ಬೆಂಗಳೂರು:ಆದಾಯ ಮೀರಿದ ಆಸ್ತಿ ಹೊಂದಿದ ಕೆಎಎಸ್ ಅಧಿಕಾರಿ ಡಾ.ಸುಧಾ ಅವರ ಆಪ್ತರ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಇಂದು ಬೆಳಗ್ಗೆಯೇ ಬೆಂಗಳೂರು ನಗರ ಮತ್ತು ಸುತ್ತಮುತ್ತ 9 ಪ್ರದೇಶಗಳಲ್ಲಿರುವ ಸುಧಾ ಆಪ್ತರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಹುತೇಕರು ಸುಧಾ ಅವರ ಏಜೆಂಟ್​ಗಳಾಗಿ ಕೆಲಸ ಮಾಡುತ್ತಿದ್ದವರು.
ದೊಡ್ಡ ಆಲದಮರದ ಬಳಿಯ ಭೀಮಾನಕುಪ್ಪೆಯಲ್ಲಿರುವ ಮಹೇಶ್ ಎಂಬಾತನ ಮನೆಗೆ 5 ಅಧಿಕಾರಿಗಳ ಎಸಿಬಿ ತಂಡ ಬೆಳಗ್ಗೆ ಏಳು ಗಂಟೆಗೆ ತೆರಳಿದ್ದು, ಶೋಧ ಕಾರ್ಯ ನಡೆಸಿದೆ. ಮಹೇಶ್ ಮನೆಯಲ್ಲಿ ದಾಖಲೆಗಳಿಲ್ಲದ ಹಣ, ಚಿನ್ನಾಭರಣ ಪತ್ತೆಯಾಗಿದೆ.
ಇದನ್ನೂ ಓದಿ:ಸುಧಾ ಆಪ್ತೆ ರೇಣುಕಾ ಮನೇಲೂ ಕೆಜಿಗಟ್ಟಲೆ ಚಿನ್ನ-ಬೆಳ್ಳಿ, ಲಕ್ಷಾಂತರ ಹಣ, ಕೋಟಿಗಟ್ಟಲೆ ಮೌಲ್ಯದ ಆಸ್ತಿಪತ್ರ!
ಇದೇ ರೀತಿ, ಸುಧಾ ಜತೆಗೆ ಸಂಪರ್ಕ ಹೊಂದಿದ್ದು ವ್ಯವಹಾರ ನಡೆಸುತ್ತಿರುವವರ ಮನೆ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ. ದೊಡ್ಡಾಲದ ಮರ ಮತ್ತು ಸುತ್ತಮುತ್ತ ಇರುವ ಆರು ಏಜೆಂಟ್​ಗಳ ಮನೆ ಮೇಲೆ ದಾಳಿ ನಡೆದಿದೆ. ಇನ್ನುಳಿದ ಮಾಹಿತಿ ಲಭ್ಯವಾಗಬೇಕಷ್ಟೆ. (ದಿಗ್ವಿಜಯ ನ್ಯೂಸ್)
ಎಸಿಬಿ ದಾಳಿ ಮುಕ್ತಾಯ: ಕೆಎಎಸ್​ ಅಧಿಕಾರಿ ಸುಧಾ ಮನೆಯಿಂದ ಎಸಿಬಿ ಅಧಿಕಾರಿಗಳು ಹೊತ್ತೊಯ್ದಿದ್ದೇನು?

ಜಾಲಾಡಿದಷ್ಟೂ ಸಿಕ್ತಿದೆ ಡಾ.ಸುಧಾ ಆಸ್ತಿ; ಹುದ್ದೆಯನ್ನೇ ಅಪಾರ್ಥ ಮಾಡ್ಕೊಂಡ್ರಾ ಭೂ-ಸ್ವಾಧೀನಾಧಿಕಾರಿ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
