| ಕೀರ್ತಿನಾರಾಯಣ ಸಿ. ಬೆಂಗಳೂರುಬೋಗಸ್ ಇನ್​ವಾಯ್ಸ್​ಗಳನ್ನು ಸೃಷ್ಟಿಸುವ ಮುಖೇನ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಂಚನೆ ಮಾಡುತ್ತಿದ್ದ ಜಾಲಗಳೀಗ ಹೊಸ ಮಾರ್ಗ ಕಂಡುಕೊಂಡಿವೆ. ಆಧಾರ್ ಹಾಗೂ ಪಾನ್ ಕಾರ್ಡ್​ಗಳನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂ. ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಇಂತಹ 52 ಪ್ರಕರಣ ಪತ್ತೆಯಾಗಿದ್ದು, 137 ಕೋಟಿ ರೂ. ವಂಚಿಸಿರುವುದು ದೃಢಪಟ್ಟಿದೆ. ದೇಶಾದ್ಯಂತ ವಂಚನೆಯ ಮೊತ್ತ 27 ಸಾವಿರ ಕೋಟಿ ರೂ. ದಾಟಿದೆ
ಯಾರದ್ದೋ ಆಧಾರ್ ಹಾಗೂ ಪಾನ್ ಕಾರ್ಡ್ ಕೊಟ್ಟು ಜಿಎಸ್​ಟಿ ನಕಲಿ ನೋಂದಣಿ ಪತ್ತೆಹಚ್ಚುವ ಸಲುವಾಗಿಯೇ 2023ರ ಮೇ 16ರಿಂದ ಜು.15ರವರೆಗೆ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್್ಸ ಮಂಡಳಿ (ಸಿಬಿಐಸಿ) ಅಧಿಕಾರಿಗಳು ದೇಶಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದಾಗ ವಂಚನೆ ವಿಚಾರ ಬಯಲಾಗಿದೆ. ಕರ್ನಾಟಕದಲ್ಲಿ 2023ರ ಜು.30ರವರೆಗೆ ಆಧಾರ್ ಹಾಗೂ ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಜಿಎಸ್​ಟಿ ನೋಂದಣಿ ಮಾಡಿಸಿರುವ 52 ಪ್ರಕರಣಗಳು ಪತ್ತೆಯಾಗಿವೆ. 137.45 ಕೋಟಿ ವಂಚನೆಯಾಗಿದ್ದು, ಇದರಲ್ಲಿ ಬರೀ 66 ಲಕ್ಷ ರೂ. ಮರು ವಸೂಲಿ ಮಾಡಲಾಗಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿಕೊಂಡರೆ ತಮಿಳುನಾಡಿನಲ್ಲಿ ಅತಿಹೆಚ್ಚು 632 ಆಧಾರ್ ಹಾಗೂ ಪಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲೇ ಅತಿ ಕಡಿಮೆ 52 ಕೇಸ್ ಪತ್ತೆಯಾಗಿವೆ. ಉಳಿದಂತೆ ತೆಲಂಗಾಣದಲ್ಲಿ 137, ಕೇರಳದಲ್ಲಿ 135, ಆಂಧ್ರಪ್ರದೇಶದಲ್ಲಿ 91 ವಂಚನೆ ಪ್ರಕರಣಗಳು ಈವರೆಗೆ ಬೆಳಕಿಗೆ ಬಂದಿವೆ. ನಕಲಿ ಬಿಲ್ಲಿಂಗ್ ಹಾಗೂ ನಕಲಿ ಜಿಎಸ್​ಟಿ ನೋಂದಣಿ ತಡೆಯಲು ಸಿಜಿಎಸ್​ಟಿ ನಿಯಮ 2017ರ (8) ತಿದ್ದುಪಡಿ ತರಲಾಗಿದೆ. ಪ್ಯಾನ್ ಕಾರ್ಡ್​ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಮತ್ತು ಇಮೇಲ್ ವಿಳಾಸದಲ್ಲಿ ಒಂದು ಬಾರಿ ಪಾಸ್​ವರ್ಡ್ (ಒಟಿಪಿ) ಆಧಾರಿತ ಪರಿಶೀಲನೆ ವ್ಯವಸ್ಥೆಯನ್ನು ಈಗಾಗಲೇ 3 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಇದಲ್ಲದೆ, ನೋಂದಣಿ ಅರ್ಜಿದಾರರ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣದ ಬಗ್ಗೆಯೂ ಚಿಂತನೆ ನಡೆದಿದೆ. ಜತೆಗೆ ಆಧಾರ್ ದೃಢೀಕರಣದ ನಂತರವೂ ಅನುಮಾನಾಸ್ಪದ ಪ್ರಕರಣಗಳಲ್ಲಿ ಭೌತಿಕ ಪರಿಶೀಲನೆ ನಡೆಸುವ ನಿಯಮವನ್ನೂ ಜಾರಿಗೆ ತರಲಾಗುತ್ತಿದೆ.
