ದಾವಣಗೆರೆ:ಅಕ್ಕ-ತಮ್ಮ ಇಬ್ಬರೂ ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಭಿಕ್ಷೆ ಬೇಡುತ್ತ ಊರೂರು ಅಲೆಯುತ್ತಿದ್ದರು. ಅದೇ ರೀತಿ ಬುಧವಾರ ಬೆಳಗ್ಗೆ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಕ್ಕೂ ಬಂದಿದ್ದರು. ಭಿಕ್ಷೆ ಬೇಡಿ ಹೊರಟಿದ್ದವರ ಮೇಲೆ ಕ್ರೇನ್​ ರೂಪದಲ್ಲಿ ಬಂದ ಜವರಾಯ ಅವರಿಬ್ಬರ ಪ್ರಾಣ ಹೊತ್ತೊಯ್ದಿದ್ದಾನೆ.
ಉತ್ತರ ಪ್ರದೇಶ ಮೂಲದ ಮನಿಷಾ (18) ಹಾಗೂ ಅನಂತಸೇನ (12) ಮೃತರು. ಸಂಬಂಧದಲ್ಲಿ ಇಬ್ಬರೂ ಅಕ್ಕ- ತಮ್ಮ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಿಂದ ಬಂದಿರುವ ಇವರ ಕುಟುಂಬದವರು ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ದಿನವೂ ಬೆಳಗ್ಗೆ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಗೆ ಹೋಗಿ ಭಿಕ್ಷೆ ಬೇಡಿ ಸಂಜೆ ದಾವಣಗೆರೆಗೆ ವಾಪಸಾಗುತ್ತಾರೆ.
ಬುಧವಾರ ಬೆಳಗ್ಗೆ ನಲ್ಲೂರು ಗ್ರಾಮಕ್ಕೆ ಬಂದು ಭಿಕ್ಷೆ ಬೇಡಿ ರಸ್ತೆ ದಾಟುತ್ತಿದ್ದ ಮನಿಷಾ ಮತ್ತು ಅನಂತಸೇನ ಎಂಬುವರ ಮೇಲೆ ಕ್ರೇನ್ ಹರಿದಿದ್ದು, ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಇನ್ನೇನು ಮನೆಗೆ ಹೋಗಬೇಕು ಅನ್ನುವಷ್ಟರಲ್ಲಿ ತಾಯಿ-ಮಗನ ಪ್ರಾಣ ಹೊತ್ತೊಯ್ದ ಜವರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
