ಬೆಂಗಳೂರು:ಲಂಚ ಪಡೆದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಎಎಸ್​ಐ ದಯಾನಂದಸ್ವಾಮಿ ಅವರ ಮನೆಯ ಮೇಲೆ ಮಂಗಳವಾರದಂದು ಎಸಿಬಿ ದಾಳಿ ನಡೆದಿದೆ.
ಯಲಹಂಕ ನ್ಯೂ ಟೌನ್​ನಲ್ಲಿರುವ ಕೊಡಿಗೇಹಳ್ಳಿ ಎಎಸ್ಐ ದಯಾನಂದ್ ಅವರ ಮನೆಯ ಮೇಲೆ ಎಸಿಬಿ ದಾಳಿಯಾಗಿದೆ. ಅವರು ಉದ್ಯಮಿಯೊಬ್ಬರಿಂದ ಲಂಚ ಪಡೆದಿರುವ ಆರೋಪವಿದ್ದು, ಅದು ನಿನ್ನೆಯಷ್ಟೇ ಸಾಬೀತಾಗಿತ್ತು. ಲೊಂಚ ಪಡೆದಿರುವುದು ಸತ್ಯ ಎಂದು ಗೊತ್ತಾದ ತಕ್ಷಣ ಕಮಿಷನರ್​ ದಯಾನಂದ್​ನನ್ನು ಕೆಲಸಿದಂದ ಅಮಾನತು ಮಾಡಿ ಎಸಿಬಿ ತನಿಖೆಗೆ ಆದೇಶಿಸಿದ್ದರು. ಆದೇಶ ಹಿನ್ನಲೆಯಲ್ಲಿ 15 ಅಧಿಕಾರಿಗಳ ತಂಡದಿಂದ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ದಯಾನಂದ್ 2020ರಲ್ಲಿ ಹೆಡ್ ಕಾನ್ಸ್ಟೇಬಲ್​ ಹುದ್ದೆಯಿಂದ ನಿಂದ ಎ.ಎಸ್.ಐ ಆಗಿ ಮುಂಬಡ್ತಿ ಪಡೆದಿದ್ದ. ಹೆಡ್ ಕಾನ್ಸ್ಟೇಬಲ್‌ ಆದಾಗಿನಿಂದಲೂ ಡಿಸಿಪಿ ಕಚೇರಿಯಲ್ಲಿ SB ಯಾಗಿ ಕೆಲಸ ನಿರ್ವಹಿಸಿದ್ದ. ಕಳೆದ ಆರು ವರ್ಷಗಳಿಂದ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯ SB ಸ್ಪೆಷಲ್ ಬ್ರಾಂಚ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ. ಆ ವಿಭಾಗಕ್ಕೆ ಡಿಸಿಪಿಯಾಗಿ ಬರುವ ಐಪಿಎಸ್ ಅಧಿಕಾರಿಗಳ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ. ಆತನಿಗೆ ತಿಂಗಳಿಗೆ ಸರ್ಕಾರದಿಂದ 55 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ಯಲಹಂಕ ನ್ಯೂ ಟೌನ್​ನಲ್ಲಿ 35/40 ಅಳತೆಯ ಮೂರು ಅಂತಸ್ತಿನ ಡುಪ್ಲೆಕ್ಸ್ ಮನೆ ಕಟ್ಟಿಸಿಕೊಂಡಿದ್ದ. ಮನೆ ನಿರ್ಮಾಣಕ್ಕೆ ಸುಮಾರು 5ರಿಂದ ಆರು ಕೋಟಿ ರೂಪಾಯಿ ಖರ್ಚು ಮಾಡಿದ್ದ ಎನ್ನಲಾಗಿದೆ.
ಬೆಂಗಳೂರು ಎಸಿಬಿ ಎಸ್.ಪಿ ಯತೀಶ್ ಚಂದ್ರ ನೇತೃತ್ವದಲ್ಲಿ ದಯಾನಂದ್​ ಮನೆ ಮೇಲೆ ದಾಳಿ ನಡೆಸಲಾಗಿದೆ. ಮಧ್ಯಾಹ್ನ 2 ಘಂಟೆಯಿಂದ ಮನೆಯಲ್ಲಿರುವ ಎಲ್ಲ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಲಾಗಿದೆ.
ಫಸ್ಟ್​ ನೈಟ್​ ದಿನ ಸೆಕ್ಸ್​ ಮಾಡುತ್ತಿರುವಾಗಲೇ ವಧುವಿಗೆ ಹಾರ್ಟ್​ ಅಟ್ಯಾಕ್​! ದುರಂತ ಅಂತ್ಯ ಕಂಡ ಮ್ಯಾರೇಜ್ ಸ್ಟೋರಿ

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − eight =
Remember me
