ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸಿದ ನಂತರ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹಲವು ಮಾಗೋಪಾಯ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಬೆಂಗಳೂರು ಹೊರತುಪಡಿಸಿ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲೂ ತೆರಿಗೆ ಸಂಗ್ರಹ ಹೆಚ್ಚಳದ ಮೂಲಕ ಆರ್ಥಿಕ ಶಕ್ತಿ ವೃದ್ಧಿಸಲು ಮುಂದಾಗಿದೆ.
ತೆರಿಗೆ ಹೆಚ್ಚಳಕ್ಕಿಂತ ತೆರಿಗೆ ವ್ಯಾಪ್ತಿಯಿಂದ ದೂರವಿರುವ ಎಲ್ಲ ರೀತಿಯ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಕಡೆ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ರಚನೆಯಾಗಿರುವ ಸಚಿವ ಸಂಪುಟ ಉಪ ಸಮಿತಿ ಹಲವು ಸುತ್ತಿನ ಚರ್ಚೆಗಳನ್ನು ನಡೆಸಿದ್ದು ಮುಂದಿನ ಅಧಿವೇಶನದಲ್ಲಿ ಪೌರಸಂಸ್ಥೆಗಳ ಕಾಯ್ದೆ ತಿದ್ದುಪಡಿ ತರಲು ನಿರ್ಧಾರ ಮಾಡಿದೆ. ಅಕ್ರಮ-ಸಕ್ರಮ ವಿಷಯ ಸುಪ್ರೀಂಕೋರ್ಟ್ ಮುಂದಿದೆ. ಆದ್ದರಿಂದ ಆ ಪ್ರಯತ್ನಕ್ಕೆ ಸರ್ಕಾರ ಮುಂದಾಗುವುದಿಲ್ಲ. ಆದರೆ, ಬೆಂಗಳೂರಿನಲ್ಲಿರುವ ಬಿ ಖಾತೆಯ ವ್ಯವಸ್ಥೆಯನ್ನು ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಕಾಯ್ದೆಯ ಮಾದರಿಯನ್ನು ಇತರ ಸಂಸ್ಥೆಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ಪೌರಸಂಸ್ಥೆಗಳ ಕಾಯ್ದೆ 64 ಮತ್ತು 73ರ ಪ್ರಕಾರ ಆಸ್ತಿ ತೆರಿಗೆಯನ್ನು ಅಧಿಕೃತ ಕಟ್ಟಡಗಳಿಗೆ ಮಾತ್ರ ವಿಧಿಸಲು ಅವಕಾಶ ಇದೆ. ಖಾಲಿ ನಿವೇಶನಗಳು ಹಾಗೂ ಅನಧಿಕೃತ ಕಟ್ಟಡಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ಆದರೆ, ಬಿಬಿಎಂಪಿಯ 2020 ಕಾಯ್ದೆಯಲ್ಲಿ ಎ ಖಾತೆ ಮತ್ತು ಬಿ ಖಾತೆ ಎಂಬ ವ್ಯವಸ್ಥೆ ಇದೆ. ಅಕ್ರಮ-ಸಕ್ರಮ ಸುಪ್ರೀಂಕೋರ್ಟ್​ನಲ್ಲಿ ಇತ್ಯರ್ಥವಾಗುವ ತನಕ ಬಿಬಿಎಂಪಿ ಮಾದರಿಯನ್ನೇ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಅಳವಡಿಸಲು ನಿರ್ಧರಿಸಲಾಗಿದೆ.
ಮೂಲಸೌಕರ್ಯ ಒದಗಿಸಬೇಕು:ಅನಧಿಕೃತ ಕಟ್ಟಡಗಳು ಇರುವ ಕಡೆ ನೀರು, ರಸ್ತೆಯ, ವಿದ್ಯುತ್​ನಂತಹ ಮೂಲಸೌಕರ್ಯ ಕೊಡಲಾಗುತ್ತದೆ. ಆದರೆ, ತೆರಿಗೆ ಬರುತ್ತಿಲ್ಲ. ಆದ್ದರಿಂದ ಅಂತಹ ಕಟ್ಟಡ ಮತ್ತು ನಿವೇಶನಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವುದು ಸರ್ಕಾರದ ಉದ್ದೇಶವಾಗಿದೆ.
ಸಂಪನ್ಮೂಲ ನಿರೀಕ್ಷೆ: ಸರ್ಕಾರ ಈಗ ಅನಧಿಕೃತ ಕಟ್ಟಡಗಳ ಮಾಹಿತಿಯನ್ನು ಪಡೆದಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 34 ಲಕ್ಷ ಅನಧಿಕೃತ ಆಸ್ತಿಗಳಿದ್ದು ಅವುಗಳು ತೆರಿಗೆ ವ್ಯಾಪ್ತಿಗೆ ಬಂದರೆ ಕನಿಷ್ಠ 5 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ಬರಲಿದೆ. ಸರ್ಕಾರದ ಮೇಲೆ ಅಷ್ಟರಮಟ್ಟಿಗೆ ಹೊರೆ ತಗ್ಗಲಿದೆ.
