ಕೊಪ್ಪಳ:ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ಮೂವರ ನಿಗೂಢ‌ ಸಾವು ಪ್ರಕರಣ ಭೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಯಾದ ವಸಂತಾಳ ಮಾಜಿ ಪ್ರಿಯಕರ ಹೊಸಪೇಟೆ ನಗರದ ಆಸೀಫ್ ಬಂಧಿತ ಆರೋಪಿ.
ಇದನ್ನೂ ಓದಿ:ಪ್ರಧಾನಿ ಮೋದಿ ಫೋನ್ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಬಹುದಿತ್ತು: ನವೀನ್ ಪಟ್ನಾಯಕ್ ತಿರುಗೇಟು
ವಸಂತಾ ಹಾಗೂ ಆಸೀಫ್ ನಡುವಿನ ಸಂಬಂಧ ಹಾಗೂ ಆಸೀಫ್​ನ ತಮ್ಮ ಆರೀಫ್ ನನ್ನು ವಸಂತಾ ಎರಡನೇ ಮದುವೆ ಆಗಿದ್ದೇ ಕೊಲೆಗೆ ಮುಖ್ಯ ಕಾರಣ. ವಸಂತಾ ಮೊದಲು ಹುಲಿಗಿ ಗ್ರಾಮದ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಇದನ್ನು ಒಪ್ಪದ ಪಾಲಕರು ಆಂಧ್ರ ಮೂಲದ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದರು. ಕೆಲ ವರ್ಷಗಳ ಬಳಿಕ ವಿಚ್ಛೇಧನ ಪಡೆದ ವಸಂತಾ ಹೊಸಲಿಂಗಾಪುರದ ತಾಯಿ ರಾಜೇಶ್ವರಿ ಹಾಗೂ ಮಗ ಸಾಯಿಧರ್ಮತೇಜ ಜತೆ ವಾಸವಿದ್ದಳು.

ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೀಫ್ ಹಾಗೂ ಆಸೀಫ್ ಇಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳೆನ್ನಲಾಗಿದೆ. ನಾಲ್ಕು ತಿಂಗಳ ಹಿಂದೆ ಆರೀಫ್ ನೊಂದಿಗೆ ವಸಂತಾ ಎರಡನೇ ಮದುವೆ ಆಗಿದ್ದಾಳೆ. ಇದರಿಂದ ಆರೀಫ್ ಮೊದಲನೆ ಸಂಸಾರದಲ್ಲಿ ತೊಂದರೆ ಉಂಟಾಗಿದೆ ಎಂದು ಆಸೀಫ್ ಆಗಾಗ ವಸಂತಾ ಹಾಗೂ ಈಕೆಯ ತಾಯಿ ರಾಜೇಶ್ವರಿಯೊಡನೆ ಜಗಳ ಆಡುತ್ತಿದ್ದ.

ಮಂಗಳವಾರ ರಾತ್ರಿ ಹೊಸಪೇಟೆಯಿಂದ ಹೊಸಲಿಂಗಾಪುರಕ್ಕೆ ಬಂದ ಆಸೀಫ್ ಮೊದಲು ರಾಜೇಶ್ಚರಿಯೊಂದಿಗೆ ಜಗಳ ಮಾಡಿ ಕೊಲೆ ಮಾಡಿದ್ದಾನೆ. ಈ ವೇಳೆ ಅಡ್ಡ ಬಂದ ರಾಜೇಶ್ವರಿ ಮೊಮ್ಮಗ ಐದು ವರ್ಷದ ಸಾಯಿಧರ್ಮತೇಜನನ್ನೂ ಸಾಯಿಸಿದ್ದಾನೆ. ಈ ವೇಳೆ ಹೊರ ಹೋಗಿದ್ದ ವಸಂತಾ ಮರಳಿ ಮನೆಗೆ ಬಂದಿದ್ದಾಳೆ. ಆಕೆಯನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ಸಾಕ್ಷ್ಯನಾಶ ಮಾಡಿ ಪರಾರಿಯಾಗಿದ್ದ ಎಂದು ಬುಧವಾರ ಎಸ್ಪಿ ಯಶೋದಾ ವಂಟಗೋಡಿ ಸುದ್ದಿಗೋಷ್ಠಿಯಲ್ಲಿ ಪ್ರಕಣದ ವಿವರ ನೀಡಿದರು.
ಹೊಸಲಿಂಗಾಪುರದ‌ ರಾಜೇಶ್ವರಿ (60), ವಸಂತಾ ಕುಮಾರಿ (32) ಹಾಗೂ ವಸಂತಾ ಪುತ್ರ ಐದು ವರ್ಷದ ಸಾಯಿಧರ್ಮತೇಜ ಮಂಗಳವಾರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.  ಸಾವಿನ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ಬೆನ್ನತ್ತಿದ ಪೊಲೀಸರು 24 ಗಂಟೆಯಲ್ಲಿಯೇ ಕೊಲೆ ಎಂದು ಪತ್ತೆ ಹಚ್ಚಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಭೇದಿಸಿದ ತಂಡಕ್ಕೆ ಎಸ್ಪಿ ವಿಶೇಷ ಬಹುಮಾನ ಘೋಷಿಸಿದ್ದಾರೆ.
ಸಹಾಯ ಮಾಡುವ ನೆಪದಲ್ಲಿ ಆಸ್ಪತ್ರೆಯಲ್ಲೇ ಯುವತಿ ಮೇಲೆ ಅತ್ಯಾಚಾರ; ಆರೋಪಿ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 6 =
Remember me
