ಬೆಂಗಳೂರು:ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸೇರಿ ನಾಲ್ವರು ಭ್ರಷ್ಟ ಅಧಿಕಾರಿಗಳಿಗೆ ಸೇರಿದ ರಾಜ್ಯದ 14 ಕಡೆಗಳಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.
ಬುಧವಾರ ಈ ನಾಲ್ವರು ಅಧಿಕಾರಿಗಳ ಕಚೇರಿ-ನಿವಾಸ ಸೇರಿ ರಾಜ್ಯದ 14 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಅಕ್ರಮ ಆಸ್ತಿಗೆ ಸಂಬಂಧಿತ ದಾಖಲೆ ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಶೋಧ ಮುಂದುವರಿದಿದ್ದು, ನಾಲ್ವರೂ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ದಾಳಿಯ ವಿವರ:ಎಲ್. ಸತೀಶ್ ಕುಮಾರ್, ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು: ಮೈಸೂರು ನಗರದ ಟಿ.ಕೆ.ಲೇಔಟ್​ನಲ್ಲಿನ ನಿವಾಸ, ಬೆಂಗಳೂರು ಡಾಲರ್ಸ್ ಕಾಲನಿಯ ವಾಸದ ಬಾಡಿಗೆ ಮನೆ, ಗಾಂಧಿನಗರದ ವಾಣಿಜ್ಯ ತೆರಿಗೆ ಕಚೇರಿ ಮೇಲೆ ದಾಳಿ ನಡೆದಿದೆ.
ಎನ್.ರಾಮಕೃಷ್ಣ, ವಲಯ ಅರಣ್ಯಾಧಿಕಾರಿ, ಶ್ರೀನಿವಾಸಪುರ ವಲಯ, ಕೋಲಾರ: ಕೋಲಾರದ ಬಂಗಾರಪೇಟೆಯ ವಿಜಯನಗರದಲ್ಲಿನ ನಿವಾಸ, ಮಿಟ್ಟಹಳ್ಳಿಯ ಸ್ವಗ್ರಾಮದ ಮನೆ, ಬೆಂಗಳೂರಿನ ಕಸ್ತೂರಿನಗರದಲ್ಲಿನ ಸ್ನೇಹಿತರ ಮನೆ, ಇವರು ಕರ್ತವ್ಯ ನಿರ್ವಹಿಸುತ್ತಿದ್ದ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಆಸ್ತಿ ದಾಖಲೆ, ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಗೋಪಶೆಟ್ಟಿ ಮಲ್ಲಿಕಾರ್ಜುನ, ಕಾರ್ಯನಿರ್ವಾಹಕ ಅಭಿಯಂತರ, ರಾಯಚೂರು ಜಿಲ್ಲಾ ನಗರಾಭಿವೃದ್ಧಿ ಕೋಶ ವಿಭಾಗ: ರಾಯಚೂರು ಜಿಲ್ಲೆಯ ಐಡಿಎಸ್​ಎಂಟಿ ಲೇಔಟ್, ಮಂತ್ರಾಲಯ ರಸ್ತೆಯಲ್ಲಿನ ವಾಸದ ಮನೆ, ಲಿಂಗಸಗೂರು ರಸ್ತೆಯಲ್ಲಿ ಪತ್ನಿ ಹೆಸರಿನಲ್ಲಿರುವ ಪೆಟ್ರೋಲ್ ಬಂಕ್, ಹೆದ್ದಾರಿಯಲ್ಲಿರುವ ನಾಗಭೂಷಣ್ ಟ್ರಾ್ಯಕ್ಟರ್ ಷೋ ರೂಂ, ಇವರು ಕೆಲಸ ಮಾಡುತ್ತಿರುವ ಕಚೇರಿ ಮೇಲೆ ದಾಳಿ, ಆಸ್ತಿ ದಾಖಲೆಗಳು ಪತ್ತೆಯಾಗಿವೆ.
ರಾಘಪ್ಪ ಲಾಲಪ್ಪ ಲಮಾಣಿ, ಸಹಾಯಕ ಅಭಿಯಂತರ, ಕೃ.ಭಾ.ಜ.ನಿ.ನಿ., ಬಾಗಲಕೋಟೆ ಕ್ಯಾಂಪ್ ಆಲಮಟ್ಟಿ, ಬೀಳಗಿ: ಬಾಗಲಕೋಟೆ ವಿದ್ಯಾಗಿರಿಯಲ್ಲಿನ ವಾಸದ ಮನೆ, ಇವರ ಸಹೋದರನ ಮಾಲೀಕತ್ವದ ಶಿರಗುಪ್ಪಿ ಎಲ್.ಟಿ. ಗ್ರಾಮದಲ್ಲಿರುವ ವಾಸದ ಮನೆ, ಇವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರ ಕಚೇರಿಗೆ ದಾಳಿ ನಡೆಸಿ ಆಸ್ತಿಗೆ ಸಂಬಂಧಿತ ದಾಖಲೆ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 19 =
Remember me
