ಬೆಂಗಳೂರು:ಫೇಸ್​ಬುಕ್​ನಲ್ಲಿ ಇಸ್ಲಾಂ ಧರ್ಮಗುರುವಿನ ಬಗ್ಗೆ ಅವಹೇಳನಕಾರಿ ಪೋಸ್ಟ್​ ಹಾಕಿದ್ದ ಅಳಿಯ(ನವೀನ್)​ನನ್ನು ಸೇಫ್​ ಮಾಡಿದ್ದು ಮಾವ(ಅಖಂಡ ಶ್ರೀನಿವಾಸ ಮೂರ್ತಿ) ಎಂಬ ಅಂಶ ಪೊಲೀಸ್​ ತನಿಖೆಯಲ್ಲಿ ಗೊತ್ತಾಗಿದೆ.
ಫೇಸ್​ಬುಕ್​ನಲ್ಲಿ ನವೀನ್ ಅವಹೇಳನಕಾರಿ ಕಮೆಂಟ್​ ಹಾಕುತ್ತಿದ್ದಂತೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಕರೆಗಳು ಬಂದಿವೆ. ಕೂಡಲೇ ಪೋಸ್ಟ್ ಡಿಲೀಟ್ ಮಾಡುವಂತೆ ನವೀನ್​ಗೆ ತಾಕೀತು ಮಾಡಿದ್ದ ಶಾಸಕರು, ಮೂರು ಬಾರಿ ಅಳಿಯನಿಗೆ ಕರೆ ಮಾಡಿ ಮನೆಯಿಂದ ತಪ್ಪಿಸಿಕೊಳ್ಳುವಂತೆ ಸೂಚನೆ‌ ನೀಡಿದ್ದರು. ಅಲ್ಲದೆ ಅಲ್ಲಿಂದ ನಿರ್ದಿಷ್ಟ ಜಾಗಕ್ಕೆ ಹೋಗುವಂತೆಯೂ ತಿಳಿಸಿದ್ದರು. ಬಳಿಕ ಪೊಲೀಸರಿಗೆ ಕರೆ ಮಾಡಿ ನವೀನ್ ಎಲ್ಲಿದ್ದಾನೆಂದು ಮಾಹಿತಿ ನೀಡಿದ ಶಾಸಕರು, ಆತನನ್ನು ಕೂಡಲೇ ಅರೆಸ್ಟ್ ಮಾಡುವಂತೆ ಸೂಚಿಸಿದ್ದರು. ಅಳಿಯ ಹೊರಗೆ ಇರುವುದಕ್ಕಿಂತ ಪೊಲೀಸರ ಕಸ್ಟಡಿ ಸೇಫ್ ಅನ್ನೋದು ಶಾಸಕರಿಗೆ ಗೊತ್ತಿತ್ತು. ಇಷ್ಟೆಲ್ಲ ಮಾಡಿದ್ರೂ ಅಖಂಡ ಶ್ರೀನಿವಾಸ್ ಮೂರ್ತಿ ಮಾತ್ರ ‘ಅಳಿಯನಿಗೂ- ನನಗೂ ಸಂಬಂಧವಿಲ್ಲ’ ಎನ್ನುತ್ತಿದ್ದಾರೆ.
ಇದನ್ನೂ ಓದಿರಿಡಿಜೆ ಹಳ್ಳಿ ಗಲಭೆ: ಪೊಲೀಸ್​ ತನಿಖೆಯಲ್ಲಿ ಬಯಲಾಯ್ತು ನವೀನ್ ರಹಸ್ಯ
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ನವೀನ್​ ಫೇಸ್​ಬುಕ್​ನಲ್ಲಿ ಹಾಕಿದ್ದ ಇಸ್ಲಾಂ ಧರ್ಮಗುರುವಿನ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದನ್ನೇ ನೆಪಮಾಡಿಕೊಂಡ ಪುಂಡರು ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿ ಪೊಲೀಸ್​ ಠಾಣೆ, ಶಾಸಕರ ನಿವಾಸ, ಕಂಡ ಕಂಡ ವಾಹನಕ್ಕೆಲ್ಲ ಬೆಂಕಿ ಇಟ್ಟು ಗಲಭೆ ಸೃಷ್ಟಿಸಿದ್ದರು.
ನವೀನ್​ನನ್ನು ಅರೆಸ್ಟ್ ಮಾಡಿದ್ದ ಪೊಲೀಸರು ಆತನನ್ನ ಯಾರಿಗೂ ತಿಳಿಯದ ಜಾಗದಲ್ಲಿ ಇಟ್ಟಿದ್ರು. ಆಡುಗೋಡಿಯ ವಿಚಾರಣಾ ಕೋಣೆಯಲ್ಲಿದ್ದ ನವೀನ್​ಗೆ ಹೊರಗೆ ಏನಾಗ್ತಿದೆ ಅನ್ನೋ ಮಾಹಿತಿಯೇ ಇರಲಿಲ್ಲ. ನವೀನ್​ನನ್ನು ಆತನ ಮನೆಗೆ ಮಹಜರ್​ಗೆ ಕರೆತರುವ ತನಕ ಹೊರ‌ಜಗತ್ತಿನ‌ ಮಾಹಿತಿ ಇರಲಿಲ್ಲ. ಸುಟ್ಟು ಕರಕಲಾಗಿದ್ದ ಮನೆಯನ್ನ ಕಂಡ ಆತ ಬಿಕ್ಕಿಬಿಕ್ಕಿ ಅತ್ತಿದ್ದ. ಆ ಒಂದು ಪೋಸ್ಟ್ ಇಂತಹ ದೊಡ್ಡ ಆಘಾತಕ್ಕೆ ಕಾರಣ ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಕಣ್ಣೀರು ಸುರಿಸಿದ್ದ.
ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
