ಹೊಸಪೇಟೆ ( ಬಳ್ಳಾರಿ) :ಹೊಸಪೇಟೆಯ ಸಬ್​ ರಿಜಿಸ್ಟ್ರಾರ್ ಪ್ರಭಾಕರ ಅವರ ಕಚೇರಿ ಮತ್ತು ಮನೆಗಳ ಮೇಲೆ ಇಂದು ಬೆಳಗ್ಗೆಯೇ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಪ್ರಭಾಕರ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ವ್ಯಾಪಕವಾಗಿದ್ದು, ಕೆಲವರು ದೂರು ದಾಖಲಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಎಸಿಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಹೊಸಪೇಟೆಯಲ್ಲಿರೋ ಕಚೇರಿ ಮನೆ ಮತ್ತು ಕೂಡ್ಲಿಗಿ ತಾಲೂಕಿನ ಮನೆ ಮತ್ತು ಫಾರ್ಮ್ ಹೌಸ್​ನಲ್ಲಿ ಸಂಬಂಧಪಟ್ಟ ದಾಖಲೆಗಳು, ಸಾಕ್ಷ್ಯಗಳಿಗಾಗಿ ಅಧಿಕಾರಿಗಳ ತಂಡ ಶೋಧಕಾರ್ಯ ನಡೆಸಿದೆ.
ಇದನ್ನೂ ಓದಿ:ಬೆಂಗಳೂರು ವಿಮಾನ ಇಂದೋರ್​ನಲ್ಲಿ ಎಮರ್ಜೆನ್ಸಿ ಲ್ಯಾಂಡ್​​ ಆಯ್ತು: ಪ್ರಾಣ ಉಳಿಸೋ ಪ್ರಯತ್ನಕ್ಕೆ ದೇವರ​ ಸಾಥ್ ಸಿಕ್ಕಿಲ್ಲ
ಅಕ್ರಮ ಅಸ್ತಿ ಗಳಿಕೆ ಆರೋಪದ ಜೊತೆ ಅನಧಿಕೃತವಾಗಿ ಕೆಲ ಆಸ್ತಿಗಳನ್ನು ರಿಜಿಸ್ಟರ್ ಮಾಡಿಕೊಟ್ಟಿರೋ ಆರೋಪ ಪ್ರಭಾಕರ ಅವರ ವಿರುದ್ಧ ಇದೆ. ಏಕಕಾಲದಲ್ಲೇ ನಾಲ್ಕು ಕಡೆ ದಾಳಿ ನಡೆದಿದೆ. ಕೂಡ್ಲಿಗಿ ತಾಲೂಕಿನ ವೀರಾಪುರ ಗ್ರಾಮದ ಫಾರಂ ಹೌಸ್​ನಲ್ಲೂ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿದೆ. ಎಸಿಬಿ ಇನ್​ಸ್ಪೆಕ್ಟರ್ ಹನುಮಂತಪ್ಪ ಸಣ್ಣಮನಿ ನೇತೃತ್ವ ತಂಡ ಇಲ್ಲಿದೆ. (ದಿಗ್ವಿಜಯ ನ್ಯೂಸ್)
‘ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಭೀಕರ ಸ್ಫೋಟಕ್ಕೆ 25 ಬಲಿ, 110ಕ್ಕೂ ಹೆಚ್ಚು ಜನರಿಗೆ ಗಾಯ: ವಿಮಾನ ನಿಲ್ದಾಣದಲ್ಲಿದ್ದ ಪ್ರಧಾನಿ ಟಾರ್ಗೆಟ್​ ಆಗಿದ್ರಾ?!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 − 3 =
Remember me
