ಧಾರವಾಡ:ಇನ್ನೊಬ್ಬ ಅಧಿಕಾರಿಯ ಲಂಚದ ಹಣ ಮನೆಯಲ್ಲಿ ಇಟ್ಟುಕೊಂಡಿದ್ದ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳ ದಾಳಿ ವೇಳೆ ಲಕ್ಷಾಂತರ ರೂಪಾಯಿ ಹಣವೂ ಪತ್ತೆಯಾಗಿದೆ.
ಸಣ್ಣ ನೀರಾವರಿ ಇಲಾಖೆಯ ಧಾರವಾಡ ಉಪವಿಭಾಗದಲ್ಲಿನ ತನಿಖಾ ವಿಭಾಗದ ಎಇಇ ಪ್ರಶಾಂತ್ ನಗದು ಸಹಿತ ಸಿಕ್ಕಿಬಿದ್ದ ಅಧಿಕಾರಿ. ಇವರು ಅದೇ ಇಲಾಖೆಯ ಇನ್ನೊಬ್ಬ ಅಧಿಕಾರಿ ಶಿವಪ್ಪ ಮಂಜಿನಾಳಗೆ ಹಸ್ತಾಂತರಿಸಬೇಕಿದ್ದ ಲಂಚದ ಹಣವನ್ನು ವಿದ್ಯಾಗಿರಿ ಸತ್ತೂರ ಕಾಲನಿಯಲ್ಲಿರುವ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು.
ಶಿವಪ್ಪ ಮಂಜಿನಾಳನ ಸೋದರನ ಮಗ ಮಹಾಂತೇಶ ಮಂಜಿನಾಳ ಪ್ರಶಾಂತ್ ಮನೆಯಲ್ಲಿದ್ದ ಹಣವನ್ನು ವಿಜಯಪುರ ಜಿಲ್ಲೆಯ ಕಂದಗನೂರ ಗ್ರಾಮಕ್ಕೆ ಕೊಂಡೊಯ್ಯಲು ಮನೆಯಿಂದ ಹೊರಬರುತ್ತಿದ್ದಂತೆ ಸಿಕ್ಕಿಬಿದ್ದಿದ್ದಾನೆ. ಆಗ ಮಹಾಂತೇಶ 16 ಲಕ್ಷ ರೂ. ಸಹಿತ ಸಿಕ್ಕಿಬಿದ್ದಿದ್ದು, ಅಧಿಕಾರಿಗಳು ನಂತರ ಪ್ರಶಾಂತ್​ ಮನೆ ಮೇಲೆ ದಾಳಿ ನಡೆಸಿದಾಗ 1.8 ಲಕ್ಷ ರೂ. ಸಿಕ್ಕಿದೆ. ಮೂವರನ್ನೂ ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಇಂದು ಹೀಗೂ ಆಚರಣೆ ಆಗುತ್ತಿದೆ ಒಂದು ದಿನ!; ಅದೇನದು? ಇಲ್ಲಿದೆ ಮಾಹಿತಿ..

ಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − four =
Remember me
