ಬೆಂಗಳೂರು:ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಮಹಮದ್ ಮನ್ಸೂರ್ ಖಾನ್​ಗೆ ದುಬೈನಲ್ಲಿ ಆಶ್ರಯ ನೀಡಿದ್ದ ಆಪ್ತ ಅಬ್ಬಾಸ್ ಮೊಹಮದ್ ಖಾನ್ ವಿಚಾರಣೆಗೆ ಹಾಜರಾಗದೇ ಪ್ರಕರಣದಿಂದ ಪಾರಾಗಲು ಯತ್ನಿಸಿದ್ದಾನೆ ಎನ್ನ ಲಾಗಿದೆ. ಐಎಂಎ ಪ್ರಕ ರಣದಲ್ಲಿ ಶಾಮೀಲಾದ ಐಎಎಸ್, ಐಪಿಎಸ್ ಅಧಿಕಾರಿಗಳು, ಕೆಲ ರಾಜಕಾರಣಿಗಳ ಬಗ್ಗೆ ತನಿಖೆ ನಡೆಸಿರುವ ಸಿಬಿಐ, ಅಬ್ಬಾಸ್ ವಿರುದ್ಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಿಲ್ಲ ಎನ್ನಲಾಗಿದೆ. ವಿಚಾರಣೆ ವೇಳೆ ಮನ್ಸೂರ್ ಆಪ್ತ ಅಬ್ಬಾಸ್ ಬಗ್ಗೆ ಮಾಹಿತಿ ನೀಡಿದ್ದರೂ, ಆತ ವಿದೇಶದಲ್ಲಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ವಂಚಿಸಿ ಮನ್ಸೂರ್ ದುಬೈಗೆ ಹೋದ ವೇಳೆ ಆತನಿಗೆ ಅಬ್ಬಾಸ್ ದುಬೈನಲ್ಲಿರುವ ಮನೆಯಲ್ಲಿ ಆಶ್ರಯ ನೀಡಿದ್ದ. ವಿಲ್ಸನ್ ಗಾರ್ಡನ್​ನಲ್ಲಿರುವ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಈ ಹಿಂದೆ ಐಎಂಎ ಕಂಪನಿ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಯಿಂದ ಅಬ್ಬಾಸ್ ಕೋಟ್ಯಂತರ ರೂ. ಡ್ರಾ ಮಾಡಿಸಿಕೊಂಡಿರುವುದು ಜಾರಿ ನಿರ್ದೇಶನಾಲಯ (ಇಡಿ) ತನಿಖೆಯಲ್ಲಿ ಬಯಲಾಗಿತ್ತು. ಈತನಿಗೆ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ನೋಟಿಸ್ ಜಾರಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಇದಾದ ಬಳಿಕ ಅಬ್ಬಾಸ್ ವಿರುದ್ಧ ಎನ್​ಬಿಡಬ್ಲ್ಯೂ ನೋಟಿಸ್ ಹೊರಡಿಸಿ ದುಬೈ ರಾಯಭಾರಿ ಕಚೇರಿಗೆ ಈತನ ಬಗ್ಗೆ ಮಾಹಿತಿ ನೀಡಲಾಗಿತ್ತು. ಆರಂಭದಲ್ಲಿ ಸಿಬಿಐ ಅಧಿಕಾರಿಗಳು ಇಡಿ ಅಧಿಕಾರಿಗಳಿಂದ ಈತನ ಬಗ್ಗೆ ಮಾಹಿತಿ ಕಲೆ ಹಾಕಿದ್ದರೂ, ನಂತರ ಯಾವುದೇ ತನಿಖೆ ನಡೆಸದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಐಎಂಎ ಖಾತೆಯಿಂದ ಹಣ ಡ್ರಾ ಮಾಡಿದ್ದ:ಗ್ರಾಹಕರು ಹೂಡಿಕೆ ಮಾಡುತ್ತಿದ್ದ ಹಣವನ್ನು ಕಂಪನಿ ನಿರ್ದೇಶಕರು ವಿಲ್ಸನ್ ಗಾರ್ಡನ್​ನ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿದ್ದ ಐಎಂಎ ಖಾತೆಗೆ ಜಮೆ ಮಾಡುತ್ತಿದ್ದರು. ಅಬ್ಬಾಸ್ ಕೆಲ ವರ್ಷಗಳ ಹಿಂದೆ ಈ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರೂ.ಗಳನ್ನು ಡ್ರಾ ಮಾಡಿಸಿಕೊಂಡಿದ್ದ. ಇದೇ ಹಣದಲ್ಲಿ ಹಚ್ಚಿನ್ಸ್
