ಮಂಗಳೂರು:ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 30 ಕಡೆ ಏಕಕಾಲದಲ್ಲಿ ದಾಳಿ ಮಾಡಿರುವ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಲಂಚಕೋರರಿಗೆ ಶಾಕ್​ ನೀಡಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿರುವ ಮಾಹಿತಿ ಮೇರೆಗೆ ಒಟ್ಟು 7 ಜನರ ಮನೆ ಸೇರಿದಂತೆ ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ದಾಳಿ ಮಾಡಿದೆ. ಈ ಪೈಕಿ ಮಂಗಳೂರು ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕ ಜಯರಾಜ್​ ಮನೆಯಲ್ಲಿ ಕಂತೆ ಕಂತೆ ಹಣ, ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ. ಅಷ್ಟೇ ಅಲ್ಲ, ಪತ್ನಿ ಅಕೌಂಟ್​ನಲ್ಲಿ ಒಂದು ಕೋಟಿ ಹಣ ಇದೆ.
ಮಂಗಳೂರಿನ ಕಾಪಿಕಾಡ್​ನ ಅಪಾರ್ಟ್​ಮೆಂಟ್​ನಲ್ಲಿ ಜಯರಾಜ್​ ವಾಸವಿದ್ದು, ಮಂಗಳೂರು ಹೊರವಲಯದ ಪಡೀಲ್​ನಲ್ಲಿ ಇವರ ಮತ್ತೊಂದು ಮನೆ ಇದೆ. ಈ ಎರಡೂ ಮನೆಗಳಲ್ಲಿ ಭಾರೀ ಪ್ರಮಾಣದ ಹಣ ಪತ್ತೆ‌ಯಾಗಿದೆ. ಜಯರಾಜ್​ ಪತ್ನಿ ಡಾ.ಜಯಶ್ರೀ ಕೇರಳದಲ್ಲಿ ಸರ್ಕಾರಿ ವೈದ್ಯೆ. 12 ವರ್ಷದಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇರಳ ಬ್ಯಾಂಕ್​ನಲ್ಲಿ ಜಯರಾಜ್​ಗೆ ಸೇರಿದ್ದ ಅಪಾರ ಪ್ರಮಾಣದ ಹಣ, ಚಿನ್ನಾಭರಣ ಪತ್ತೆಯಾಗಿದೆ. ದಾಖಲೆ ಸಹಿತ ಎಸಿಬಿ ಅಧಿಕಾರಿಗಳು ಕೇರಳದ ಬ್ಯಾಂಕ್​ನಲ್ಲಿನ ಜಯರಾಜ್​ ಕುಟುಂಬದ ಲಾಕರ್ ಓಪನ್ ಮಾಡಲು ತೆರಳಿದ್ದಾರೆ.ಇದನ್ನೂ ಓದಿರಿಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ
ಇನ್ನು ಕೇರಳದಲ್ಲಿರುವ ಜಯರಾಜ್ ಪತ್ನಿಯ ಮನೆ ಮೇಲೂ ಎಸಿಬಿ ದಾಳಿ ಮಾಡಿದ್ದು. ಸಾಕಷ್ಟು ಚಿನ್ನಾಭರಣ ಪತ್ತೆಯಾಗಿದೆ. ಕೇರಳ ಸೇರಿ ಮಂಗಳೂರಿನಲ್ಲಿ ಅಪಾರ ಆಸ್ತಿ ಗಳಿಕೆ ಆರೋಪ ಪತ್ನಿ ಮೇಲೂ ಇದೆ. ಮಂಗಳೂರಿನಲ್ಲಿ ಜಯರಾಜ್​ ನಿವಾಸದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಪತ್ರ ಸಿಕ್ಕಿದೆ. 500 ಮತ್ತು 2 ಸಾವಿರ ರೂಪಾಯಿ ಮುಖಬೆಲೆಯ ಕಂತೆ-ಕಂತೆ ನೋಟುಗಳು ಈ ಮನೆಯಲ್ಲಿ ಸಿಕ್ಕಿವೆ. ದಕ್ಷಿಣ ಕನ್ನಡ ಎಸಿಬಿ ಎಸ್ಪಿ ಬೋಪಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಎಸಿಬಿ ದಾಳಿ: ಇಂಜಿನಿಯರ್​ ಮನೆಯಲ್ಲಿ ಕಂತೆ ಕಂತೆ ಹಣ ಕಂಡ ಅಧಿಕಾರಿಗಳೇ ದಂಗಾದ್ರು!

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್: ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಿ ದಾಳಿ, ದಾಖಲೆ ಪರಿಶೀಲನೆ ​

ಮಾಜಿ ಸಿಎಂ ದಿ. ಧರ್ಮಸಿಂಗ್ ಸಂಬಂಧಿಯನ್ನ ಕೊಂದವ ತಿರುಪತಿಯಲ್ಲಿ ಆತ್ಮಹತ್ಯೆ!

ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
