ತಮ್ಮ ರಘು. ಇನ್ನೊಬ್ಬ ನನ್ನ ತಮ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ಆದಷ್ಟು ಬೇಗ ಬರ್ತೀನಿ ಅಂತಾ ಹೇಳಿದ್ದಾನೆ. ನನ್ನ ತಾಯಿ ತೀರಿದಾಗ ದರ್ಶನ್ ಕಡೆಯವರು 25 ಸಾವಿರ ಹಣ ಕಳುಹಿಸಿದ್ರು. ಅವರ ಕಡೆಯವರೇ ಬಂದು ಹಣ ಕೊಟ್ಟು ಹೋದ್ರು. ರಘುಗೆ ಹೆಂಡ್ತಿ ಇದ್ದಾಳೆ, ಅವರಿಗೆ ದರ್ಶನ್ ಕಡೆಯವರು ಸಹಾಯ ಮಾಡ್ತಾರೆ. ಆಮೇಲೆ ದರ್ಶನ್ ಕಡೆಯವರು ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಮುರಳಿ ಹೇಳಿದ್ದಾರೆ.
ನಟೋರಿಯಸ್‌ ರೌಡಿಗಳ ಜತೆ ದರ್ಶನ್​! ಪರಪ್ಪನ ಅಗ್ರಹಾರ ಜೈಲಿನಿಂದ ದಾಸನ ಫೋಟೋ ಲೀಕ್ ಆಗಿದ್ದು ಹೇಗೆ?

6 ವರ್ಷದ ಮಗನ ಮುಂದೆಯೇ ಮದ್ವೆಯಾದ ನಟಿ; ಆ್ಯಮಿ ಜಾಕ್ಸನ್​ಗೆ ಕೊನೆಗೂ ಕೂಡಿ ಬಂತು ಕಲ್ಯಾಣ ಯೋಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − ten =
Remember me
