|ಕೇಶವಮೂರ್ತಿ ವಿ.ಬಿ.ಹುಬ್ಬಳ್ಳಿ
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹಂತಕರು ಸೇರಿ 15 ಮಂದಿ ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡಿದ್ದರು. ಅದಕ್ಕೆ ‘ಸಿಜಿ ಪರಿವಾರ ಮೋಸ ಹೋದವರ ಸಂಘ’ ಎಂದು ನಾಮಕರಣ ಮಾಡಿದ್ದರು ಎಂಬ ಅಂಶ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಗುರೂಜಿ ಕೆಲಸದಿಂದ ಬಿಡಿಸಿದ್ದಕ್ಕೆ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಅಸಮಾಧಾನಗೊಂಡಿದ್ದರು. ಈ ನಡುವೆ ಕೆಲ ವರ್ಷಗಳಿಂದ ಗುರೂಜಿ ಕೆಲವರನ್ನು ಸಂಸ್ಥೆಯಿಂದ ಹೊರಗೆ ಹಾಕಿದ್ದರು. ಅವರೂ ಕೂಡ ಗುರೂಜಿ ಮೇಲೆ ಅಸಮಾಧಾನ ಹೊಂದಿದ್ದರು. ಅಂತಹ ಸುಮಾರು 15 ಜನ ಸೇರಿಕೊಂಡು ಗ್ರೂಪ್ ರಚಿಸಿಕೊಂಡಿದ್ದರು. ಇದಕ್ಕೆ ಮಹಾಂತೇಶ ಕೂಡ ಅಡ್ಮಿನ್ ಇದ್ದನಂತೆ.
ಗ್ರೂಪ್​ನಲ್ಲಿರುವ ಕೆಲವರ ಹೆಸರಲ್ಲೂ ಗುರೂಜಿ ಆಸ್ತಿ ನೋಂದಾಯಿಸಿದ್ದರು. ಅವರಿಂದ ಆ ಆಸ್ತಿ ವಾಪಸ್ ಪಡೆದು ಕೆಲಸದಿಂದ ಬಿಡಿಸಿದ್ದರು. ಇದೇ ಕಾರಣಕ್ಕೆ ಗ್ರೂಪ್​ನಲ್ಲಿ ಹಲವು ಬಾರಿ ಮಹಾಂತೇಶ ಸೇರಿ ಇತರರು ಗುರೂಜಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಮುಂಬೈ, ಗುಜರಾತ್​ನಿಂದ ಚಾಕು ಖರೀದಿ: ಸರಳ ವಾಸ್ತು ಸಂಸ್ಥೆಯಲ್ಲಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ವೇಳೆ 2014ರಲ್ಲೇ ಮಹಾಂತೇಶ ಚಾಕು ಖರೀದಿಸಿದ್ದ. ಮಂಜುನಾಥ ಗುಜರಾತ್​ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಾಕು ಖರೀದಿಸಿದ್ದ. ಮಹಾಂತೇಶನ ಚಾಕು ಮುಂಭಾಗದಲ್ಲಿ ಡ್ರ್ಯಾಗರ್ ಹೋಲುತ್ತಿತ್ತು.
ಹಲವು ಬಾರಿ ಮುನ್ಸೂಚನೆ:ಗುರೂಜಿ ಹತ್ಯೆಗೂ ಮುನ್ನ ಮಹಾಂತೇಶ ಹಲವು ಬಾರಿ ಹತ್ಯೆಯ ಮುನ್ಸೂಚನೆ ನೀಡಿದ್ದ. ಗುರೂಜಿ ವಿರುದ್ಧ ಇದ್ದ ಅಸಮಾಧಾನವನ್ನು ಹೊರಗೆ ಹಾಕಿದ್ದ. ಗುರೂಜಿ ಹತ್ಯೆಗೂ ಮುನ್ನಾ ದಿನ ಗುರೂಜಿ ಜತೆ ವಾಗ್ವಾದ ನಡೆಸಿದ್ದ. ಹೀಗಿದ್ದರೂ ಗುರೂಜಿ ಭದ್ರತೆ ಪಡೆಯದೇ ಏಕಾಂಗಿಯಾಗಿ ಓಡಾಡಿಕೊಂಡಿದ್ದದ್ದೇ ಅವರ ಹತ್ಯೆಗೆ ಸಹಕಾರಿಯಾಯಿತೇ ಎಂಬ ಪ್ರಶ್ನೆ ಮೂಡುತ್ತಿದೆ.
ನಾಳೆ ಕೋರ್ಟ್​ಗೆ ಹಾಜರು:ಗುರೂಜಿ ಹತ್ಯೆ ನಡೆದ ದಿನವೇ (ಜು.5ರಂದು) ಪೊಲೀಸರು ರಾಮದುರ್ಗ ಬಳಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯ 6 ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು. ಸೋಮವಾರ ಈ ಅವಧಿ ಮುಕ್ತಾಯವಾಗಲಿದೆ. ಹಾಗಾಗಿ, ಮಂಗಳವಾರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ವರ್ಣರಂಜಿತ ಕೆಆರ್​ಎಸ್​: ಬಣ್ಣಗಳಿಂದ ಕಂಗೊಳಿಸುತ್ತಿರುವ ಕನ್ನಂಬಾಡಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
