ಕೊಪ್ಪಳ:ಚಾಲಕನ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತ ಸಂಭವಿಸಿದ್ದು, ಟೆಂಪೊ ಪ್ಯಾಸೆಂಜರ್ ವಾಹನವೊಂದು ಹೆದ್ದಾರಿಯಿಂದ ಹೋಟೆಲ್​ಗೆ ನುಗ್ಗಿ ಗ್ಯಾಸ್ ಒಲೆಗೇ ಡಿಕ್ಕಿ ಹೊಡೆದ ಪ್ರಕರಣ ಸಂಭವಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಹೆದ್ದಾರಿಯ ಆ ಕಡೆಯಿಂದ ಟೆಂಪೊ ಪ್ಯಾಸೆಂಜರ್ ವಾಹನ ಏಕಾಏಕಿ ಹೋಟೆಲ್​ನತ್ತ ನುಗ್ಗಿ ಬಂದಿದೆ. ಇದನ್ನು ತಕ್ಷಣ ಗಮನಿಸಿದ್ದ ಅಲ್ಲಿದ್ದವರು ಕೂಡಲೇ ಎದ್ದು ಪಕ್ಕಕ್ಕೆ ಓಡಿದ್ದರು. ಅದಾಗ್ಯೂ ವೇಗವಾಗಿಯೇ ಬಂದ ವಾಹನ ಹೋಟೆಲ್​ಗೇ ನುಗ್ಗಿದ್ದು ಗ್ಯಾಸ್​ ಒಲೆಗೆ ಡಿಕ್ಕಿ ಹೊಡೆದಿದೆ.
ಹೋಟೆಲ್​ಗೆ ನುಗ್ಗುವ ಮೊದಲು ಈ ವಾಹನ ಬೈಕ್​ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಕ್ಷಣಮಾತ್ರದಲ್ಲಿ ಹೋಟೆಲ್​ಗೆ ನುಗ್ಗಿತ್ತು. ಅಲ್ಲಿದ್ದ ಜನರು ತಕ್ಷಣ ಎದ್ದು ಪಕ್ಕಕ್ಕೆ ಓಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಬೆದರಿದ ಗ್ರಾಹಕರು-ಸಿಬ್ಬಂದಿ ಎದ್ದುಬಿದ್ದು ಓಡಿಹೋಗಿದ್ದಾರೆ. ಈ ಅಪಘಾತದಲ್ಲಿ ಟೆಂಪೊ ಪ್ಯಾಸೆಂಜರ್ ವಾಹನ ಸಂಪೂರ್ಣ ಜಖಂಗೊಂಡಿದೆ. 2-3 ಬೈಕ್ ಮತ್ತು ಹೋಟೆಲ್​ ಪೀಠೋಪಕರಣಗಳು ಹಾನಿಗೀಡಾಗಿವೆ. ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + fifteen =
Remember me
