ಮಂಡ್ಯ:ಸಾವು ಅದ್ಹೇಗೆ ಕಾಣಿಸಿಕೊಳ್ಳುತ್ತೋ ಆ ದೇವರೇ ಬಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಿಕೊಂಡು ವಾಪಸ್​ ಆಗುತ್ತಿದ್ದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಅಮ್ಮ-ಮಗಳು ದುರಂತ ಅಂತ್ಯ ಕಂಡಿದ್ದಾರೆ. ಗಂಡನ ಕಣ್ಣೆದುರಲ್ಲೇ ಪತ್ನಿ-ಮಗಳು ಸಾವಿಗೀಡಾದ ದೃಶ್ಯ ಮನಕಲಕುವಂತಿತ್ತು.
ಹಾಡ್ಯ ಗ್ರಾಮದ ದೇವರಾಜು ಅವರ ಪತ್ನಿ ಶಶಿಕಲಾ(35) ಮತ್ತು ಅವರ ಮಗಳು ಲಾವಣ್ಯ(4) ಮೃತರು.ಇದನ್ನೂ ಓದಿರಿಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!
ಘಟನೆ ವಿವರ:ಹಾಡ್ಯ ಗ್ರಾಮದ ದೇವರಾಜು ಸೋಮವಾರ ಬೆಳಗ್ಗೆ ಅನಾರೋಗ್ಯದ ನಿಮಿತ್ತ ಮಗಳು ಲಾವಣ್ಯಳಿಗೆ ಚಿಕಿತ್ಸೆ ಕೊಡಿಸಲು ಟಿವಿಎಸ್ ಸ್ಕೂಟರ್‌ನಲ್ಲಿ ಪತ್ನಿ ಜತೆಗೆ ಮಂಡ್ಯಕ್ಕೆ ಆಗಮಿಸಿದ್ದರು. ಚಿಕಿತ್ಸೆ ಪಡೆದು ಸ್ವಗ್ರಾಮಕ್ಕೆ ವಾಪಸ್‌ ತೆರಳುವ ಮಾರ್ಗ ಮಧ್ಯೆ ಹೊಳಲು ಗ್ರಾಮದ ಸರ್ಕಲ್​ನಲ್ಲಿ ಹಿಂದಿನಿಂದ ಬಂದ ಟಿಪ್ಪರ್, ಟಿವಿಎಸ್​ಗೆ ಡಿಕ್ಕಿಯೊಡೆದಿದೆ. ಕೆಳಕ್ಕೆ ಬಿದ್ದ ತಾಯಿ-ಮಗು ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಅವರಿಬ್ಬರೂ ಸಾವನ್ನಪ್ಪಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ದೇವರಾಜು(45) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಡ್ಯ ಗ್ರಾಮಾಂತರ ಠಾಣಾ ಪಿಎಸ್ಐ ಸಿದ್ದರಾಜು ಸ್ಥಳ ಪರಿಶೀಲಿಸಿದರು. ಆಂಬುಲೆನ್ಸ್​ನಲ್ಲಿ ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೀರಾಡುತ್ತಲೇ ಎತ್ತಿನಬಂಡಿ ಸಮೇತ ನದಿ ನೀರಲ್ಲಿ ಕೊಚ್ಚಿಹೋದ ಯುವಕರು!

ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + six =
Remember me
