ಹಾಸನ:ಕಾಡಾನೆ ಉಪಟಳ ಮತ್ತೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ಪ್ರಾರಂಭವಾಗಿದೆ. ಈಗಾಗಲೇ ಬೇಲೂರು ತಾಲ್ಲೂಕಿನ, ಬಿಕ್ಕೋಡು ಆನೆ ಕ್ಯಾಂಪ್‌ಗೆ ಸಾಕಾನೆಗಳು ಬಂದಿವೆ. ಗುರುವಾರ (ಜ.11) ಕ್ಯಾಂಪಿಗೆ ಹರ್ಷ, ಸುಗ್ರೀವ, ಧನಂಜಯ, ಅಶ್ವತ್ಥಾಮ, ಪ್ರಶಾಂತ ಆನೆಗಳು ಬಂದಿದ್ದು, ಶುಕ್ರವಾರ ಅಭಿಮನ್ಯು ಸೇರಿದಂತೆ ಕರ್ನಾಟಕ ಭೀಮ, ಮಹೇಂದ್ರ, ಸೇರಿ ಇನ್ನೂ ಕೆಲವು ಸಾಕಾನೆಗಳು ಬರುವ ಬಗ್ಗೆ ವರದಿಯಾಗಿತ್ತು.
ಇದೀಗ ಹಾಸನದ ಕಾಡಿನಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕ್ಯಾಂಪ್​​​ನಲ್ಲಿ ಅಭಿಮನ್ಯು & ಟೀಮ್ ಕಾರ್ಯಾಚರಣೆಗೆ ಸಜ್ಜಾಗಿವೆ. ಈ ಬಾರಿ 10 ಸಾಕಾನೆ ಬಳಸಿ ಕಾಡಾನೆ ಸೆರೆ ಹಿಡಿಯುವ ಕಾರ್ಯಚರಣೆ ನಡೆಸಲಾಗುತ್ತಿದೆ. ಆದರೆ ಹಾಸನ ಸುತ್ತಮುತ್ತಲಿನ ಜನರು ಇದೀಗ ಕಾಡಿಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಏಕೆಂದರೆ ಈ ಬಾರಿ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ ಸೆರೆ ಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅರ್ಜುನನ್ನು ನೋಡಲು ಜನ ಬರುತ್ತಿದ್ದಾರೆ.

ಪ್ರತಿಯೊಬ್ಬರು ಅರ್ಜುನನ್ನು ಕೊಲೆಗೈದ ಕಾಡಾನೆಯನ್ನು ಅಭಿಮನ್ಯು ನೇತೃತ್ವದಲ್ಲಿ ಹಿಡಿಯಬೇಕೆಂದು ಬಯಸಿದರೆ, ಇನ್ನು ಮಾವುತರು ಅರ್ಜುನನನ್ನು ಕೊಂದ ಕಾಡನೆಯನ್ನು ಹಿಡಿದು ತಂದು ಅದರ ಮೇಲೆ ಅಂಬಾರಿ ಹೊರಿಸಬೇಕೆಂದು ಶಪಥ ಮಾಡಿದ್ದಾರೆ. ಒಟ್ಟಾರೆ ಪ್ರತಿಯೊಬ್ಬರು ಕ್ಯಾಂಪ್​​ಗೆ ಬಂದು ಅಭಿಮನ್ಯುವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುವುದಂತೂ ಸುಳ್ಳಲ್ಲ.

ಮೂಲಗಳ ಪ್ರಕಾರ ಹಾಸನ ಜಿಲ್ಲೆಯ ನೂತನ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿ ಸೌರಭ್ ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು ಅವರ ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ.
ಅಂಬಾರಿ ಆನೆ ‘ಅರ್ಜುನ’ನ ಬಲಿ ಪಡೆದ ಕಾಡಾನೆ ಹಿಡಿಯೋಕೆ ಕ್ಯಾಪ್ಟನ್ ಅಭಿಮನ್ಯು ಎಂಟ್ರಿ

‘ಅದೇ ಆನೆ ಕೊಡಿ, ದಸರಾದಲ್ಲಿ ಅಂಬಾರಿ ಹೊರಿಸ್ತೀನಿ….’ ಶಪಥ ಮಾಡಿದ ಮಾವುತ ವಿನು



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + two =
Remember me
