ಮಂಡ್ಯ:ಇತ್ತೀಚೆಗೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಅಭಿ-ಅವಿವಾ ಜೋಡಿ ಕನ್ನಡ ನಾಡಿನ ಗಮನ ಸೆಳೆದಿದ್ದರು. ಮದುವೆ ಆದ ಮೇಲೆ ಬೀಗರೂಟ ಇಲ್ಲದಿದ್ದರೆ ಹೇಗೆ? ಮಂಡ್ಯ ಎಂದರೆ ಬೀಗರೂಟಕ್ಕೆ ಫೇಮಸ್​. ಈ ಹಿನ್ನೆಲೆಯಲ್ಲಿ ಇದೀಗ ಬೀಗರೂಟಕ್ಕೆ ಮದ್ದೂರು ಗೆಜ್ಜಲಗೆರೆ ಸಜ್ಜಾಗಿದೆ.

ಈ ದಿನ ಅಭಿ ಹಾಗೂ ಅವಿವಾ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಕನ್ನಡ ಚಿತ್ರರಂಗದ ಕೆಲ ತಾರೆಯರು ಕೂಡ ಅಂಬಿ ಮನೆಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮಂಡ್ಯ ಜನತೆಗೆ ಅಂಬಿ ಕುಟುಂಬ ಜರ್ಮನ್ ಟೆಂಟ್ ಹಾಕಿದ್ದು ಅದರ ಕೆಳಗೆ ಯಂಗ್​ ರೆಬಲ್​ ಸ್ಟಾರ್​ನ ಅದ್ಧೂರಿ ಬೀಗರೂಟ ನಡೆಯಲಿದೆ. ಬೆಳಗ್ಗೆ 11:00 ಗಂಟೆಯಿಂದಲೇ ಬಿಸಿ ಬಿಸಿ ಬಾಡೂಟ ಶುರುವಾಗಲಿದೆ ಎನ್ನಲಾಗಿದೆ.
ಜರ್ಮನ್​ ಟೆಂಟ್​ ಹೇಗಿದೆ? ಇಲ್ಲಿ ನೋಡಿ:

ನಾನ್ ಸ್ಟಾಪ್ ಭಕ್ಯ್ಯ ಭೋಜನ ಬಾಡೂಟ ಎಲ್ಲರ ಗಮನ ಸೆಳೆಯಲಿದ್ದು ದೊಡ್ಡ ಮೈದಾನದಲ್ಲಿ ನಾನ್‌ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ. ಈ ದಿನ ಸುಮಾರು 1 ಲಕ್ಷ ಜನ ಸೇರುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ 15 ಎಕರೆ ಜಾಗದಲ್ಲಿ ಶಾಮಿಯಾನ ಹಾಕಲಾಗಿದೆ.
ಬೆಳಗ್ಗೆ 11 ಗಂಟೆಗೇ ಊಟದ ವ್ಯವಸ್ಥೆ ಶುರುವಾಗಲಿದ್ದು ಸಂಜೆ ಎಲ್ಲಿವರೆಗೂ ಜನ ಬರ್ತಾರೋ ಅಲ್ಲಿವರೆಗೂ ಊಟ ನೀಡಲಾಗುತ್ತದೆ ಎನ್ನಲಾಗಿದೆ. ಮೂರು ಜನ ಅಡುಗೆ ಕ್ರೇಟರ್​ಗಳು ಊಟಕ್ಕೆ ಪ್ಲಾನ್ ಮಾಡಿದ್ದು ಇದರ ಸಂಪೂರ್ಣ ಜವಾಬ್ದಾರಿಯನ್ನು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಹೊತ್ತಿದ್ದಾರೆ ಎನ್ನಲಾಗಿದೆ.
ಬೀಗರೂಟದ ವಿಚಾರಕ್ಕೆ ಬಂದರೆ ಮಂಡ್ಯದಲ್ಲಿ ಬಾಡೂಟ ಫೇಮಸ್. ಸಾಮಾನ್ಯವಾಗಿ ಬೀಗರೂಟದಲ್ಲಿ ಮಟನ್, ಚಿಕನ್​ನದ್ದೇ ಪಾರುಪತ್ಯ ಜೋರಾಗಿರುತ್ತದೆ. ಅಭಿ-ಅವಿವಾ ಮದುವೆಯ ಬೀಗರೂಟಕ್ಕೆ ಬರೋಬ್ಬರಿ 7 ಟನ್ ಮಟನ್, 7 ಟನ್ ಚಿಕನ್ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಮಂಡ್ಯದ ಸ್ಥಳೀಯ ಬಾಣಸಿಗರಿಗೆ ಅಡುಗೆ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
