ಹುಬ್ಬಳ್ಳಿ:ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಇಇ ದೇವರಾಜ ಕೆ. ಶಿಗ್ಗಾಂವಿ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದ್ದು, ಕಂತೆ-ಕಂತೆ ಹಣ ಪತ್ತೆಯಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 30 ಕಡೆ ಒಟ್ಟು 7 ಅಧಿಕಾರಿಗಳಿಗೆ ಸಂಬಂಧಿಸಿದ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಲಂಚಕೋರರಿಗೆ ಶಾಕ್​ ನೀಡಿದೆ. ಅದರಂತೆ ಎಇಇ ದೇವರಾಜ ಕೆ. ಶಿಗ್ಗಾಂವಿ ಮನೆ ಮತ್ತು ತಾಯಿ ಹಾಗೂ ಮಾವನ ಮನೆಗಳ ಮೇಲೂ ಎಸಿಬಿ ದಾಳಿ ಮಾಡಿದೆ. ಶಿಗ್ಗಾಂವಿ ಮನೆಯಲ್ಲಿ ಅಪಾರ ಪ್ರಮಾಣ ನಗದು, ಚಿನ್ನಾಭರಣ, ಆಸ್ತಿ ಪತ್ರಗಳು ಪತ್ತೆಯಾಗಿವೆ. ಕಂತೆ ಕಂತೆ ನೋಟುಗಳನ್ನು ಕಂಡ ಎಸಿಬಿ ಅಧಿಕಾರಿಗಳು ದಂಗಾಗಿದ್ದಾರೆ.ಇದನ್ನೂ ಓದಿರಿಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ
ಶಿಗ್ಗಾಂವಿ ಮನೆಯಲ್ಲಿ 27 ಎಕರೆ ಆಸ್ತಿ ಖರೀದಿ ಮಾಡಿದ ದಾಖಲೆ ಪತ್ತೆ‌ಯಾಗಿದೆ. ಜತೆಗೆ ಅಪಾರ ಪ್ರಮಾಣದ ಚೆಕ್​ಬುಕ್​ಗಳು ಪತ್ತೆ‌ಯಾಗಿವೆ. ಬಗೆದಷ್ಟು ಬಯಲಾಗಯತ್ತಿದೆ ಅಧಿಕಾರಿಯ ಖಜಾನೆ‌. ಇಂಡಿಯನ್ ಓವರ್​ಸಿಸ್ ಬ್ಯಾಂಕ್ ಲಾಕರ್ ಪತ್ತೆಯಾಗಿದ್ದು, ದೇವರಾಜ್​ರನ್ನು ಬ್ಯಾಂಕ್ ಕರೆದೊಯ್ದು ಲಾಕರ್ ಓಪನ್​ ಮಾಡಿದ ಎಸಿಬಿ ಅಧಿಕಾರಿಗಳು ಶಾಕ್‌ ಆದರು. ಬ್ಯಾಂಕ್ ಲಾಕರ್​ನಲ್ಲಿ ಲಕ್ಷಾಂತರ ಮೌಲ್ಯದ ಗರಿ ಗರಿ ನೋಟುಗಳು ಪತ್ತೆ‌ಯಾಗಿವೆ. ಇಂಡಿಯನ್ ಓವರ್​ಸಿಸ್ ಬ್ಯಾಂಕ್​ನಲ್ಲಿ 56.50 ಲಕ್ಷ ರೂ. ನಗದು ಪತ್ತೆಯಾಗಿದೆ. ಬರೋಬ್ಬರಿ ಅರ್ಧ ಕೆಜಿ ಚಿನ್ನಾಭರಣ ಸಿಕ್ಕಿದೆ. ಪತ್ನಿ ಮತ್ತು ಅಳಿಯನ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ ಇದೆ.
ಶಿಗ್ಗಾಂವಿಗೆ ಸಂಬಂಧಿಸಿದ ಆಸ್ತಿ ದಾಖಲೆ, ಹಣಕಾಸು ವ್ಯವಹಾರದ ಬಗ್ಗೆ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದ ತಂಡ ಪರಿಶೀಲನೆ ಮಾಡುತ್ತಿದೆ.
ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್: ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಿ ದಾಳಿ, ದಾಖಲೆ ಪರಿಶೀಲನೆ ​

ಎಸಿಬಿ ಬಲೆಗೆ ಬಿದ್ದ ಮಂಗಳೂರು ಜಂಟಿ ನಿರ್ದೇಶಕ, ಕೇರಳದಲ್ಲಿದ್ದ ಪತ್ನಿ ಅಕೌಂಟ್​ನಲ್ಲಿ ಸಿಕ್ತು ಕೋಟಿ ಹಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 7 =
Remember me
