ರಾಯಚೂರು:ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಗೆಳೆಯನ ಶವವನ್ನು ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಿತ್ರರು ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ಈ ಅಪಘಾತ ಸಂಭವಿಸಿದ್ದು, ಅಂಬರೀಷ್ (30), ಗೋವಿಂದ್ (35) ದೇವರಾಜ್ (34) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಚಾಲಕ ಉಸ್ಮಾನ್ ಪಾಷಾ ಹಾಗೂ ಯಲ್ಲಾಲಿಂಗ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸಾವಿಗೀಡಾದವರು ಹಾಗೂ ಗಾಯಾಳುಗಳು ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಇವರ ಸ್ನೇಹಿತ ಬಸಯ್ಯ ಎಂಬಾತ ನಿನ್ನೆ ಬೆಂಗಳೂರಿನ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದ. ಆತನ ಶವವವನ್ನು ತೆಗೆದುಕೊಂಡು ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟು ಯಾದಗಿರಿ ಜಿಲ್ಲೆಯ ವಡಗೇರಾ ಎಂಬಲ್ಲಿಗೆ ಹೊರಟಿದ್ದರು.
ಇವರು ಬೆಂಗಳೂರಿನಿಂದ ಮೂರು ಕಾರು ಹಾಗೂ ಒಂದು ಆ್ಯಂಬುಲೆನ್ಸ್​ನಲ್ಲಿ ಹೊರಟಿದ್ದು, ಆ ಪೈಕಿ ಒಂದು ಕಾರು ಪಂಕ್ಚರ್​ ಆಗಿ ಹಿಂದೆ ಉಳಿದಿತ್ತು. ನಂತರ ಇವರು ಹೊರಟಿದ್ದು ಮಾರ್ಗಮಧ್ಯೆ ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರು ಮತ್ತು ಇವರಿದ್ದ ಕಾರು ಮುಖಾಮುಖಿ ಡಿಕ್ಕಿ ಆಗಿದ್ದವು. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು ರಸ್ತೆಯಾಚೆಗೆ ಪಲ್ಟಿಯಾಗಿತ್ತು. ಗಾಯಾಳುಗಳನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೀಕರ ಅಪಘಾತ, ಆರು ಮಂದಿ ಸ್ಥಳದಲ್ಲೇ ಸಾವು; ಮದುವೆ ಮುಗಿಸಿಕೊಂಡು ಮರಳುವಾಗ ಅವಘಡ..

ಮೊನ್ನೆ ಎಚ್​ಡಿಕೆ, ನಿನ್ನೆ ಡಿಕೆಶಿ, ಇಂದು ಮೊಯ್ಲಿ!; ಏನದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + seventeen =
Remember me
