ಶಿವಮೊಗ್ಗ:ಲಂಚ ಸ್ವೀಕರಿಸುವಾಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಲೆಡ್ಜರ್​ ಕೀಪರ್​ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸುನೀತಾ ಎಸಿಬಿ ಬಲೆಗೆ ಬಿದ್ದವರು. ಶಿಕಾರಿಪುರ ತಾಲೂಕು ಬಗಣಕಟ್ಟೆ ಗ್ರಾಮದ ಮಲ್ಲೇಶಪ್ಪ ಅವರಿಂದ ಒಂದು ಸಾವಿರ ರೂಪಾಯಿ ಲಂಚ ಪಡೆಯುವಾಗ ಪ್ರತ್ಯಕ್ಷವಾಗಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ:ವಯಸ್ಸಾದ ಅಪ್ಪನನ್ನು ಹೊರಗೆ ಕರೆದುಕೊಂಡು ಹೋಗಲು ಭಯ ಎಂದು ತಾವೇ ಶೇವಿಂಗ್​ ಮಾಡಿದ ಹಾಸ್ಯನಟ
ಸ್ವ ಉದ್ಯೋಗ ಯೋಜನೆಯಡಿ ಮಲ್ಲೇಶಪ್ಪ ಅವರಿಗೆ ಒಂದು ಲಕ್ಷ ರೂಪಾಯಿ ಸಾಲ‌ ಮಂಜೂರಾಗಿತ್ತು. ಮಲ್ಲೇಶಪ್ಪ ಅವರ ಫೈಲ್‌ ಮೇಲಧಿಕಾರಿಗಳಿಗೆ ಕಳುಹಿಸಲು ಒಂದು ಸಾವಿರ ರೂಪಾಯಿ ಲಂಚ ಕೇಳಿದ್ದ ಸುನೀತಾ. ಇಂದು ಸಂಜೆ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿದ ಎಸಿಬಿ ಹಣದ ಸಮೇತ ಸುನಿತಾರನ್ನು ವಶಕ್ಕೆ‌ ಪಡೆದಿದ್ದಾರೆ.
ದೂರಿನ ಆಧಾರದ ಮೇಲೆ ಎಸಿಬಿ ಡಿವೈಎಸ್​ಪಿ ಲೊಕೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.(ದಿಗ್ವಿಜಯ ನ್ಯೂಸ್​)
video/ ಬೆಡ್​ ಸಿಗದಿದ್ದಕ್ಕೆ ಹೆಂಡ್ತಿ, ಮಕ್ಕಳ ಜತೆ ಸಿಎಂ ಮನೆಗೆ ಬಂದ ಕರೊನಾ ಸೋಂಕಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 19 =
Remember me