ಜಿಎಸ್​ಟಿ ಪಾವತಿಸಿರುವಂತೆ ನಕಲಿ ಬಿಲ್​ಗಳನ್ನು ಸೃಷ್ಟಿಸಿ ಜಿಎಸ್​ಟಿ ಇನ್​ಪುಟ್ ಕ್ರೆಡಿಟ್ ಪಡೆಯುವ ಜಾಲ ಒಂದೆಡೆಯಾದರೆ, ಬಿಲ್​ಗಳನ್ನು ಕೊಡದೆ ತೆರಿಗೆ ವಂಚಿಸುವ ಜಾಲ ಇನ್ನೊಂದೆಡೆ ಸಕ್ರಿಯವಾಗಿದೆ. ಈಗ ಯಾರದ್ದೋ ಆಧಾರ್ ಹಾಗೂ ಪಾನ್ ನಂಬರ್ ಅನ್ನು ದುರ್ಬಳಕೆ ಮಾಡಿಕೊಂಡು, ಜಿಎಸ್​ಟಿ ನೋಂದಣಿ ಮಾಡಲಾಗುತ್ತಿದೆ. ಈ ವಂಚನೆಯಲ್ಲಿ ಕಂಪನಿ ಮಾಲೀಕರು, ಕಮೀಷನ್ ಆಸೆಗೆ ಒಳಗಾಗಿ ಆಧಾರ್, ಪಾನ್ ಕಾರ್ಡ್ ಮಾರಿಕೊಳ್ಳುವ ಜನರು, ಕೆಲ ಚಾರ್ಟೆರ್ಡ್ ಅಕೌಂಟೆಂಟ್​ಗಳು ಹಾಗೂ ತೆರಿಗೆ ಅಧಿಕಾರಿಗಳೂ ಶಾಮೀಲಾಗಿರುವ ಆರೋಪವಿದೆ.
ದೇಶದಲ್ಲಿ 2017ರ ಜು.1ರಿಂದ 2019 ಜೂ.25ರವರೆಗೆ 13,829 ಕೋಟಿ ರೂ. ಹಾಗೂ 2020-21 ಹಾಗೂ 2021-22ರಲ್ಲಿ 55,575 ಕೋಟಿ ರೂ. ವಂಚನೆ ನಡೆದಿದೆ. 2017ರಲ್ಲಿ ಜಿಎಸ್​ಟಿ ಜಾರಿಯಾದಾಗಿನಿಂದ ಈವರೆಗೆ 68 ಸಾವಿರಕ್ಕೂ ಕೋಟಿ ರೂ.ಗಳಿಗೂ ಅಧಿಕ ವಂಚನೆ ನಡೆದಿದೆ. 2020-21ರ ಅವಧಿಯಲ್ಲಿ ವಂಚನೆಯಾಗಿದ್ದ ಜಿಎಸ್​ಟಿಯಲ್ಲಿ 2 ಸಾವಿರ ಕೋಟಿ ರೂ. ಮರು ವಸೂಲಿ ಮಾಡಲಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
