ಮಧುಗಿರಿ:ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರೊಬ್ಬರನ್ನು ನೋಡಿಕೊಂಡು ಬರಲೆಂದು ಹೋಗಿದ್ದ 7 ಜನರ ಪೈಕಿ ಒಂದೇ ಕುಟುಂಬದ ಮೂವರು ಮಾರ್ಗಮಧ್ಯೆ ದುರ್ಮರಣಕ್ಕೀಡಾಗಿದ್ದಾರೆ.
ಸೀಮಾಂಧ್ರದ ಎನ್.ಆರ್.ರೊಪ್ಪಂ ಗ್ರಾಮದ ನರಸಿಂಹಮೂರ್ತಿ(32), ಪಾವಗಡ ತಾಲೂಕಿನ ನಲ್ಲಿಗಾನಹಳ್ಳಿಯ ದುರ್ಗಪ್ಪ(21) ಹಾಗೂ ನರಸಮ್ಮ(35) ಮೃತರು.ಇದನ್ನೂ ಓದಿರಿಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…
ಏನಾಯ್ತು?:ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರೊಬ್ಬರನ್ನು ನೋಡಲೆಂದು ನರಸಿಂಹಮೂರ್ತಿ, ದುರ್ಗಪ್ಪ, ನರಸಮ್ಮ, ಗೋವಿಂದಪ್ಪ, ಅಲುವೇಲಮ್ಮ, ಮಾರಪ್ಪ ಮತ್ತು ಗೋಪಾಲ್ ಅವರು ಇನೋವಾ ಕಾರಿನಲ್ಲಿ ಶುಕ್ರವಾರ ತೆರಳಿದ್ದರು. ಅವರ ಯೋಗಕ್ಷೇಮ ವಿಚಾರಿಸಿಕೊಂಡು ರಾತ್ರಿ ವಾಪಸ್ ಆಗುತ್ತಿದ್ದರು. ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ಚಂದ್ರಬಾವಿ ಬಳಿಯ ರಸ್ತೆಬದಿ ಕೆಟ್ಟುನಿಂತಿದ್ದ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ನರಸಿಂಹಮೂರ್ತಿ, ದುರ್ಗಪ್ಪ, ನರಸಮ್ಮ ಸ್ಥಳದಲ್ಲೇ ಅಸುನೀಗಿದರು. ಹಿಂಬದಿ ಕುಳಿತ್ತಿದ್ದ ಗೋಪಾಲ್ ಪ್ರಾಣಾಪಾಯದಿಂದ ಪಾರಾದರು. ಇನ್ನುಳಿದ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
