ಬೆಂಗಳೂರು:ನಿನ್ನೆಯಿಂದ ಕುತೂಹಲ ಕೆರಳಿಸಿರುವ ಕೆಎಎಸ್​ ಅಧಿಕಾರಿ ಡಾ.ಸುಧಾ ಅವರ ಮನೆ ಮೇಲಿನ ದಾಳಿ ಪ್ರಕರಣದ ಕೌತುಕ ಇನ್ನೂ ಮುಂದುವರಿದಿದೆ. ಅವರ ಮನೆಯಲ್ಲಿ ಅಪಾರ ಚಿನ್ನಾಭರಣ ಹಾಗೂ ಅಕ್ರಮ ಆಸ್ತಿ ಕುರಿತು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಇರುವ ಅವರ ಆಪ್ತರು-ಸಂಬಂಧಿಕರ ಮನೆ ಮೇಲೂ ಎಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ.
ಅದರ ಮುಂದುವರಿಕೆ ಎಂಬಂತೆ ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ಅವರ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫ್ಲ್ಯಾಟ್​ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ಸಿಕ್ಕ ದಾಖಲೆಗಳನ್ನು ನೋಡಿ ಎಸಿಬಿ ಅಧಿಕಾರಿಗಳಿಗೂ ಅಚ್ಚರಿ ಆಗಿದೆ ಎನ್ನಲಾಗಿದೆ.
ಸುಧಾಗೆ ರೇಣುಕಾ ಏಜೆಂಟ್?:ಸುಧಾ ಹೇಳಿದ ಕಡೆಗೆ ತೆರಳಿ ಹಣ ಪಡೆಯುತ್ತಿದ್ದ ಅನುಮಾನದ ಮೇಲೆ ರೇಣುಕಾ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ರೇಣುಕಾ ಮನೆಯಲ್ಲಿ ಬರೋಬ್ಬರಿ 3.5 ಕೆ.ಜಿ. ಚಿನ್ನ, 7 ಕೆ.ಜಿ. ಬೆಳ್ಳಿ, 36 ಲಕ್ಷ ರೂ. ನಗದು ಮಾತ್ರವಲ್ಲದೆ ಸುಮಾರು 250 ಕೋಟಿ ರೂ. ಮೌಲ್ಯದ ಆಸ್ತಿಗಳ ಪತ್ರಗಳೂ ಸಿಕ್ಕಿವೆ. ಅಲ್ಲದೆ ರೇಣುಕಾ ಮನೆಯಲ್ಲಿ 40 ಬ್ಯಾಂಕ್​ ಪಾಸ್​​ಬುಕ್​ಗಳು ಪತ್ತೆಯಾಗಿದ್ದು, ರೇಣುಕಾ 4 ಕೋಟಿ ರೂ. ಡೆಪಾಸಿಟ್ ಮಾಡಿದ್ದಾರೆ. ಜತೆಗೆ ನೂರಕ್ಕೂ ಹೆಚ್ಚು ಚೆಕ್​ಗಳು, ಅಗ್ರಿಮೆಂಟ್​ ಪೇಪರ್​ಗಳೂ ಸಿಕ್ಕಿವೆ. ಬ್ಯಾಂಕ್​ ವಹಿವಾಟಿನ ವಿವರ ಕಲೆ ಹಾಕಲಿಕ್ಕೇ ಮೂರ್ನಾಲ್ಕು ದಿನಗಳು ಬೇಕಾಗಲಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ರೇಣುಕಾ ನಿವೃತ್ತ ಡಿವೈಎಸ್​ಪಿ ಚಂದ್ರಶೇಖರ್ ಅವರ ಪತ್ನಿ. ಇವರ ಪುತ್ರ ಎಇಇ ಆಗಿದ್ದಾರೆ. ರಿಯಲ್​ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿರುವ ರೇಣುಕಾ, ನಾಲ್ಕು ಕಂಪನಿಗಳ ಹೆಸರಿನಲ್ಲಿ ವಹಿವಾಟು ನಡೆಸುತ್ತಿದ್ದರು. ಈ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಸುಧಾ ಬೇನಾಮಿ ಹೂಡಿಕೆ ಇದೆಯೇ ಎಂಬುದರ ಕುರಿತು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿ ಸಂದರ್ಭ ರೇಣುಕಾ ತಂದೆಯ ನಿಧನ:ದಾಳಿ ಸಂದರ್ಭದಲ್ಲಿ ರೇಣುಕಾ ತಂದೆಯ ಸಾವಿನ ಸುದ್ದಿ ಬಂದಿದ್ದ ಹಿನ್ನೆಲೆಯಲ್ಲಿ, ದಾಳಿಯ ಅರ್ಧದಲ್ಲೇ ರೇಣುಕಾ ಮತ್ತು ಚಂದ್ರಶೇಖರ್ ಮನೆಯಿಂದ ಹೊರಟಿದ್ದಾರೆ. ಅವರ ಮಕ್ಕಳ ಸಮ್ಮುಖದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮುಂದುವರಿಸಿ, ಪರಿಶೀಲನೆ ನಡೆಸಿದ್ದಾರೆ. ಎಸ್​ಪಿ ಕುಲ್​ದೀಪ್​ ಕುಮಾರ್ ನೇತೃತ್ವದಲ್ಲಿ ಡಿವೈಎಸ್​ಪಿ ಪ್ರತಾಪ್ ರೆಡ್ಡಿ ಮತ್ತು ತಂಡ ದಾಳಿ ನಡೆಸಿದೆ. (ದಿಗ್ವಿಜಯ ನ್ಯೂಸ್​)
ಹೆಂಡತಿ ಕೆಎಎಸ್ ಆಫೀಸರ್​, ಗಂಡ ಫೈನಾನ್ಸಿಯರ್​; ಎಸಿಬಿ ದಾಳಿ ವೇಳೆ ಸಿಕ್ಕಿತು ಭಾರಿ ಚಿನ್ನಾಭರಣ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + four =
Remember me
