ವಿಜಯಪುರ:ಸಿಎಂ ಆಗಲು ಹಣ ನೀಡಬೇಕು, ನನಗೂ ಹಣ ಕೊಟ್ಟರೆ ಸಿಎಂ ಮಾಡ್ತೀನಿ ಅಂದಿದ್ದರು ಎಂಬ ಹೇಳಿಕೆ ನೀಡಿ ಪೇಚಿಗೆ ಸಿಲುಕಿರುವ ಶಾಸಕ ಬಸನಗೌಡ ಪಾಟೀಲ್​​, ಇದೀಗ ಈ ರೀತಿ ಹೇಳಿಕೆಯನ್ನೇ ನೀಡಿಲ್ಲ ಎಂದಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಡಿಕೆಶಿ ಏನೇ ಮಾಡಿದ್ರು ನಾನು ಅಂಜುವ ಮಗ ಅಲ್ಲ, ನಾನು ಅಂಜಿ ರಾಜಕಾರಣ ಮಾಡಲ್ಲ.ಡಿಕೆಶಿಗೆ ನನ್ನ ಭಯ ಹುಟ್ಟಿದೆ, ಕರ್ನಾಟಕದಲ್ಲಿ ರಾಜಕೀಯ ಭವಿಷ್ಯ ಮುಗಿಯುತ್ತೆ ಎನ್ನುವ ಭಯ ಅವರಿಗೆ ಕಾಡಿದೆ ಎಂದರು.
ಸಿಎಂ ಆಗಲು ಹೈಕಮಾಂಡ್ ಹಣ ನೀಡುವ ಹೇಳಿಕೆ ನೀಡಿದ ವಿಚಾರ.ನಾನು ಹಾಗೇ ಹೇಳಿಲ್ಲ, ಹೇಳಿದ ಅರ್ಥ ಬೇರೆ ಇದೆ.ಸಿಎಂ ಮಾಡ್ತೀವಿ ಎಂದು ಯಾರೋ ವಾಟ್ಸಾಪ್ ಕಾಲ್ ಮಾಡ್ತಾರೆ.ನಮಗೆ ಮೋದಿ ಗೊತ್ತು.. ಸೋನಿಯಾ ಗಾಂಧಿ ಗೊತ್ತು.. ದೇವೆಗೌಡ್ರು ಗೊತ್ತು ಅಂತಾ ಹೇಳ್ತಾರೆ.ಇಷ್ಟು ಹಣ ತಂದು ಕೊಟ್ಟರೆ ಶಿಫಾರಸ್ಸು ಮಾಡ್ತೀನಿ ಅಂತಾರೆ.ಇದೆಲ್ಲ‌ ರೆಕಾರ್ಡ್ ಇಟ್ಟುಕೊಳ್ಳಲು ಅಗಲ್ಲ, ರೆಕಾರ್ಡ್ ಇಟ್ಟು ರಾಜಕೀಯ ಮಾಡೋಕೆ ಆಗಲ್ಲ ಎಂದರು.
ನಮಗೆ ಕಾಲ್ ಮಾಡಿ ಸೋನಿಯಾಗಾಂಧಿ ಭೇಟಿ ಮಾಡಿಸ್ತೀನಿ ಎಂದಿದ್ದಾರೆ. ಇಂತಹ ದಲ್ಲಾಳಿಗಳು ಬೆಂಗಳೂರಲ್ಲೂ ಇದ್ದಾರೆ. ರಾಮದುರ್ಗದಲ್ಲಿ ವೇದಿಕೆ ಮೇಲೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಕೆಲ ಟಿಕೇಟ್ ಆಕಾಂಕ್ಷಿಗಳಿದ್ದರು, ಅವರಿಗೆ ಹಿತವಚನ ಹೇಳಲು ನಾನು ಮಾತನಾಡಿದ್ದು ಎಂದು ತಮ್ಮ ಹೇಳಿಕೆಯನ್ನು ತಿರುಚಿಕೊಂಡರು.
ಅವರು ನಮಗೆ ನಿಮ್ಮ ಸಿಎಂ ಸೀಟ್ ಗಾಗಿ ನಾವು ಟ್ರೈ ಮಾಡ್ತೀವಿ ಅಂತಾರೆ, ಇಷ್ಟು ಸಾವಿರ ಕೋಟಿ ರೆಡಿ ಇಡಿ ಅಂತ ಹೇಳಿದ್ದು, ಅಂತಹವರಿಗೆ ಛೀಮಾರಿ ಹಾಕಿದ್ದೀವಿ ಎಂದು ಹೇಳಿದರು.
ಹೈಕಮಾಂಡ್ ಹಣ ಕೇಳಿದೆ ಅಂತಾ ನಾನು ಹೇಳಿಲ್ಲ, ಪ್ರಧಾನಿ ಮೋದಿ ಅವರ ಕಾಲದಲ್ಲಿ ಇಂತಹದ್ದೆಲ್ಲ ಸಾಧ್ಯವಿಲ್ಲ, ನಾನು ಹೈಕಮಾಂಡ್ ಹಣ ಕೇಳಿದೆ ಅಂತಾ ಹೇಳಿಲ್ಲ.ಏಜೆಂಟರು,ದಲ್ಲಾಳಿಗಳು ಇದ್ದಾರೆ ಎಂದು ಹೇಳಿದ್ದೀನಿ ಹೊರತು ಈ ರೀತಿ ಹೇಳೆ ಇಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 2 =
Remember me
