
ಹೈದರಾಬಾದ್:ಸಾಮಾನ್ಯವಾಗಿ ಮಾಂಸಹಾರ ಪ್ರಿಯರಿಗೆ ಬಿರಿಯಾನಿ ಎಂದರೆ ಅಚ್ಚುಮೆಚ್ಚು. ಅದರಲ್ಲೂ ಹೈದರಾಬಾದ್ ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುವುದು ಸಹಜ. ಇಂತಿಪ್ಪ ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 72 ಲಕ್ಷ ಬಿರಿಯಾನಿ ಆರ್ಡರ್‌ ಮಾಡುವ ಮೂಲಕ ಹೈದರಾಬಾದ್ ಜನರು ಬಿರಿಯಾನಿ ಬಗ್ಗೆ ತಮಗಿರುವ ಒಲವನ್ನು ಮತೊಮ್ಮೆ ಸಾಬೀತುಪಡಿಸಿದ್ದಾರೆ.
ಸ್ವಿಗ್ಗಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಹೈದರಾಬಾದಿಗಳು ಈ ಐಕಾನಿಕ್ ಖಾದ್ಯದ ಮೇಲೆ ತಮ್ಮ ಅವಿನಾಭಾವ ಪ್ರೀತಿ ತೋರಿದ್ದಾರೆ. ಕಳೆದ 12 ತಿಂಗಳುಗಳಲ್ಲಿ ಒಟ್ಟು 150 ಲಕ್ಷ ಬಿರಿಯಾನಿ ಆರ್ಡರ್‌ ಮಾಡಿದ್ದಾರೆ. ಈ ಸಂಖ್ಯೆ ಗಮನಿಸಿದರೆ ಹೈದರಾಬಾದ್ ಬಿರಿಯಾನಿ ರುಚಿ, ಅದನ್ನು ಜನರು ಎಷ್ಟರಮಟ್ಟಿಗೆ ಇಷ್ಟಪಡುತ್ತಾರೆಂಬುದು ತಿಳಿಯುತ್ತದೆ. ಅದರಲ್ಲೂ ದಮ್ ಬಿರಿಯಾನಿಯನ್ನು ಜನ ಮುಗಿಬಿದ್ದು ಕೊಳ್ಳುತ್ತಾರೆ.
ಇದನ್ನೂ ಓದಿ: ಇದನ್ನೂ ಓದಿ:SSLC ವಿದ್ಯಾರ್ಥಿಗಳಿಗೆ ಈ ಬಾರಿಯೂ ಸಿಗಲಿದೆ 10% ಗ್ರೇಸ್ ಮಾರ್ಕ್ಸ್: ಯಾವೆಲ್ಲ ವಿಷಯಕ್ಕೆ ಸಿಗಲಿದೆ?
ಹಿಂದಿನ ವರ್ಷ ಇದೇ ಅವಧಿಯಲ್ಲಿ 2023 ರ ಮೊದಲಾರ್ಧದ ಸ್ವಿಗ್ಗಿ ಡೇಟಾವು ಬಿರಿಯಾನಿ ಆರ್ಡರ್‌ಗಳಲ್ಲಿ ಶೇ.8.39 ಬೆಳವಣಿಗೆ ತೋರಿಸುತ್ತದೆ. ದಮ್ ಬಿರಿಯಾನಿಗೆ 9 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳು ಬಂದಿದ್ದು, ಬಿರಿಯಾನಿ ರೈಸ್​​ಗೆ 7.9 ಲಕ್ಷ ಆರ್ಡರ್‌ಗಳು ಬಂದಿವೆ. ಮಿನಿ ಬಿರಿಯಾನಿಗೆ 5.2 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳು ಬಂದಿವೆ.
15,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳ ಮೆನು ಪಟ್ಟಿಯಲ್ಲಿ ಬಿರಿಯಾನಿ ಇದ್ದೇ ಇರುತ್ತದೆ. ಕುಕಟ್‌ಪಲ್ಲಿ, ಮಾದಾಪುರ, ಅಮೀರ್‌ಪೇಟ್, ಬಂಜಾರಾ ಹಿಲ್ಸ್, ಕೊತಪೇಟ್ ಮತ್ತು ದಿಲ್‌ಸುಖ್‌ ನಗರಗಳಲ್ಲಿ ಬಿರಿಯಾನಿ ರೆಸ್ಟೋರೆಂಟ್‌ ಹೆಚ್ಚಿವೆ. ಬಿರಿಯಾನಿ ಸೇವಿಸುವವರ ಹಾಟ್‌ಸ್ಪಾಟ್‌ ಪರಿಶೀಲಿಸಿದಾಗ, ಆಯಾ ಪ್ರದೇಶಗಳಲ್ಲಿ ಆರ್ಡರ್​​​​ಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಕುಕಟ್‌ಪಲ್ಲಿಯು ಬಿರಿಯಾನಿ ಪ್ರಿಯರ ಪಾಲಿಗೆ ಸ್ವರ್ಗ. ನಂತರ ಮಾದಾಪುರ, ಬಂಜಾರ ಹಿಲ್ಸ್, ಗಚಿಬೌಲಿ ಮತ್ತು ಕೊಂಡಾಪುರಗಳು ಈ ಸಾಲಿನಲ್ಲಿವೆ.
ಸ್ವಿಗ್ಗಿಯು ಸಮಗ್ರವಾಗಿ ವಿಶ್ಲೇಷಣೆ ಮಾಡಿ ಸಂಶೋಧನೆ ಮಾಡಿದ ಪ್ರಕಾರ ಇದು ಜನವರಿ 2023 ಮತ್ತು ಜೂನ್ 15, 2023ರ ನಡುವಿನ ಅಂಕಿಅಂಶ ಆಧರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
