
ಬೆಂಗಳೂರು:ಮದ್ಯದಂಗಡಿಗಳಿಗೆ ಕಡಿವಾಣವೇ ಇಲ್ಲವಾಗಿದೆ. ಅಧಿಕಾರಿಗಳು ಮಾಮೂಲಿ ನಿಗಧಿಪಡಿಸಿಕೊಂಡು ವಸೂಲಿ ಮಾಡುವುದೇ ದಂಧೆಯಾಗಿ ಹೋಗಿದೆ ಎಂದು ಆಡಳಿತ ಪಕ್ಷದ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ಮೇಲ್ಮನೆಯಲ್ಲಿ ಸಕಾರದ ವಿರುದ್ದವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಉತ್ತರ ನೀಡಲು ಮುಂದಾದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಪ್ರತಿ ತಾಲೂಕಿನಿಂದ ಇಷ್ಟು, ಜಿಲ್ಲೆಯಿಂದ ಇಂತಿಷ್ಟು ಎಂದು ಮಾಮೂಲಿ ಪಡೆಯುತ್ತಿದ್ದರೂ ಯಾಕೆ ಸುಮ್ಮನಿಡಿದ್ದೀರಿ ಎಂದು ಪ್ರಶ್ನಿಸಿದ ಅವರು, ನಮ್ಮ ಜಿಲ್ಲೆಯದನ್ನೆ ಉದಾಹರಣೆ ಕೊಡಲೇ ಎಂದು ಕೇಳಿದರು.ಈ ಸದನದಲ್ಲಿ ಸುಮ್ಮನೆ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದಿಲ್ಲ. ಕೆಲಸಕ್ಕೆ ಸೇರಿದಂದಿನಿಂದ ಈತನಕ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದರೆ ಎಷ್ಟು ಪ್ರಭಾವಿಗಳು ನೋಡಿ ಎಂದು ಸದನದ ಗಮನ ಸೆಳೆದರು.ಬಿಜೆಪಿ ಸದಸ್ಯ ಸುನೀಲ್ ವೆಲ್ಲಾಪುರಿ ಅವರು ಮಧ್ಯ ಪ್ರವೇಶಿಸಿ ಸಿಎಲ್ 7 ಲೈಸೆನ್ಸ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.ನೀವು ಪ್ರಶ್ನೆ ಕೇಳುವುದನ್ನುಬಿಟ್ಟು, ಎಲ್ಲದನ್ನೂ ಇಲ್ಲಿಯೇ ಮಾತನಾಡಿದರೆ ಹೇಗೆ? ಎಂದು ಸಭಾಪತಿ ಕೇಳಿದರು.ಉತ್ತರಿಸಿದ ಅಬಕಾರಿ ಸಚಿವ ತಿಮ್ಮಾಪುರ ಅವರು, ನಿರ್ದಿಷ್ಟ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 20 =
Remember me
