ಬೈಲುಕುಪ್ಪೆ(ಪಿರಿಯಾಪಟ್ಟಣ):ಅಪಘಾತಕ್ಕೊಳಗಾಗಿ ಸಾವು-ಬದುಕಿನ ನಡುವೆ ನರಳಾಡುತ್ತ ಬಿದ್ದಿದ್ದ ನಾಯಿಯೊಂದರ ಪ್ರಾಣ ಉಳಿಸಲು ಹೋದವ ಸ್ಥಳದಲ್ಲೇ ದುರಂತ ಅಂತ್ಯಕಂಡ ಹೃದಯವಿದ್ರಾವಕ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಗುಬ್ಬಿ ಕೆರಗೋಡು ಗ್ರಾಮದ ಪುಟ್ಟಾಚಾರ್​ ಎಂಬುವರ ಪುತ್ರ ಮಹೇಶ್​ (40) ಮೃತರು.ಇದನ್ನೂ ಓದಿರಿಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…
ಸೋಮವಾರ ರಾತ್ರಿ ಪಿರಿಯಾಪಟ್ಟಣ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಅಪರಿಚಿತ ವಾಹನ ಕೊಪ್ಪ ಗ್ರಾಮದ ಬಿ.ಎಂ.ರಸ್ತೆಯ ಪೆಟ್ರೋಲ್​ ಬಂಕ್​ ಬಳಿ ನಾಯಿಗೆ ಡಿಕ್ಕಿ ಹೊಡೆದುಕೊಂಡು ಹೋಗಿತ್ತು. ತೀವ್ರವಾಗಿ ಗಾಯಗೊಂಡ ನಾಯಿ ರಸ್ತೆಯಲ್ಲೇ ನರಳಾಡುತ್ತ ಬಿದ್ದಿತ್ತು. ನಾಯಿಯ ಚಿಂತಾಜನಕ ಸ್ಥಿತಿಯನ್ನು ನೋಡಿದ ಪೆಟ್ರೋಲ್​ ಬಂಕ್​ ಕೆಲಸಗಾರ ಮಹೇಶ್​, ಅದರ ಬಾಯಿಗೆ ನೀರು ಬಿಡುತ್ತಿದ್ದರು. ಅಷ್ಟರಲ್ಲಿ ಯಮರೂಪಿಯಾಗಿ ಬಂದ ಮತ್ತೊಂದು ಅಪರಿಚಿತ ವಾಹನ ಮಹೇಶ್​ಗೆ ಡಿಕ್ಕಿ ಹೊಡೆಯಿತು. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮಹೇಶ್​ ಸ್ಥಳದಲ್ಲೇ ಅಸುನೀಗಿದರು.
ಬೈಲುಕುಪ್ಪೆ ಠಾಣಾಧಿಕಾರಿ ಜಮೀರ್​ ಅಹಮದ್​, ಎಎಸ್​ಐ ನಂಜುಂಡರಾಜೇ ಅರಸ್​, ಸಿಬ್ಬಂದಿ ನಂದೀಶ್​ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!

ಅಪ್ಪ ಸತ್ತ ಸುದ್ದಿ ಮಗನಿಗೆ ಗೊತ್ತೇ ಇರಲಿಲ್ಲ… ಮರುದಿನ ಆತನೂ ಕೊನೆಯುಸಿರೆಳೆದ!

ಇನ್ನೂ ಋತುಮತಿ ಆಗದ ಯುವತಿಯನ್ನು ತುಂಬಾ ಇಷ್ಟಪಟ್ಟು ಮದುವೆಯಾದ… ಬಳಿಕ ಆಗಿದ್ದೆಲ್ಲವೂ ದುರಂತ!

ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
