ಆಯನೂರು (ಶಿವಮೊಗ್ಗ):ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದು ವಾಪಸ್​ ಬರುತ್ತಿದ್ದ ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾದ ಘಟನೆ ಹೊಸನಗರ ತಾಲೂಕು ಗರ್ತಿಕೆರೆ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.
ಆಯನೂರಿನ ಕಲಾವತಿ (60), ಇವರ ಪುತ್ರ ಲೋಹಿತ್(34) ಮತ್ತು ಮೊಮ್ಮಗ ಶಶಾಂಕ್(8) ಮೃತರು. ಆಯನೂರಲ್ಲಿ ಗೂಡಂಗಡಿ ನಡೆಸುತ್ತಿದ್ದ ಲೋಹಿತ್ ತನ್ನ ಕಾರಿನಲ್ಲಿ ತಾಯಿ, ಅಕ್ಕ ಅಂಬಿಕಾ, ಭಾವ ರವಿಭಟ್, ಅಕ್ಕನ ಮಕ್ಕಳಾದ ಗಣೇಶ್ ಮತ್ತು ಶಶಾಂಕ್ ಅವರ ಜತೆ ಬುಧವಾರ ಬೆಳಗ್ಗೆ ಧರ್ಮಸ್ಥಳಕ್ಕೆ ತೆರಳಿದ್ದರು. ಮಂಜುನಾಥಸ್ವಾಮಿ ದರ್ಶನ ಪಡೆದು ಸಂಜೆ ಕಾರಿನಲ್ಲಿ ರಿಪ್ಪನ್‌ಪೇಟೆ ಮಾರ್ಗವಾಗಿ ಆಯನೂರಿಗೆ ಬರುತ್ತಿದ್ದರು. ರಾತ್ರಿ ಗರ್ತಿಕೆರೆ ತಿರುವಿನಲ್ಲಿ ಲೋಹಿತ್ ಚಾಲನೆ ಮಾಡುತ್ತಿದ್ದ ಕಾರು ತಿರುವಿನಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಅಪಘಾತ ಸಣ್ಣ ಪ್ರಮಾಣದಲ್ಲಾಗಿದ್ದರಿಂದ ಕಾರಿನಲ್ಲಿದ್ದ ಯಾರೊಬ್ಬರಿಗೂ ತೊಂದರೆ ಆಗಲಿಲ್ಲ. ಆದ್ರೆ, ಅಪಘಾತ ಸಂಭವಿಸಿದ ನಂತರ ಕಾರು ಸ್ಟಾರ್ಟ್ ಆಗಲಿಲ್ಲ. ಲೋಹಿತ್, ಕಾರಿನ ಬಾನೆಟ್ ಎತ್ತಿ ಪರೀಕ್ಷಿಸುವಾಗ ಬಂದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!ಇದನ್ನೂ ಓದಿರಿಇನ್ನೂ ಋತುಮತಿ ಆಗದ ಯುವತಿಯನ್ನು ತುಂಬಾ ಇಷ್ಟಪಟ್ಟು ಮದುವೆಯಾದ… ಬಳಿಕ ಆಗಿದ್ದೆಲ್ಲವೂ ದುರಂತ!
ಅಷ್ಟಕ್ಕೂ ಅಲ್ಲಿ ಆಗಿದ್ದು ವಿದ್ಯುತ್​ ಅವಘಡ. ಲೋಹಿತ್ ಬಾನೆಟ್ ಎತ್ತಿ ಪರೀಕ್ಷಿಸುವಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟರು. ಇದನ್ನು ಅರಿಯದ ತಾಯಿ, ಮಗ ಕುಸಿದು ಬಿದ್ದಿದ್ದಾನೆ ಎಂದು ಭಾವಿಸಿ ಕಾರಿನಿಂದ ಕೆಳಗಿಳಿದು ಬಿದ್ದಿದ್ದ ಲೋಹಿತ್‌ನನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಅವರೂ ವಿದ್ಯುತ್ ಸ್ಪರ್ಶಕ್ಕೀಡಾಗಿ ಅಸುನೀಗಿದರು. ಇದಾದ ಕೆಲವೇ ಕ್ಷಣದಲ್ಲಿ ಹೊರಬಂದ ಅವರ ಮೊಮ್ಮಗ ಶಶಾಂಕ್ ಕೆಳಗೆ ಬಿದ್ದಿದ್ದ ಮಾವ-ಅಜ್ಜಿಯನ್ನ ಮುಟ್ಟಿ ಆತನೂ ವಿದ್ಯುತ್ ಶಾಕ್‌ನಿಂದ ಮೃತಪಟ್ಟ.
ಈ ಘಟನೆಗೆ ಬೆಚ್ಚಿಬಿದ್ದ ಅಂಬಿಕಾ-ರವಿಭಟ್ ಮತ್ತು ಅವರ ಪುತ್ರ 15 ವರ್ಷದ ಗಣೇಶ್ ಮೂವರೂ ಕೆಳಗೆ ಬಿದ್ದಿದ್ದವರ ಬಳಿ ಸುಳಿಯದೆ ಪ್ರಾಣಾಪಾಯದಿಂದ ಪಾರಾದರು. ರಿಪ್ಪನ್‌ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 3 =
Remember me
