ಚಾಮರಾಜನಗರ:ಪೊಲೀಸ್ ಜೀಪ್​ನಿಂದ ಬಿದ್ದು ಆರೋಪಿ ಸಾವು ಪ್ರಕರಣದಲ್ಲಿ ಮೂವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಿಪಿಐ ಶಿವಮಾದಯ್ಯ, ಎಸ್ಐ ಮಾದೇಗೌಡ, ಪೊಲೀಸ್ ಕಾನ್ಸ್​ಟೇಬಲ್ ಸೋಮಣ್ಣ ವಿರುದ್ಧ ದೂರು ನೀಡಲಾಗಿದೆ. ಪೊಲೀಸರು ನನ್ನ ಮಗನನ್ನು ಹಿಂಸಿಸಿ ಕೊಂದಿದ್ದಾರೆ ಎಂದು ಆರೋಪಿಸಿ ಮೃತ ನಿಂಗರಾಜು ಅವರ ತಾಯಿ ಮಹದೇವಮ್ಮ ಯಳಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಯಳಂದೂರಿನ ಕುಂತೂರು ಮೋಳೆಯ ನಿಂಗರಾಜು ವಿರುದ್ಧ ಮಾಂಬಳ್ಳಿ ಠಾಣೆಯಲ್ಲಿ ಅಪ್ರಾಪ್ತೆ ಅಪಹರಣ ಕೇಸ್ ದಾಖಲಾಗಿತ್ತು. ವಿಚಾರಣೆಗಾಗಿ ನಿಂಗರಾಜುನನ್ನು ಪೊಲೀಸರು ಠಾಣೆಗೆ ನಿನ್ನೆ(ಮಂಗಳವಾರ) ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಜೀಪ್​ನಿಂದ ಜಿಗಿದ ನಿಂಗರಾಜುಗೆ ತೀವ್ರ ತಲೆಗೆ ಪೆಟ್ಟಾಗಿ ಮೃತಪಟ್ಟ ಎನ್ನಲಾಗಿದೆ.
ಮಗ ನಿಂಗರಾಜು ಸಾವಿಗೆ ಪೊಲೀಸರೇ ಕಾರಣವೆಂದು ಆರೋಪಿಸಿ ಮಂಗಳವಾರ ರಾತ್ರಿ ಯಳಂದೂರು ಠಾಣೆ ಬಳಿ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು, ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ನಂತರ ಕುಟುಂಬಸ್ಥರು ಪೊಲೀಸರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನನ್ವಯ ಮೂವರು ಪೊಲೀಸರ ವಿರುದ್ಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ಸ್ಕೂಲ್ ಬ್ಯಾಗ್‌ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಸಿಗರೇಟ್‌, ವೈಟ್‌ನರ್‌ ಪತ್ತೆ! ಬೆಂಗಳೂರಲ್ಲಿ ಆಘಾತಕಾರಿ ಪ್ರಕರಣ ಬಯಲು
ಕೆಲಸ ಕೊಟ್ಟ ಮಾಲೀಕನ ಜತೆ ಲವ್ವಿಡವ್ವಿ! ಮಂಚ ಹಂಚಿಕೊಂಡ ಬಳಿಕ ಈಕೆ ಕೊಟ್ಟ ಕಾಟ ಅಷ್ಟಿಷ್ಟಲ್ಲ… ಬೆಂಗ್ಳೂರಿನ ಬಟ್ಟೆ ವ್ಯಾಪಾರಿಯ ಕಣ್ಣೀರ ಕಥೆ ಇದು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seventeen =
Remember me