ಪಡುಬಿದ್ರಿ:ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪರ್ಯಾಯ ಸರ್ವಜ್ಞ ಪೀಠ ಏರಲಿದ್ದಾರೆ ಎಂದು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸೋಮವಾರ ಪ್ರಕಟಿಸಿದರು.
ಎರಡು ಪರ್ಯಾಯ ನಡೆಸಿದ್ದೇವೆ. ಗುರುಗಳ ಕ್ರಮದಂತೆ ಈ ಬಾರಿಯ ಪರ್ಯಾಯ ಪೀಠವನ್ನು ಕಿರಿಯ ಶ್ರೀಗಳು ಏರಲಿದ್ದಾರೆ. ಅದಕ್ಕಾಗಿ ಅವರನ್ನು ಒಪ್ಪಿಸಿದ್ದೇವೆ. ನನಗಿಂತ ಉತ್ತಮವಾಗಿ ಅವರು ಪರ್ಯಾಯ ನಡೆಸುತ್ತಾರೆಂಬ ವಿಶ್ವಾಸವಿದೆ ಎಂದು ವಿಶ್ವಪ್ರಿಯ ತೀರ್ಥರು ಅದಮಾರು ಮೂಲ ಮಠದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪೀಠದಲ್ಲಿ ಯಾರು ಕುಳಿತರೇನು? ನಮ್ಮಿಬ್ಬರ ಸಂಕಲ್ಪ ಒಂದೇ. ಕೃಷ್ಣ ಮಾಹಾಪೂಜೆ ಸಾಂಗವಾಗಿ ನೆರವೇರಬೇಕು. ಲೋಕದ ಕ್ಷೇಮವಾಗಬೇಕು. ಕೃಷ್ಣನಿಗೆ ಯಾವ ಕಾಲಕ್ಕೆ ಸಮಾಜಕ್ಕೆ ಏನು ಕೊಡಬೇಕೆಂದು ಗೊತ್ತಿದೆ. ಅದನ್ನು ಆತ ಕೊಡುತ್ತಾನೆ ಎಂದರು.
ಹಿರಿಯ ಶ್ರೀಗಳ ಆಜ್ಞೆಯಂತೆ ಪರ್ಯಾಯ ನಡೆಸುತ್ತೇನೆ. ಸಂಪ್ರದಾಯಕ್ಕೆ ತೊಡಕಾಗದಂತೆ ಬಡಗು ಮಾಳಿಗೆಯಲ್ಲಿ ಅರಳುಗದ್ದಿಗೆ ಸಹಿತ ಒಳಗಿನ ಕಾರ್ಯಗಳು ನಡೆಯಲಿವೆ. ಒಳಗಿನ ಪೂಜೆಗಳ ಬಳಿಕ ದರ್ಬಾರು ನಡೆಯಲಿದೆ. ಜನರ ಅನುಕೂಲತೆ ದೃಷ್ಟಿಯಿಂದ, ಎಲ್ಲ ಸ್ವಾಮೀಜಿಗಳ ಒಪ್ಪಿಗೆಯಂತೆ ಪರ್ಯಾಯ ದರ್ಬಾರು ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇದು ನಿರೆಂತರವೆಂದೇನಿಲ್ಲ. ಸಾಧಕ-ಬಾಧಕಗಳನ್ನರಿತು ಮುಂದುವರಿಸಲೂಬಹುದು.
| ಶ್ರೀ ಈಶಪ್ರಿಯ ತೀರ್ಥರು ಅದಮಾರು ಮಠ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 7 =
Remember me
