ದಾವಣಗೆರೆ:ವ್ಯಕ್ತಿಯೊಬ್ಬ ಹಗಲಲ್ಲೇ ಪಾನಮತ್ತನಾಗಿ ಬೈಕ್​ ಓಡಿಸಿ ಮಹಿಳೆಯೊಬ್ಬರಿಗೆ ಗುದ್ದಿದ್ದು, ಆಕೆ ಸಾವಿಗೀಡಾಗಿದ್ದರೆ, ಅಪಘಾತಕ್ಕೆ ಕಾರಣವಾದ ದ್ವಿಚಕ್ರವಾಹನ ಸವಾರನ ಪರಿಸ್ಥಿತಿಯೂ ಗಂಭೀರವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಪಾನಮತ್ತ ಸವಾರ ಪ್ರದೀಪ್ ಎಂಬಾತನೇ ಆರೋಪಿ, ರೇಣುಕಮ್ಮ ಸಾವಿಗೀಡಾದ ಪಾದಚಾರಿ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ ಇಂದು ಈ ಅಪಘಾತ ನಡೆದಿದೆ. ಪ್ರದೀಪ್​ ಬೈಕ್​ ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಸಾವಿಗೀಡಾಗಿದ್ದರೆ, ಗಂಭೀರ ಗಾಯಗೊಂಡಿರುವ ಬೈಕ್ ಸವಾರನ ಪರಿಸ್ಥಿತಿ ಚಿಂತಾಜನಕವಾಗಿದೆ.
ರೇಣುಕಮ್ಮ ಕಾರು ಹತ್ತಲು ರಸ್ತೆ ದಾಟುತ್ತಿದ್ದರು. ಪಾನಮತ್ತನಾಗಿದ್ದ ಪ್ರದೀಪ್ ಇದೇ ವೇಳೆ ವೇಗವಾಗಿ ಬಂದಿದ್ದು, ಬೈಕ್ ಆಕೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಕೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. ಪ್ರದೀಪ್​ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
23 ವರ್ಷಗಳ ಕಾಲ ನಾಪತ್ತೆಯಾಗಿದ್ದ ತಂದೆ; ಸತ್ತು ಹೋಗಿದ್ದರೆಂದು ಭಾವಿಸಿದ್ದ ಮಕ್ಕಳಿಗೆ ಕೊನೆಗೂ ಸಿಕ್ಕ ಅಪ್ಪ!

ಹೆಚ್ಚುತ್ತಿರುವ ಮಕ್ಕಳ ಆತ್ಮಹತ್ಯೆ!; ಓದಿನ ಒತ್ತಡ ತಾಳಲಾಗದೆ ನೇಣು ಹಾಕಿಕೊಂಡ ವಿದ್ಯಾರ್ಥಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − five =
Remember me