ತೆರಿಗೆ ಹೆಚ್ಚಳ ಮಾಡಿಕೊಳ್ಳುವುದೇ ಪ್ರಮುಖ ಉದ್ದೇಶವಾಗಿದೆ. ನಗರ ಮತ್ತು ಪಟ್ಟಣಗಳಲ್ಲಿ ನಗರೋತ್ಥಾನ, ಅಮೃತ್, ಅಮೃತ್-2 ಯೋಜನೆಗಳು ಜಾರಿಯಾಗುತ್ತಿವೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ಪಾಲು 1, 600 ಕೋಟಿ ರೂ.ಗಳನ್ನು ಭರಿಸಬೇಕಾಗಿದೆ. ಅಮೃತ್-2ಕ್ಕೆ 1,100 ಕೋಟಿ ರೂ.ಗಳ ಅಗತ್ಯವಿದೆ. ಇದರ ಜತೆಗೆ ಕೆಯುಐಡಿಎಫ್​ಸಿಯ ಮೂಲಕ ಪಡೆದಿರುವ 3,255 ಕೋಟಿ ರೂ.ಗಳನ್ನು ಮರುಪಾವತಿ ಮಾಡಬೇಕಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ 500 ಕೋಟಿ ರೂ.ಗಳನ್ನು ಸ್ಥಳೀಯ ಸಂಸ್ಥೆಗಳು ನೀಡಬೇಕಾಗಿದೆ. ಆದರೆ, ಅಷ್ಟು ಪ್ರಮಾಣದ ತೆರಿಗೆಯೇ ವಸೂಲಿಯಾಗುತ್ತಿಲ್ಲ.
ನಗರ ಸ್ಥಳೀಯ ಸಂಸ್ಥೆಗಳಿಗೆ ಬರುವ ತೆರಿಗೆಯ ಪ್ರಮಾಣ ವಾರ್ಷಿಕ 1,300 ಕೋಟಿ ರೂ.ಗಳಷ್ಟಿದೆ. ಸ್ವಯಂ ಆಸ್ತಿ ತೆರಿಗೆ ಘೋಷಣೆ, ತೆರಿಗೆ ಕಟ್ಟಲು ಆನ್​ಲೈನ್ ಮತ್ತು ಯುಪಿಐ ವ್ಯವಸ್ಥೆ ತಂದರೂ ಉಪಯೋಗವಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಆಸ್ತಿಗಳ ಮಾರ್ಗಸೂಚಿ ಬೆಲೆ ಹೆಚ್ಚಳವಾಗದ ಹಿನ್ನೆಲೆಯಲ್ಲಿ ತೆರಿಗೆಯೂ ಹೆಚ್ಚಳವಾಗಿಲ್ಲ. ಪ್ರತಿ ವರ್ಷ ಶೇ.3 ರಿಂದ 5 ರಷ್ಟು ಹೆಚ್ಚಿಸಬೇಕೆಂಬ ನಿಯಮವಿದೆ.
ಎ ಖಾತೆಯ ವ್ಯಾಪ್ತಿಯ ಆಸ್ತಿಗಳು ಅಧಿಕೃತವಾಗಿರುತ್ತವೆ. ಅವುಗಳಿಗೆ ಎಲ್ಲ ದಾಖಲೆಗಳಿರುತ್ತವೆ. ಆದರೆ, ಬಿ ಖಾತೆಯ ಆಸ್ತಿಗಳು ಅನಧಿಕೃತ. ಆದರೆ, ತೆರಿಗೆ ಕಟ್ಟಬೇಕು. ನೋಂದಣಿ ಮಾಡಿಸಲು ಅವಕಾಶ ಇಲ್ಲ. ಪ್ರತ್ಯೇಕ ರಿಜಿಸ್ಟ್ರಾರ್ ಇರುತ್ತದೆ. ಅದೇ ವ್ಯವಸ್ಥೆಯನ್ನೇ ಹೊಸ ಕಾಯ್ದೆಯ ಮೂಲಕ ತರಲಾಗುತ್ತಿದೆ.
ಸಚಿವ ಸಂಪುಟ ಉಪ ಸಮಿತಿ ಇನ್ನೊಂದೆರಡು ಸಭೆಗಳಲ್ಲಿ ಪರಿಷ್ಕರಣೆಯನ್ನು ಅಂತಿಮ ಮಾಡಲಿದೆ. ಆ ನಂತರ ಸಚಿವ ಸಂಪುಟಕ್ಕೆ ಮಂಡಿಸಿ ಒಪ್ಪಿಗೆ ಪಡೆದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
