ಬೆಂಗಳೂರು: ನಗರದ ಡಿ.ಜೆ ಹಳ್ಳಿ ಗಲಭೆಗೆ ಆರೋಪಿ ನವೀನ್​ ಮಾಡಿರುವ ಫೇಸ್​ಬುಕ್​ ಪೋಸ್ಟ್​ ಕಾರಣ ಎಂಬುದು ಸದ್ಯ ಎಲ್ಲರಿಗೂ ತಿಳಿದಿರುವ ಸಂಗತಿ. ಇದೇ ಪ್ರಕರಣದಲ್ಲಿ ಆರೋಪಿ ನವೀನ್​ ಬಂಧನವೂ ಆಗಿದೆ.
ನವೀನ್​ ಬಂಧನವಾಗಿ 30 ಗಂಟೆಗಳು ಕಳೆದಿವೆ. ಮಂಗಳವಾರ ರಾತ್ರಿಯೇ ಆತನ ಬಂಧವಾಗಿತ್ತು. ಇದೀಗ 15 ಗಂಟೆಗಳ ಹಿಂದೆ ನವೀನ್​ ಫೇಸ್​ಬುಕ್​ನಿಂದ ಮತ್ತೊಂದು ಪೋಸ್ಟ್​ ಶೇರ್​ ಆಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಅವರು ಹಿಂದೂ ದೇವರ ಬಗ್ಗೆ ವಾಟ್ಸಪ್ ಮಾಡಿದ್ದರೆನ್ನಲಾದ ಸುದ್ದಿಯು ನವೀನ್​ ಫೇಸ್​ಬುಕ್​ನಲ್ಲಿ ಕಳೆದ 15 ಗಂಟೆಗಳ ಹಿಂದೆ​ ಶೇರ್ ಆಗಿದೆ.
ಆದರೆ, ಪೊಲೀಸ್​ ವಶದಲ್ಲಿರುವ ನವೀನ್​, ತನ್ನ ಮೊಬೈಲ್​ ಕಳೆದುಹೋಗಿದೆ ಎಂದು ಮೊನ್ನೆಯಿಂದಲೂ ಪೊಲೀಸರಿಗೆ ಹೇಳಿಕೆ ನೀಡುತ್ತಿದ್ದಾನೆ. ಇದಕ್ಕೂ ಮುನ್ನ ತನ್ನ ಫೇಸ್​ಬುಕ್​ ಅನ್ನು ಯಾರೋ ಹ್ಯಾಕ್​ ಮಾಡಿದ್ದಾರೆ ಎಂದು ನವೀನ್​ ಆರೋಪಿಸಿದ್ದರು. ಇದೀಗ ಮತ್ತೊಂದು ಪೋಸ್ಟ್​ ಬಂದಿರುವುದು ಅನುಮಾನದ ಹೊಗೆಯಾಡುವಂತಿದೆ.(ದಿಗ್ವಿಜಯ ನ್ಯೂಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fifteen =
Remember me
