ಮಂಡ್ಯ:ಪೊಲೀಸ್ ಸಿಬ್ಬಂದಿ ಸಂಚರಿಸುತ್ತಿದ್ದ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಡಿಎಆರ್ ಪೇದೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಎಎಸ್ಐಗೆ ಗಂಭೀರ ಗಾಯಗೊಂಡಿದ್ದಾರೆ.
ಮದ್ದೂರು ತಾಲೂಕು ತೊರೆಶೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ಇಂದು(ಗುರುವಾರ) ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಪೇದೆ ಅರುಣ್(26) ಮೃತರು. ಕೆಸ್ತೂರಿನ ಎಎಸ್ಐ ಬಾಲಯ್ಯ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿರಿಲೇಡೀಸ್ ಜತೆ ಸೆಕ್ಸ್ ಜಾಬ್​! ಕೆಲಸಕ್ಕೆ ಸೇರಿದ ಟೆಕ್ಕಿ ಕಥೆ ಏನಾಯ್ತು?
ತೊಪ್ಪನಹಳ್ಳಿಯ ವ್ಯಕ್ತಿಗೆ ಅರುಣ್ ಗನ್‌ಮ್ಯಾನ್ ಆಗಿದ್ದರು. ಕಾರ್ಯನಿಮಿತ್ತ ತೊರೆಶೆಟ್ಟಹಳ್ಳಿಗೆ ಆಗಮಿಸಿದ್ದರು. ಈ ವೇಳೆ ಪೇದೆ ಸವಾರಿ ಮಾಡುತ್ತಿದ್ದ ಬೈಕ್​ ಮತ್ತು ಎಎಸ್​ಐ ಕುಳಿತಿದ್ದ ಬೈಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ.
ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮದ್ದೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಎಎಸ್ಪಿ ಡಾ.ಶೋಭಾರಾಣಿ, ಡಿವೈಎಸ್ಪಿ ಪೃಥ್ವಿ, ಸಿಪಿಐ ಪ್ರಸಾದ್ ಪರಿಶೀಲನೆ ನಡೆಸಿದರು.
ಕರೊನಾ ಸೋಂಕು ತಗುಲಿದ್ದ ಸುಮಲತಾ ಅಂಬರೀಶ್, ರಾಕ್​ಲೈನ್​ ವೆಂಕಟೇಶ್​ ಚೇತರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 3 =
Remember me
