ಬೆಂಗಳೂರು:ರಕ್ಷಣೆ ನೀಡಬೇಕಾದ ಪೊಲೀಸರೇ ಲಂಚಕ್ಕಾಗಿ ಬಾಯಿಬಿಟ್ಟು, ಎಸಿಬಿ ಅಧಿಕಾರಿಗಳ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ ಭೈಯಪ್ಪನಹಳ್ಳಿಯಲ್ಲಿ ನಡೆದಿದೆ. ಎಸಿಬಿ ದಾಳಿಯ ವೇಳೆ ಪೊಲೀಸ್​ ಪೇದೆ ತಪ್ಪಿಸಿಕೊಳ್ಳಲು ಓಡಿದ್ದು, ಕಾಲು ಮುರಿದುಕೊಂಡು ಪೇಚಾಡುವಂತಾಗಿದೆ.
ಇದನ್ನೂ ಓದಿ:ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ವಿಧಿವಶ
ಭೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಮುಖ್ಯ ಪೇದೆ ಕುಮಾರ್​ ಮೊಬೈಲ್​ ಕಳ್ಳನೊಬ್ಬನಿಂದ 2 ಲಕ್ಷ ಲಂಚ ಕೇಳಿದ್ದರು. ಅದಕ್ಕೆ ಆತ ಒಪ್ಪದಿದ್ದಾಗ ಲಂಚದ ಮೊತ್ತವನ್ನು ಕಡಿಮೆ ಮಾಡಿ ಒಂದು‌ ಲಕ್ಷಕ್ಕೆ ಡೀಲ್ ಮಾಡಿಕೊಳ್ಳಲಾಗಿತ್ತು. ಇಂದು ಆ ಕಳ್ಳ ಪೊಲೀಸರಿಗೆ 1 ಲಕ್ಷ ಹಣವನ್ನು ಲಂಚವಾಗಿ ತಂದು ಕೊಟ್ಟಿದ್ದಾನೆ. ಅದನ್ನು ಪಡೆದ ಕುಮಾರ್​ ಮತ್ತು ಸೌಮ್ಯ ಆ ಹಣವನ್ನು ರೆಡ್ಡಿ ಹೆಸರಿನ ಪೇದೆಯ ಕೈಗೆ ಕೊಟ್ಟಿದ್ದಾರೆ. ಇದೇ ಸಮಯದಲ್ಲಿ ಠಾಣೆಯ ಮೇಲೆ ಎಸಿಬಿ ಎಸಿಪಿ ಪ್ರತಾಪ್ ರೆಡ್ಡಿ ತಂಡ ದಾಳಿ ನಡೆಸಿದೆ.
ಇದನ್ನೂ ಓದಿ:ಡಿವೋರ್ಸ್​ ಆದ ಕೆಲ ವರ್ಷಗಳ ನಂತರ ಜೀವನಾಂಶ ಕೇಳುವ ಅವಕಾಶವಿದೆಯೆ?
ದಾಳಿ ನಡೆಯುತ್ತದೆ ಎಂದು ತಿಳಿದ ತಕ್ಷಣ ರೆಡ್ಡಿ ಕೈನಲ್ಲಿ ದುಡ್ಡು ಕೊಟ್ಟು ಅಲ್ಲಿಂದ ಓಡಿ ಹೋಗುವಂತೆ ತಿಳಿಸಲಾಗಿದೆ. ಆತ ಠಾಣೆಯ ಕಟ್ಟಡದ ಮೊದಲ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅದರಿಂದಾಗಿ ಆತನ ಕಾಲು ಮುರಿದಿದೆ. ಇದೀಗ ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿಯನ್ನು ಎಸಿಬಿ ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)
ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − two =
Remember me
