ಮಂಡ್ಯ:ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದ ಎಂ. ಕೆ. ಲಾಡ್ಜ್​ನಲ್ಲಿ ಮಂಗಳವಾರ ಮಹಿಳೆಯೊಬ್ಬರನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ನಗರದ ಕನಕಗಿರಿ ನಿವಾಸಿ ಜ್ಯೋತಿ (29) ಕೊಲೆಯಾದವರು. ಇವರು ಮಂಗಳವಾರ ಬೆಳಗ್ಗೆ ತನ್ನ ಚಿಕ್ಕಮ್ಮನ ಮಗಳ ಪತಿ, ಆರೋಪಿ ಅನಿಲ್​ರೊಂದಿಗೆ ಪಟ್ಟಣಕ್ಕೆ ಆಗಮಿಸಿ ಕೊಠಡಿ ಪಡೆದಿದ್ದರು. ಮಧ್ಯಾಹ್ನದ ವೇಳೆಗೆ ಅನಿಲ್​ ಕೊಠಡಿ ಬಂದ್​ ಮಾಡಿ ಒಂಟಿಯಾಗಿ ಹೊರಗೆ ಹೋಗುತ್ತಿದ್ದ. ಈ ವೇಳೆ ಪ್ರಶ್ನಿಸಿದ ರೂಂಬಾಯ್​ ಊಟ ತರಲು ತೆರಳುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ ಸಂಜೆಯಾದರೂ ಆತ ಹಿಂತಿರುಗಿ ಬಾರದಿದ್ದರಿಂದ ಅನುಮಾನಗೊಂಡು ಲಾಡ್ಜ್​ ಸಿಬ್ಬಂದಿ ರೂಂ ಬಾಗಿಲು ಒಡೆದು ನೋಡಿದಾಗ ಜ್ಯೋತಿಯ ಕತ್ತು ಸೀಳಿ ಕೊಲೆ ಮಾಡಲಾಗಿತ್ತು.ಇದನ್ನೂ ಓದಿ:VIDEO| ಅಗಲಿದ ಚಿರುವನ್ನು ವಿಡಿಯೋ ಸಂದೇಶದ ಮೂಲಕ ಪರಿಪರಿಯಾಗಿ ಬೇಡಿಕೊಂಡ ಅರ್ಜುನ್​ ಸರ್ಜಾ
ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಅರುಣ್​ನಾಗೇಗೌಡ, ಸಿಪಿಐ ಯೋಗೇಶ್​ ಪಿಎಸ್​ಐಗಳಾದ ಮುದ್ದು ಮಹದೇವ್​, ಗಿರೀಶ್​ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆ ಹಾಕಿದರು. ಮೈಸೂರಿನಿಂದ ಮೃತಳ ಪತಿ ಮರಿಸ್ವಾಮಿ ಎಂಬುವರನ್ನು ಕರೆಸಿ ಮಾಹಿತಿ ಕಲೆ ಹಾಕಿದರು. ಈ ವೇಳೆಗೆ ಮಂಡ್ಯ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಪರುಶುರಾಮ್​, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಖಚಿತ ಮಾಹಿತಿ ಮೇರೆಗೆ ಪೊಲೀಸ್​ ತಂಡ ಆರೋಪಿ ಅನೀಲ್​ನನ್ನು ಹಿಂಬಾಲಿಸಿಕೊಂಡು ಹೋಗಿ ಮೈಸೂರಿನಲ್ಲಿ ಬಂಧಿಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:VIDEO| ಕೆಲ ಖದೀಮರಲ್ಲೂ ದೊಡ್ಡ ಮನಸ್ಸಿದೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ: ನೋಡ್ದಿದ್ರೆ ನಿಮಗೇ ನಷ್ಟ!
ಪ್ರೀತಿಯೇ ಮುಳುವಾಯ್ತು: ಮೂತ್ರ ಕುಡಿಸಿ ಹಲ್ಲೆ- ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eleven =
Remember me
