ಶಿವಮೊಗ್ಗ:ರಾಜ್ಯದಲ್ಲಿ ಸಿಎಂ ಬದಲಾವಣೆಯ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿದೆ. ಇದೆಲ್ಲವೂ ಊಹಾಪೋಹ ಎಂದು ಬಿಜೆಪಿಯ ಪ್ರಮುಖ ನಾಯಕರೇ ಸ್ಪಷ್ಟಪಡಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಎಂಎಲ್​ಸಿ ಆಯನೂರು ಮಂಜುನಾಥ, ‘ಸಿಎಂ ರೇಸ್​ನಲ್ಲಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಮತ್ತೊಬ್ಬ ಪ್ರತಿಸ್ಪರ್ಧಿ ಬಿಜೆಪಿಯಲ್ಲಿ ಇಲ್ಲ’ ಎಂದಿದ್ದಾರೆ.
ವಯೋಮಿತಿ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಮಾಡುವುದಿಲ್ಲ. ಇಳಿ ವಯಸ್ಸಿನಲ್ಲೂ ಯಡಿಯೂರಪ್ಪ ಅವರಂತಹ ಸಕ್ರಿಯ ರಾಜಕಾರಣಿ ದೇಶದಲ್ಲಿ ಮತ್ತೊಬ್ಬರಿಲ್ಲ. ಕರೊನಾ ಬಂದ ಸಂದರ್ಭದಲ್ಲೂ ಆಸ್ಪತ್ರೆಯಲ್ಲಿದ್ದುಕೊಂಡೇ ಆಡಳಿತ ನಡೆಸಿದ್ದು ಅದಕ್ಕೆ ಸಾಕ್ಷಿ ಎಂದು ಸುದ್ದಿಗಾರರಿಗೆ ತಿಳಿಸಿದರು.ಇದನ್ನೂ ಓದಿರಿಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!
ಹೋರಾಟ ಯಡಿಯೂರಪ್ಪ ಅವರ ರಕ್ತದಲ್ಲಿ ಬೆರೆತು ಹೋಗಿದೆ. ಬಿ.ಎಸ್​. ಯಡಿಯೂರಪ್ಪ ಅವಧಿಪೂರ್ಣಗೊಳಿಸಲಿದ್ದಾರೆ. ಮುಂದಿನ ಚುನಾವಣೆವರೆಗೂ ಅವರೇ ಸಿಎಂ ಆಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆಯನೂರು ಮಂಜುನಾಥ ಹೇಳಿದರು.
‘ಯಡಿಯೂರಪ್ಪ ಶಿವಮೊಗ್ಗಕ್ಕೆ ಸೀಮಿತ, ರಾಜ್ಯಕ್ಕಲ್ಲ’ ಎಂಬ ಶಾಸಕ ಉಮೇಶ್​ ಕತ್ತಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಆಯನೂರು, ‘ಉಮೇಶ್​ ಕತ್ತಿ ಯಾವುದೋ ಗುಂಗಲ್ಲಿದ್ದಾಗ ಆ ರೀತಿ ಹೇಳಿಕೆ ನೀಡಿರಬಹುದು. ರಾಜ್ಯವನ್ನೇ ಇಬ್ಭಾಗ ಮಾಡಲು ಹೊರಟಿದ್ದ ಅವರು ಹೆಚ್ಚು ಗುಟ್ಖಾ ಹಾಕುತ್ತಾರೆ. ಅವರ ಈ ಹೇಳಿಕೆ ಅದರ ಪರಿಣಾಮ ಇರಬಹುದು’ ಎಂದು ಕುಟುಕಿದರು.
‘ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ಅವರೇ ರಾಜ್ಯದ ಮುಖ್ಯಮಂತ್ರಿ…’

ಪಕ್ಷಾಂತರ ಗುಮ್ಮ ಮತ್ತೆ ಬಂತು! ಜೆಡಿಎಸ್​ ತೊರೆದು ‘ಕೈ’ ಹಿಡಿಯಲು ಕ್ಷಣಗಣನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 5 =
Remember me
