ಚಿಕ್ಕೋಡಿ:ಐದು ತಿಂಗಳ ಹಸುಗೂಸಿನ ಜತೆ ಬೈಕ್​ನಲ್ಲಿ ಹೊರಟಿದ್ದ ದಂಪತಿ ಮಾರ್ಗಮಧ್ಯೆ ಮಗು ಸಮೇತ ದುರ್ಮರಣಕ್ಕೀಡಾದ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದ ಬಳಿ ಸಂಭವಿಸಿದೆ.
ಸದಾಶಿವ ಗಾಣಗೇರ(35), ಇವರ ಪತ್ನಿ ಸಕ್ಕುಬಾಯಿ ಗಾಣಗೇರ(31) ಮತ್ತು 5 ತಿಂಗಳ ಹೆಣ್ಣುಮಗು ಸೃಷ್ಠಿ ಮೃತ ದುರ್ದೈವಿಗಳು. ಮೃತರು ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳು.
ಶನಿವಾರ ಹುಕ್ಕೇರಿಯಿಂದ ಸ್ವಗ್ರಾಮ ರಾಯಭಾಗ ತಾಲೂಕಿನ ಹಿಡಕಲ್​ಗೆ ಬೈಕ್​ನಲ್ಲಿ ಮೂವರೂ ಹೊರಟಿದ್ದರು. ಗೋಕಾಕ ತಾಲೂಕಿನ ಸಂಗನಕೇರಿ ಬಳಿ ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಮತ್ತು ಬೈಕ್ ಅಪಘಾತಕ್ಕೀಡಾಗಿದ್ದು, ಸ್ಥಳದಲ್ಲೇ ಅಪ್ಪ-ಅಮ್ಮ-ಮಗು ಮೃತಪಟ್ಟಿದ್ದಾರೆ.
ಅಪಘಾತದ ಭೀಕರತೆ ಕಂಡ ದಾರಿಹೋಕರು ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದು, ವಿಧಿಯಾಟಕ್ಕೆ ಹಿಡಿಶಾಪ ಹಾಕಿದ್ದಾರೆ. ಘಟಪ್ರಭಾ ಪೊಲೀಸರು ಸ್ಥಳ ಪರಿಶೀಲಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.vijayavani.net/magadi-love-case-young-woman-death-three-people-arrest/
ಸಾವಿರಾರು ಕಿಲೋ ಮೀಟರ್​ ಅಂತರದಲ್ಲಿ ಯುವಕನ ರುಂಡ-ಮುಂಡ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + ten =
Remember me
