ಬೆಂಗಳೂರು:ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ (ಜೂ.7ರ ಸಂಜೆ 5ಗಂಟೆಯಿಂದ ಜೂ.8ರ ಸಂಜೆ 5ರವರೆಗೆ) ಒಟ್ಟು 308 ಹೊಸ ಕೊವಿಡ್​-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 5760ಕ್ಕೆ ಏರಿದೆ. ಹಾಗೇ ಕಳೆದ 24ಗಂಟೆಯಲ್ಲಿ 387 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು ಸಮಾಧಾನ ತಂದಿದೆ.
ರಾಜ್ಯದಲ್ಲಿ ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿದ್ದು, ಒಟ್ಟು ಡಿಸ್​ಚಾರ್ಜ್ ಆದವರು 64 ಮಂದಿ. ಸಕ್ರಿಯ ಕರೊನಾ ಪ್ರಕರಣಗಳು 3175. ಇಂದು ಪತ್ತೆಯಾದ 308 ಹೊಸ ಪ್ರಕರಣಗಳಲ್ಲಿ 277 ಮಂದಿ ಅಂತಾರಾಜ್ಯ ಪ್ರಯಾಣಿಕರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದಿನಿಂದ ರಾಜ್ಯ ಅನ್​ಲಾಕ್​ ಆಗಿದೆ. ಬಹುತೇಕ ದೇವಸ್ಥಾನ, ಮಾಲ್​ಗಳೆಲ್ಲ ತೆರೆದಿವೆ. ಮತ್ತೊಂದು ಕಡೆ ಕೊವಿಡ್​-19 ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಇಂದು ಕಲಬುರಗಿಯಲ್ಲಿ 99 ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 700ರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ಯಾದಗಿರಿಯಲ್ಲಿ 66, ಬೀದರ್​ನಲ್ಲಿ 48, ಉಡುಪಿ 45, ಬೆಂಗಳೂರು ನಗರ 18, ಬಳ್ಳಾರಿ 8, ಗದಗ 6, ಶಿವಮೊಗ್ಗ 4, ಧಾರವಾಡ 4, ಹಾಸನ 3, ದಕ್ಷಿಣ ಕನ್ನಡ 3, ಬಾಗಲಕೋಟೆ 2, ಕೊಪ್ಪಳ ಮತ್ತು ರಾಮನಗರದಲ್ಲಿ ತಲಾ ಒಂದು ಕೊವಿಡ್​-19 ಕೇಸ್​ಗಳು ಪತ್ತೆಯಾಗಿವೆ.
ಲಾಕ್​ಡೌನ್​ ನಿಯಮ ಉಲ್ಲಂಘಿಸಿದವರನ್ನು ಥಳಿಸಿದ ಪೊಲೀಸ್​ ವಿರುದ್ಧ ಕೇಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + four =
Remember me
