ಬೆಂಗಳೂರು: ಆಮ್ ಆದ್ಮಿ ಪಕ್ಷದ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ 2022ನೇ ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿಯ ಹಂತದಲ್ಲಿದ್ದ ಶಿವಾನಂದ ಫ್ಲೈ ಓವರ್ ಪ್ರಕರಣದಲ್ಲಿ 40 ಪರ್ಸೆಂಟ್ ಕಮಿಷನ್ ಹಗರಣ ಆಗಿದೆ ಎಂದು ಆರೋಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಇಂದು ಎಎಪಿ ನಾಯಕರುಗಳಿಗೆ ನ್ಯಾಯಾಲಯದಿಂದ ಬಿಡುಗಡೆ ಭಾಗ್ಯ ದೊರೆತಿದೆ ಎಂದು ಎಎಪಿ ತಿಳಿಸಿದೆ.
ಬೆಂಗಳೂರು ನಗರ ಒಂದನೇ ಎ ಸಿ ಎಂ ಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಆರೋಪಿಗಳ ಪರ ಖ್ಯಾತ ವಕೀಲ ದಿವಾಕರ್ ವಾದ ಮಂಡಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ನೇತೃತ್ವದ ಇನ್ನಿತರ 17 ಆರೋಪಿಗಳಿಗೆ ಪ್ರಕರಣದಿಂದ ಮುಕ್ತಿ ದೊರೆತಂತಾಗಿದೆ.ವಕೀಲ ದಿವಾಕರ್ ಆಮ್ ಆದ್ಮಿ ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಾನ್ಯ ನ್ಯಾಯಾಧೀಶರು ಎಲ್ಲ 17 ಜನ ಆರೋಪಿಗಳಿಗೆ ಬಿಡುಗಡೆ ಭಾಗ್ಯ ನೀಡಿದ್ದಾರೆ . ರಾಜ್ಯದಲ್ಲಿನ ಭ್ರಷ್ಟಾಚಾರ ಪ್ರಕರಣಗಳಲ್ಲಿ ಆಮ್ ಆದ್ಮಿ ಪಕ್ಷವು ಸತತ ಹೋರಾಟವನ್ನು ಇದೇ ರೀತಿ ಮುಂದುವರಿಸಲಿದೆ ಹಾಗೂ ಪೊಲೀಸರ ಸುಳ್ಳು ಮೊಕ್ಕದ್ದಮೆಗಳಿಗೆ ಹೆದರುವುದಿಲ್ಲ ಎಂದು ಮೋಹನ್ ದಾಸರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + six =
Remember me
