ಬೆಂಗಳೂರು:ಹತ್ತು ಲಕ್ಷ ರೂಪಾಯಿ ಲಂಚ ಪಡೆದಿದ್ದ ಆರೋಪದ ಮೇಲೆ ಪೊಲೀಸ್ ಇನ್​​ಸ್ಪೆಕ್ಟರ್​ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬೆಂಗಳೂರಿನ ಇಂದಿರಾನಗರ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ರಾಮಮೂರ್ತಿ ವಿರುದ್ಧ ಎಸಿಬಿಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಎಸಿಬಿ ಅಧಿಕಾರಿಗಳಿಂದ ತನಿಖೆ ಮುಂದುವರಿದಿದೆ.
ಇಂದಿರಾನಗರ ಕ್ಲಬ್ ಕಾರ್ಯದರ್ಶಿ ನಾಗೇಂದ್ರ ಅವರು ನೀಡಿದ್ದ ದೂರಿನ ಮೇರೆಗೆ ಎಸಿಬಿಯಲ್ಲಿ ಈ ಎಫ್​ಐಆರ್ ದಾಖಲಾಗಿದೆ. ಇಂದಿರಾನಗರ ಕ್ಲಬ್ ಸದಸ್ಯ ರಾಮ್​ಮೋಹನ್ ಅವರು ಲಾಕ್​ಡೌನ್​ ಸಂದರ್ಭದಲ್ಲಿ ಅತಿಕ್ರಮವಾಗಿ ಕ್ಲಬ್​ಗೆ ಪ್ರವೇಶಿಸಿದ್ದು, ಆಗ ಅದನ್ನು ಪ್ರಶ್ನಿಸಿದ್ದ ಸೆಕ್ಯುರಿಟಿ ಗಾರ್ಡ್​ಗೆ ಕೊಲೆ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ:ಕೆಟ್ಟಿದ್ದ ಫ್ರಿಡ್ಜ್​ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…
ಸೆಕ್ಯುರಿಟಿ ಗಾರ್ಡ್​ಗೆ ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕ್ಲಬ್​ ಕಾರ್ಯದರ್ಶಿ ನಾಗೇಂದ್ರ ಅವರು ರಾಮ್​ಮೋಹನ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಆಗ ಪ್ರಕರಣ ದಾಖಲಿಸಿಕೊಂಡಿದ್ದ ಇನ್​ಸ್ಪೆಕ್ಟರ್ ರಾಮಮೂರ್ತಿ, ಸೂಕ್ತ ತನಿಖೆ ನಡೆಸದೆ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಅಲ್ಲದೆ ಬಿ-ರಿಪೋರ್ಟ್ ಸಲ್ಲಿಸುವ ಸಂಬಂಧ ರಾಮ್​ಮೋಹನ್​ರಿಂದ 10 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಇನ್​ಸ್ಪೆಕ್ಟರ್ ವಿರುದ್ಧ ನಾಗೇಂದ್ರ ಎಸಿಬಿಗೆ ದೂರು ನೀಡಿದ್ದರು. ಈ ದೂರನ್ನು ಪರಿಶೀಲಿಸಿದ ಎಸಿಬಿ ಅಧಿಕಾರಿಗಳು ಇನ್​ಸ್ಪೆಕ್ಟರ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.
Video | ಕಲ್ಯಾಣಮಂಟಪದಲ್ಲೇ ಕೈ ಎತ್ತಿದ ಮದುಮಗ, ಬಿದ್ದುಬಿದ್ದು ನಕ್ಕಳು ಮದುಮಗಳು; ಎಲ್ಲದಕ್ಕೂ ಕಾರಣನು ಅವನು…

ಕತ್ತರಿಸಿದ ಗಾಯಕ್ಕೂ ಇನ್ನು ಹೊಲಿಗೆ ಬೇಕಾಗಿಲ್ಲ; ಸಜ್ಜಾಗಿದೆ ಗಾಯ ಮಾಯವಾಗಿಸೋ ಅಂಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