ರಸ್ತೆಯ ಮಾರುತಿ ಸೇವಾನಗರದಲ್ಲಿ ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿ ಖರೀದಿಸಿದ್ದ. ಇದಕ್ಕೆ ಮನ್ಸೂರ್ ಸಹಕಾರ ನೀಡಿದ್ದ. ಐಎಂಎ ಕಂಪನಿ ಸ್ಥಾಪಿಸುವಂತೆ ಪ್ರೇರೇಪಣೆ ನೀಡಿದ್ದು ಅಬ್ಬಾಸ್ ಎಂದು ಮನ್ಸೂರ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಅರಬ್ ದೇಶದ ಶ್ರೀಮಂತ ಶೇಖ್​ಗಳ ಒಡನಾಟ ಹೊಂದಿರುವ ಅಬ್ಬಾಸ್​ಗೆ ದುಬೈ ಶೇಖ್​ಗಳೇ ಆಸರೆ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಲೆಕ್ಕಪರಿಶೋದಕನಿಂದ ಮಾಹಿತಿ:ಈ ನಡುವೆ ಐಎಂಎ ಕಂಪನಿ ಲೆಕ್ಕಪರಿಶೋಧನೆ ನಡೆಸುತ್ತಿದ್ದ ಇಕ್ಬಾಲ್ ಖಾನ್ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ. ವಿಚಾರಣೆ ವೇಳೆ ಇವರಿಂದ ಕಂಪನಿಗೆ ಸಂಬಂಧಿಸಿದ ಕುತೂಹಲಕಾರಿ ಸಂಗತಿಗಳು ಹೊರ ಬಿದ್ದಿವೆ. ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಮೇಲೆ ದೊಡ್ಡ ಫೈನಾನ್ಸಿಯರ್ ಹಾಗೂ ಉದ್ಯಮಿಗಳಿಗೆ ಬ್ಯಾಂಕ್​ಗಳಿಂದ ನೂರಾರು ಕೋಟಿ ರೂ. ಸಾಲ ಕೊಡಿಸುತ್ತಿದ್ದ ಶ್ಯಾಮ್ ಶರ್ಮಾ ಎಂಬಾತನನ್ನು ಮನ್ಸೂರ್ ಸಂರ್ಪಸಿದ್ದ. ಕರ್ನಾಟಕ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (ಕ್ಲಿಯರೆನ್ಸ್ ಸರ್ಟಿಫಿಕೇಟ್) ಪಡೆಯಲು ಮನ್ಸೂರ್ ಕೆಲ ಸರ್ಕಾರಿ ಅಧಿಕಾರಿಗಳಿಗೆ ಕೋಟ್ಯಂತರ ರೂ. ಲಂಚ ನೀಡಿದ್ದ. ಕೊನೇ ಘಳಿಗೆಯಲ್ಲಿ ಕಾರಣಾಂತರಗಳಿಂದ ಮನ್ಸೂರ್​ಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನ್ಸೂರ್​ಗೆ ಸಾಲ ಸಿಕ್ಕಿರಲಿಲ್ಲ ಎಂಬ ವಿಚಾರ ಇಕ್ಬಾಲ್ ವಿಚಾರಣೆ ವೇಳೆ ಹೊರಬಿದ್ದಿದೆ. ಐಎಂಎ ವಂಚಕ ಕಂಪನಿ ಎಂದು ತಿಳಿದಿದ್ದರೂ ಇಕ್ಬಾಲ್ ಕಂಪನಿಯ ಬ್ಯಾಲೆನ್ಸ್ ಶೀಟ್, ಲೆಕ್ಕಾಚಾರಗಳನ್ನು ಸರಿದೂಗಿಸುವ ಕೆಲಸ ಮಾಡುತ್ತಿದ್ದ.
100ಕ್ಕೂ ಅಧಿಕ ಖಾತೆ ತೆರೆದು ವ್ಯವಹಾರ
ಐಎಂಎ ಕಂಪನಿ ಹೆಸರಿನಲ್ಲಿ ಮನ್ಸೂರ್ 100ಕ್ಕೂ ಅಧಿಕ ಬ್ಯಾಂಕ್ ಖಾತೆ ತೆರೆದು ಮನ್ಸೂರ್ ವ್ಯವಹಾರ ನಡೆಸಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಗ್ರಾಹಕರಿಂದ ಹೂಡಿಕೆ ಮಾಡಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳಿಗೆ ಹಾಕುತ್ತಿದ್ದ. ರಿಯಲ್ ಎಸ್ಟೇಟ್ ಹಾಗೂ ಚಿನ್ನದ ವ್ಯಾಪಾರದಲ್ಲಿ ಬಂದ ಲಾಭಾಂಶ ಎಂದು ಬ್ಯಾಂಕ್​ಗೆ ದಾಖಲೆ ನೀಡುತ್ತಿದ್ದ.
| ಅವಿನಾಶ ಮೂಡಂಬಿಕಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − five =
Remember me
